Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಶಾಸಕರಿಂದ ಪರಿಶಿಷ್ಟ, ಹಿಂದುಳಿದ ವಿರೋಧಿ ಧೋರಣೆ ಕೆಪಿಸಿಸಿ ಎಸ್‌ಟಿ ಘಟಕದ ಕಾರ್ಯದರ್ಶಿ ವೆಂಕಟೇಶ ನಾಯಕ ಆರೋಪ

 ಸುದ್ದಿಮೂಲ ವಾರ್ತೆ ಸಿಂಧನೂರು , ಜ.06:
ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ 125 ಬೋರ್‌ಗಳನ್ನು ಬಿಡುಗಡೆ ಮಾಡಿಸಿದ್ದು, ಅವುಗಳ ರದ್ದಿಗೆ ಶಾಸಕ ಹಂಪನಗೌಡ ಬಾದರ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವದು ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗದ ವಿರೋಧಿ ಧೋರಣೆ ತೋರಿಸುತ್ತದೆ ಎಂದು ಕೆಪಿಸಿಸಿ ಎಸ್‌ಟಿ ವಿಭಾಗದ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ ಆರೋಪಿಸಿದರು.
ಮಂಗಳವಾರ ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾಾತರು ಮೊದಲಿನಿಂದಲೂ ಕಾಂಗ್ರೆೆಸ್ ಬೆಂಬಲಿಸಿತ್ತಾಾ ಬಂದಿದ್ದಾಾರೆ. ರಾಜ್ಯದಲ್ಲಿ ಕಾಂಗ್ರೆೆಸ್ ಅಧಿಕಾರಕ್ಕೆೆ ಬಂದ ನಂತರ ಐದು ಗ್ಯಾಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜೀವನ ಸುಧಾರಣೆ ಮಾಡಿದೆ. ಎಂಎಲ್‌ಸಿ ಬಸನಗೌಡ ಬಾದರ್ಲಿ ಸಾರಥಿ ಯೋಜನೆಯಡಿ ಅನೇಕ ಕಾರುಗಳನ್ನು ಕೊಡಿಸುವ ಮೂಲಕ ಬದುಕು ಕಟ್ಟಿಿಕೊಟ್ಟಿಿದ್ದಾಾರೆ. 125 ರೈತರಿಗೆ ಗಂಗಾ ಕಲ್ಯಾಾಣ ಯೋಜನೆಯಡಿ 125 ಬೋರ್‌ವೆಲ್ ತಂದು, ಕಾರ್ಯಕರ್ತರಿಗೆ ಬೆನ್ನೆೆಲುಬಾಗಿ ನಿಂತಿದ್ದಾಾರೆ ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಅವರು ಈ ಬೋರ್‌ವೆಲ್‌ಗಳ ಲಾನುಭವಿಗಳ ಪಟ್ಟಿಿ ರದ್ದುಪಡಿಸುವಂತೆ ಪತ್ರ ಬರೆದಿರುವದು ಸಂಗತಿ. ಶಾಸಕ ಹಂಪನಗೌಡ ಬಾದರ್ಲಿ ಪರಿಶಿಷ್ಟರ, ಹಿಂದುಳಿದ ವರ್ಗ, ಅಲ್ಪಸಂಖ್ಯಾಾತರ ಮತಗಳನ್ನು ಪಡೆದು ಗೆದ್ದಿದ್ದಾಾರೆ. ಶಾಸಕರಾಗಿ ದುಪ್ಪಟ್ಟು ರೀತಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಯೋಜನೆಗಳು ಲಾನುಭವಿಗಳಿಗೆ ತಲುಪದಂತೆ ಮಾಡಿದ್ದಾಾರೆ. ಇದೇ ಧೋರಣೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಎಸ್ಸಿಿ ಘಟಕದ ಅಧ್ಯಕ್ಷ ಅಮರೇಶ ಗಿರಿಜಾಲಿ, ಮುಖಂಡರಾದ ಈರಣ್ಣ ನಾಯಕ, ಪ್ರಕಾಶ ಸೋಮಲಾಪುರ, ಯುವ ಕಾಂಗ್ರೆೆಸ್ ಅಧ್ಯಕ್ಷ ಹನುಮಂತ ಕರ್ನಿ, ಜೈ ಭೀಮ ಘರ್ಜನೆಯ ಅಧ್ಯಕ್ಷ ನಿರುಪಾದಿ ಸಾಸಲಮರಿ, ತಿಮ್ಮಣ್ಣ ನಾಯಕ, ಸಿದ್ದಪ್ಪ ಸೋಮಲಾಪುರ, ವಿರುಪಣ್ಣ ಚನ್ನಳ್ಳಿಿ, ವೆಂಕಟೇಶ ನಾಯಕ ಪುಲದಿನ್ನಿಿ, ಅಶೋಕ ಗೊರೇಬಾಳ ಹಾಗೂ ಇತರರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ