Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

2022-23 ನೇ ಸಾಲಿಗೆ497848ರೂ ವ್ಯಾಪಾರ ಲಾಭ 

ಸುದ್ದಿಮೂಲ ವಾರ್ತೆ

ದೇವನಹಳ್ಳಿ,ಸೆ.13: ವ್ಯವಸಾಯ ಸೇವಾ ಸಹಕಾರ ಸಂಘ 2022-23ನೇ ಸಾಲಿನಲ್ಲಿ 4,98,848 ಲಕ್ಷ ರೂ. ಲಾಭಾಂಶ ಪಡೆದಿದೆ ಎಂದು ಅರದೇಶಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ರಾಜು ತಿಳಿಸಿದರು.

ಅರದೇಶಹಳ್ಳಿ ವಿ.ಎಸ್.ಎಸ್.ಎನ್ ಸಂಘದ ಆವರಣದಲ್ಲಿ ನಡೆದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಬೇಕಾದ ರಸಗೊಬ್ಬರ, ರಾಸುಗಳಿಗೆ ಪೌಷ್ಠಿಕ ಆಹಾರ ಒದಗಿಸಿ ತಾಲ್ಲೂಕಿನಲ್ಲಿಯೇ ಅತ್ಯುತ್ತಮ ಸಂಘವೆಂದು ಹೆಸರು ಪಡೆದಿದೆ ಎಂದರು.

ಡಿಸಿ ಬ್ಯಾಂಕ್ ನಿದೇರ್ಶಕ ಕಾಮೇನಹಳ್ಳಿ ರಮೇಶ್ ಮಾತನಾಡಿ, ರೈತರಿಂದ ರೈತರಿಗಾಗಿ ರೈತರೇ ಮಾಡಿಕೊಂಡಿರುವ ಸಹಕಾರ ತತ್ವದಡಿಯ ಸಂಘದ ಅಭಿವೃದ್ದಿಗಾಗಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ, ಮತ್ತೆ ಇತರರಿಗೆ ಸಾಲ ನೀಡಲು ಸಹಕಾರಿಯಾಗಲಿದೆ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಹಿಂದಿರುಗಿಸುವ ಮೂಲಕ ಸಂಘವನ್ನು ಏತ್ತರಕ್ಕೇರಿಸಬೇಕು ಎಂದರು.

ಜಿಲ್ಲಾ ಬ್ಯಾಂಕ್ ನಿರ್ದೇಶಕ ಎನ್.ಸೊಣ್ಣಪ್ಪ ಮಾತನಾಡಿ, ರೈತರಿಗೆ ಬೆಳೆಸಾಲ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ರೈತರು ಸಾಲ ಪಡೆದುಕೊಂಡು ಅಭಿವೃದ್ದಿ ಹೊಂದಿ ಬೆಳೆ ಸಲ ಪಡೆದ ರೈತರಿಗೆ ದಾಖಲೆಗಳ ಆದಾರದಲ್ಲಿ 10 ಲಕ್ಷದವರೆಗೂ ಹಸು ಸಾಲ ನೀಡಲಾಗುವುದು. ಇದಕ್ಕೆ ಶೇ. 0.30 ಪೈಸೆ ಬಡ್ಡಿ ಇರುತ್ತದೆ. ಬ್ಯಾಂಕಿನ ಸಾಲ ಕಟ್ಟುವುದು ಪಡೆಯುವುದರ ಮೂಲಕ ವಹಿವಾಟು ನಡೆಸಿದರೆ ನಮ್ಮ ಸಂಘ ಮುನ್ನೆಡಯಲು ಸಾಧ್ಯ ಎಂದರು.

ಈ ವೇಳೆ ಉಪಾಧ್ಯಕ್ಷೆ ಮಾಲ, ಕೆ.ರಾಮಯ್ಯ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಪಿ.ವೆಂಕಟಸ್ವಾಮಿ, ದಾನಿ ಚೇತನಗೌಡ, ನಿರ್ದೇಶಕರುಗಳಾದ ವಿ.ಮುನಿರಾಜು, ವಿ.ರಾಜಣ್ಣ, ಹನುಮಂತೇಗೌಡ, ಎಂ.ನಾರಾಯಣಪ್ಪ, ಮುರುಳಿ, ಆರ್. ಮುನಿಯಪ್ಪ, ಪ್ರವೀಣ್, ಆರ್.ಕವಿತ, ಸಿ.ಪ್ರಕಾಶ್, ಸಿಇಓ ಕೆಸಿ ರವಿಕುಮಾರ್ ಉಪಸ್ಥಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ