Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

261.43 ಕೋಟಿ ರೂ. ಬೆಳೆ ಪರಿಹಾರ ರೈತರ ಖಾತೆಗೆ ಜಮೆ - ಈಶ್ವರ್ ಖಂಡ್ರೆ

 ಸುದ್ದಿಮೂಲ ವಾರ್ತೆ ಬೀದರ್, ಡಿ.21:
ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎ್/ಎಸ್‌ಡಿಆರ್‌ಎ್ ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಸಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಪರಿಹಾರ ಮೊತ್ತ ಸೇರಿ 17 ಹಂತಗಳಲ್ಲಿ ಒಟ್ಟು 186426 ರೈತರಿಗೆ ರೂ. 261.43 ಕೋಟಿ ಪರಿಹಾರ ಜಮೆ ಮಾಡಲಾಗಿರುತ್ತದೆ. 8615 ರೈತರಿಗೆ ತಾಂತ್ರಿಿಕ ಕಾರಣದಿಂದ ಪರಿಹಾರ ಇನ್ನೂ ಬರಬೇಕಿದೆ ಕ್ರಮ ಕೈಗೊಳ್ಳಲಾಗುತ್ತಿಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆೆ ತಿಳಿಸಿದರು.
ರವಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬೆಳೆ ವಿಮೆ ಮತ್ತು ಇನ್ನಿಿತರೆ ವಿಷಯಗಳ ಕುರಿತು ಕರೆದ ಪತ್ರಿಿಕಾಗೋಷ್ಠಿಿಯನ್ನುದ್ದೇಶಿಸಿ ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಎನ್‌ಡಿಆರ್‌ಎ್/ಎಸ್‌ಡಿಆರ್‌ಎ್ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರೀತ 8,500 ರೂ, ನೀರಾವರಿ ಬೆಳೆಗೆ 17,000 ರೂ, ಮತ್ತು ಬಹುವಾರ್ಷಿಕ ಬೆಳೆಗಳಿಗೆ 22,500 ರೂ. ಗಳಂತೆ ಬೆಳೆ ಹಾನಿಯಾದ ರೈತರಿಗೆ 10 ಹಂತಗಳಲ್ಲಿ ಒಟ್ಟು 176382 ರೈತರಿಗೆ 127.16 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಾಂಕ್ ಖಾತೆ ಜಮೆ ಮಾಡಲಾಗಿರುತ್ತದೆ.
ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಹೆಚ್ಚುವರಿ ಪರಿಹಾರ ಮೊತ್ತ 8,500 ರೂ. ಗಳು ಸಹ ಹಂತ ಹಂತವಾರು 07 ಹಂತಗಳಲ್ಲಿ ಒಟ್ಟು 186426 ರೈತರಿಗೆ 134.27 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತದೆ.
ಬೀದರ್ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು ಸೋಯಾಬೀನ್, ತೊಗರಿ, ಉದ್ದು, ಹೆಸರು ಮತ್ತು ಹತ್ತಿಿ ಬೆಳೆಗಳು ಒಟ್ಟು 4,32,825 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚುವರಿಯಾಗಿ ಮಳೆಯಾಗಿ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಮಾಂಜ್ರಾಾ ನದಿಗೆ ಧನೆಗಾಂವ ಆಣೆಕಟಿನಿಂದ ನೀರು ಹರಿಸಿರುವುದರಿಂದ ಪ್ರವಾಹ ಉಂಟಾಗಿ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಒಟ್ಟು ವಿಸ್ತೀರ್ಣ 167202.78 ಹೆಕ್ಟೇರ್ ಪ್ರದೇಶದ ಅಂದಾಜು ರೂ. 143.60 ಕೋಟಿ ಹಾನಿಯಾಗಿರುತ್ತದೆ. ಈ ಹಿನ್ನೆೆಲೆಯಲ್ಲಿ ಬೆಳೆ ಹಾನಿಯಾದ ರೈತರ ಬೆಳೆಗಳನ್ನು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಮಾಡಿ ರೈತರ ವಿವರಗಳನ್ನು ಪರಿಹಾರ ತಂತ್ರಾಾಂಶದಲ್ಲಿ ನಮೂದಿಸಲಾಗಿರುತ್ತದೆ. ರೈತರಿಗೆ ಪರಿಹಾರ ವಿತರಿಸಲು ಅವಶ್ಯಕತೆ ಇರುವ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರಿಗೆ ರೂ. 8,500 ಗಳಂತೆ (2 ಹೆಕ್ಟೇರಗೆ ಸೀಮಿತಗೊಳಿಸಿ) ಹೆಚ್ಚುವರಿಯಾಗಿ ಪರಿಹಾರ ಘೋಷಿಸಲಾಗಿರುತ್ತದೆಂದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುಮಾರು 2,04,235 ಪ್ರಸ್ತಾಾವನೆಗಳನ್ನು ಪಿ.ಎಂ.ಎ್.ಬಿ.ವಾಯ್. ಯೋಜನೆಯಡಿಯಲ್ಲಿ ನೋಂದಾಯಿಸಲಾಗಿದೆ, 41,648 ಹೆಕ್ಟೇರ್ ತೊಗರಿ ಬೆಳೆ ವಿಮೆ ಮಾಡಿದ ಪ್ರದೇಶಕ್ಕೆೆ 30,712 ರೈತರು ಹೆಚ್ಚಿಿ ನ ಮಳೆಯಿಂದಾಗಿ ಬೆಳೆ ನಷ್ಟದ ಕುರಿತು ತೊಗರಿ ಬೆಳೆಗೆ ವಿಮೆ ಮಾಡಿದ ರೈತರಿಗೆ ಅನುಕೂಲವಾಗುವಂತೆ ಬೆಳೆ ನಷ್ಟದ ಬಗ್ಗೆೆ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿಿತಿ (ಐಈ ಖಉಅಖಘೆ ಅಈ್ಖಉ್ಕಖಐ್ಗ) ಯಡಿ 78,274 ವಿಮೆ ಪ್ರಸ್ತಾಾವನೆಗಳಿಗೆ ಅಂದಾಜು ರೂ. 36.74 ಕೋಟಿಗಳ ಪರಿಹಾರವನ್ನು ರೈತರಿಗೆ ವರ್ಗಾಯಿಸಲಾಗಿದೆ ಹಾಗೂ ಸ್ಥಳೀಯ ಪ್ರಕೃತಿ ವಿಕೋಪದಡಿ ಬೆಳೆ ನಷ್ಟದ ಕುರಿತು 88,886 ದೂರು ದಾಖಲಿಸಿದ ರೈತರಿಗೆ ಅಂದಾಜು ರೂ. 41.52 ಕೋಟಿ ವಿಮಾ ಪರಿಹಾರವನ್ನು ಜನೆವರಿ ತಿಂಗೊಳಗಾಗಿ ವಿಮಾ ಪರಿಹಾರವನ್ನು ರೈತರಿಗೆ ವರ್ಗಾಯಿಸಲಾಗುವುದು. ಶೀಘ್ರದಲ್ಲೇ ಜಮೆ ಮಾಡಲಾಗುವುದು ಎಂದರು.
ಹಿಂಗಾರು ಹಂಗಾಮಿನಲ್ಲಿ ಇಂದಿನವರೆಗೆ 7752 ವಿಮಾ ಪ್ರಸ್ತಾಾವನೆಗಳ ನೋಂದಣಿಯಾಗಿದ್ದು, ಕಡಲೆ, ಗೋಧಿ ಹಾಗೂ ಜೋಳ ಬೆಳೆಗಳಿಗೆ ಬೆಳೆ ವಿಮೆ ಡಿಸೆಂಬರ್.31 ಕೊನೆಯ ದಿನಾಂಕವಾಗಿರುತ್ತದೆ. ಈ ಬಗ್ಗೆೆ ಜಿಲ್ಲೆಯ ರೈತರ ಮತ್ತು ಸಾರ್ವಜನಿಕರ ಗಮನಕ್ಕೂ ಕೂಡ ತರಲಾಗಿದೆಂದರು.
ಬೆಳೆ ವಿಮೆ ಕಂಪನಿಗಳು ಕಳೆದ 9 ವರ್ಷಗಳಲ್ಲಿ ರಾಜ್ಯದ ಎಷ್ಟು ರೈತರಿಗೆ ಬೆಳೆವಿಮೆ ನೀಡಿದೆ, ರೈತರು ಎಷ್ಟು ವಿಮೆ ಕಟ್ಟಿಿದ್ದಾರೆ, ಖಾಸಗಿ ವಿಮಾ ಕಂಪನಿಗಳು ಎಷ್ಟು ಲಾಭ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆೆ ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕೆಂದರು.
ಬೀದರನ ರೇಷ್ಮೆೆ ಇಲಾಖೆಯ 25 ಎಕರೆ ಜಮೀನಿನಲ್ಲಿ ಭವ್ಯವಾದ 20 ಸಾವಿರ ಜನರ ಸಾರ್ಮಥ್ಯದ ಕ್ರೀಡಾಂಗಣ ಮಳಿಗೆ ನಿರ್ಮಿಸಲಾಗುವುದು, ಇದಕ್ಕೆೆ ಒಂದು ವಾರದೊಳಗೆ ಸರ್ಕಾರಕ್ಕೆೆ ಪ್ರಸ್ತಾಾವನೆ ಕಳಿಸಲಾಗುವುದು. ಸಚಿವ ಸಂಪುಟದಲ್ಲಿ ಮಂಡಿಸಿ ಅನುಮತಿ ಪಡೆದು ಕೆಕೆಆರ್ಡಿಬಿ ಅಡಿ 25 ಕೋಟಿ ಅನುದಾನ ಪಡೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಇತರರು ಉಪಸ್ಥಿಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ