Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಷ್ಟ್ರಮಟ್ಟದ 3ದಿನಗಳ ನಾವೀನ್ಯತೆಯ ಸಿದ್ಧ ಉಡುಪು ಮಾರಾಟ ಉತ್ಸವ ಮೇಳ

 

ಬೆಂಗಳೂರು,ಆ.1; ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ವೈವಿಧ್ಯಮ ಸಿದ್ಧಉಡುಪು ವಲಯದ ಬೃಹತ್ ವ್ಯಾಪರಿ ಮೇಳ ಆರಂಭವಾಗಿದೆ. ಅತ್ಯಾಧುನಿಕ ವಿನ್ಯಾಸ, ನವನವೀನ ಟ್ರೆಂಡ್ ಗಳ ಉಡುಪುಗಳು ವ್ಯಾಪಾರಿಗಳನ್ನು ಕೈ ಬೀಸಿ ಕರೆಯುತ್ತಿದೆ. ಜವಳಿ ಉತ್ಪಾದಕ ವಲಯದ ಬಹುತೇಕ ಬ್ರ್ಯಾಂಡ್ ಗಳು ಇಲ್ಲಿ ಲಭ್ಯವಿದೆ.

ಸಣ್ಣಪುಟ್ಟ ಜವಳಿ ಉತ್ಪಾದಕರಿಂದ ಹಿಡಿದು, ಝೋಲಾ, ರಿಲಯನ್ಸ್ ಮತ್ತಿತರೆ ಬೃಹತ್ ಕಂಪೆನಿಗಳು ತನ್ನ ಮಳಿಗೆಗಳನ್ನು ತೆರೆದಿವೆ. ಪುರುಷರು, ಮಹಿಳೆಯರು, ಮಕ್ಕಳ ಸಿದ್ದ ಉಡುಪುಗಳು ಗಮನ ಸೆಳೆಯುತ್ತಿವೆ. ಆದರೆ ಇಲ್ಲಿ ಮಾರಾಟಕ್ಕೆ ಅವಕಾಶವಿಲ್ಲ. ವ್ಯಾಪಾರಿಗಳು ಹೊಸ ವಿನ್ಯಾಸಗಳನ್ನು ನೋಡಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಜವಳಿ ವಲಯದ ನವೋದ್ಯಮಗಳಿಗೂ ಕೂಡ ತನ್ನ ವ್ಯಾಪಾರ – ವಹಿವಾಟಿಗೆ ವೇದಿಕೆ ಸಿದ್ಧವಾಗಿದೆ.

ಬೆಂಗಳೂರಿನ ಅರಮನೆ ಮೈದಾನದ ಪ್ರಿನ್ಸಸ್ ಶೈನ್ ನಲ್ಲಿ ದಾವಣಗೆರೆಯ ಬಿ..ಎಸ್. ಚೆನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಶಿವಕುಮಾರ್ ಜವಳಿ ಉತ್ಸವ ಉದ್ಘಾಟಿಸಿ ಮಾತನಾಡಿ, ಚಿಲ್ಲರೆ ವ್ಯಾಪಾರಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಎಲ್ಲಾ ಉತ್ಪಾದಕರು ಒಂದೆಡೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೆಂಗಳೂರು ಇಡೀ ದೇಶದಲ್ಲಿ ಸಂಘಟಿತ ಜವಳಿ ತಾಣವಾಗಿ ಮಾರ್ಪಟ್ಟಿದ್ದು, ಜವಳಿ ವ್ಯಾಪಾರದಲ್ಲಿ ಕರ್ನಾಟಕ ಮುಂಚೂಣಿ ಸ್ಥಾನಕ್ಕೇರಲಿದೆ ಎಂದರು.

ಚಿತ್ರನಟಿ ಶರಣ್ಯ ಶೆಟ್ಟಿ ಮಾತನಾಡಿ, ಈಗಿನ ಸಮೂಹದ ಆಸಕ್ತಿಗೆ ಅನುಗುಣವಾಗಿ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಸಂಗ್ರಹವೂ ಅತ್ಯುತ್ತಮವಾಗಿದ್ದು, ದಕ್ಷಿಣ ಮತ್ತು ಉತ್ತರ ಭಾರತದ ಎಲ್ಲಾ ರೀತಿಯ ಉಡುಪುಗಳ ಸಂಗ್ರಹ ಇಲ್ಲಿವೆ ಎಂದರು.

ಮಾತನಾಡಿದ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಸಿಂಘ್ಲಾ, ಇದು ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಉತ್ಸವವಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳ 150 ಕ್ಕೂ ಹೆಚ್ಚು ಹೊಸ ಬ್ರ್ಯಾಂಡ್ ಗಳು, ವಿನ್ಯಾಸಗಳು, ಮದುವೆ, ಸಾಂಪ್ರದಾಯಿಕ ಉಡುಗೆ, ತೊಡುಗೆ, ಔಪಚಾರಿಕ, ಅನೌಪಚಾರಿಕ ವಸ್ತ್ರಗಳು, ಚಳಿಗಾಲದ ಉಡುಪುಗಳ ಪ್ರದರ್ಶನ ಇರಲಿದೆ. ಸೂರತ್, ಜೈಪುರ, ದೆಹಲಿ, ಅಮಹದಾಬಾದ್, ನಾಗ್ಪುರ ಸೇರಿದಂತೆ ಪ್ರಮುಖ ನಗರಗಳ ಜವಳಿ ಉತ್ಪಾದಕರು ಪಾಲ್ಗೊಳ್ಳುತ್ತಿದ್ದಾರೆ. ದೇಸೀಯ ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು, ರಿಲಯನ್ಸ್ ರಿಟೈಲ್ ಪ್ಯಾಷನ್ ಬ್ರ್ಯಾಂಡ್, ಮುಂಬೈನ ಖ್ಯಾತ ಜೋಲಾ ಸೇರಿದಂತೆ ದೇಶದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಕಂಪೆನಿಗಳು ಭಾಗವಹಿಸುತ್ತಿವೆ. 2,500 ಕ್ಕೂ ಹೆಚ್ಚು ಜವಳಿ ವ್ಯಾಪಾರಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, 100 ಕೋಟಿ ಗೂ ಹೆಚ್ಚು ವಹಿವಾಟು ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ, ಜೋಲಾ ಸಿದ್ಧ ಉಡುಪು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಲ್ ಶಾ. ಚಿತ್ರನಟಿ ಶರಣ್ಯ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ, ಜೋಲಾ ಸಿದ್ಧ ಉಡುಪು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಲ್ ಶಾ ಮತ್ತಿತರರು ಉಪಸ್ಥಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ