Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅದ್ದೂರಿಯಾಗಿ ಜರುಗಿದ ಜಾನಪದ ಹಬ್ಬ 

ಸುದ್ದಿಮೂಲವಾರ್ತೆ

ಕೊಪ್ಪಳ,ಆ.19:ಗಿಲ್ಲಿ ದಾಂಡು, ಲಗೋರಿ, ಕುಂಟೆಬಿಲ್ಲೆ, ಆಣೆಕಲ್ಲು, ಬುಗುರಿ, ಕಣ್ಣಾಮುಚ್ಚಾಲೆಯಂತಹ ಗ್ರಾಮೀಣ ಕ್ರೀಡೆಗಳು ಕಣ್ಮನ ಸೆಳೆದವು. ಚಲ್ಲಿದರೂ ಮಲ್ಲಿಗೆಯ. ಅಂದುಳ್ಳ ಅಡಿಗಲ್ಲು.ಏಳಿತಾಲೆ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನ...., ಘಲ್ಲು ಘಲ್ಲೆನುತಾ ಗೆಜ್ಜೆ..... ಹೀಗೆ ಮೂಲ ಜನಪದ ಗೀತೆಗಳ ಗಾಯನ ಹಾಗೂ ದೇಸಿ ಗೀತೆ-ನೃತ್ಯಗಳು ಸರಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಲಗಡದಲ್ಲಿ ಆಯೋಜಿಸಿದ್ದ 'ಜನಪದ ಹಬ್ಬ ಕಾರ್ಯಕ್ರಮದಲ್ಲಿ ಅನುರಣಿಸಿದವು.

ದೇಸಿ ಆಟಗಳು ಮನೋದೈಹಿಕ ವಿಕಾಸಕ್ಕೆ ಕಾರಣವಾಗುತ್ತಿದ್ದವು. ಇಂದಿನ ಆಧುನಿಕ ಕೆಲವೇ ಕೆಲವು ಆಟಗಳ ಭರಾಟೆಯಲ್ಲಿ 'ಗ್ರಾಮೀಣ ಕ್ರೀಡೆಗಳು' ಮರೆಯಾಗುತ್ತಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉಮೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಪದ ಹಬ್ಬ ಕಾರ್ಯಕ್ರಮವು ಮೂರು ವೇದಿಕೆಗಳ ಮೂಲಕ ನೆರವೇರಿತು. ಕಾಲೇಜಿನ ಆವರಣದಲ್ಲಿ ದೇಶಿ ಆಟಗಳ ಸೊಗಡು ಮೂಡಿಬಂದಿತು. ವಿದ್ಯಾರ್ಥಿಗಳು ಹಲವು ದೇಸಿ ಆಟಗಳನ್ನು ಆಡುವುದರ ಮೂಲಕ ನಲಿದು ಸಂಭ್ರಮಿಸಿದರು.

ಎರಡನೇ ವೇದಿಕೆಯಾದ 'ಜನಪದ ಸಂಭ್ರಮ'ದಲ್ಲಿ ಜನಪದ ಹಾಡು, ನೃತ್ಯ, ಕೊರವಂಜಿ ವೇಷಗಳು ನೋಡುಗರ ಕಣ್ಮನ ಸೂರೆಗೊಂಡವು. ಮೂರನೇ ವೇದಿಕೆಯಾದ ದೇಸಿ ಊಟದ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಬೋಧಕರು ತರಹೆವಾರಿ ದೇಸಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಮೊಹರಂ ಹೆಜ್ಜೆಗಳು, ಕೊರವಂಜಿ ನೃತ್ಯ, ಕೋಲಾಟ, ಲಂಬಾಣಿ ನೃತ್ಯಗಳು 'ಜನಪದ ಹಬ್ಬ'ದಲ್ಲಿ ಜನಮನ ಸೂರೆಗೊಂಡವು. ವಿದ್ಯಾರ್ಥಿಗಳೊಟ್ಟಿಗೆ ಪ್ರಾಧ್ಯಾಪಕರೂ ಸಹ ಡೊಳ್ಳು ಬಾರಿಸಿದ್ದು, ಕೊರವಂಜಿ ಭವಿಷ್ಯ ನುಡಿದಿದ್ದು, ದೇಸಿ ಆಟಗಳನ್ನು ಆಡಿದ್ದು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಆಸಕ್ತಿಯನ್ನು ಇಮ್ಮಡಿಗೊಳಿಸಿತು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಇತಿಹಾಸ ವಿಭಾಗ ಹಾಗೂ ಪಾರಂಪರಿಕ ಕೂಟದ ಸಹಯೋಗದಲ್ಲಿ ಪ್ರೊ.ಆಶಾ ಸಿ ಹಾಗೂ ವೆಂಕಟೇಶ್ ನಾಯಕ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ. ಪ್ರಕಾಶಗೌಡ ಎಸ್.ಯು, ಪ್ರೊ.ಅನಿತ ಎಂ, ಪ್ರೊ.ಚಿನ್ನತಾಯಮ್ಮ, ಪ್ರೊ.ಅನಿತ ಎಂ ಪಾಟೀಲ್, ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ ದಿವ್ಯಾ, ಪ್ರಥಮ ದರ್ಜೆ ಸಹಾಯಕರಾದ ಶ್ರೀಧರ್, ಉಪನ್ಯಾಸಕರಾದ ಶ್ರೀ ಜಗದೀಶ ಹೂಗಾರ, ಮಹೇಶ ಕುಮಾರ, ಮಹೆಬೂಬ್ ಪಾಶಾ, ಬಸವರಾಜ ಕಲ್ಮನಿ, ಸಂಗಮೇಶ್ವರ ಚನ್ನಪ್ಪ, ಸೋಮಶೇಖರ, ಇಬ್ರಾಹಿಂ ನದಾಪ್, ಅಮೂಲ್ಯ, ಸಾವಿತ್ರಿ, ನಾಗಪ್ಪ ಉಪಸ್ಥಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ