Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಿಲ್ಲದ ಮುಖಂಡರ ಭೇಟಿ, ಚರ್ಚೆ ; ಆರೋಪ - ಪ್ರತ್ಯಾರೋಪ

ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.06:
ಬ್ಯಾಾನರ್ ಗಲಾಟೆಯ ಗದ್ದಲದ ಸದ್ದು ಅಡಗುತ್ತಿಿದ್ದಂತೆಯೇ ಅದು ವಿಭಿನ್ನ ಸ್ವರೂಪಗಳನ್ನು ಪಡೆದುಕೊಂಡು ತಿರುವುಗಳನ್ನು ಪಡೆಯುತ್ತಲೇ ಇದೆ. ಕಾಂಗ್ರೆೆಸ್ ಪರವಾಗಿ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬಳ್ಳಾಾರಿಗೆ ಭೇಟಿ ನೀಡಿದ್ದು, ಬಿಜೆಪಿ ಪರವಾಗಿ ಕೇಂದ್ರ ಸಚಿವ ಪ್ರಹ್ಲಾಾದ್ ಜೋಷಿ ಮತ್ತು ಮಾಜಿ ಮುಖ್ಯಮಂತ್ರಿಿ ಬಸವರಾಜ ಬೊಮ್ಮಾಾಯಿ ಅವರು ಬಳ್ಳಾಾರಿಗೆ ಬುಧವಾರ ಭೇಟಿ ನೀಡುವ ಸಾಧ್ಯತೆಗಳು ಹೆಚ್ಚಿಿವೆ.
ಈ ಮಧ್ಯೆೆ ಪೊಲೀಸ್ ತನಿಖಾ ತಂಡವು ಶಾಸಕ ಜಿ. ಜನಾರ್ಧನರೆಡ್ಡಿಿ ಅವರ ಮನೆ ಮತ್ತು ಸುತ್ತಲೂ ವಿವಿಧ ರೀತಿಯ ಶೋಧಗಳನ್ನು ನಡೆಸುತ್ತಿಿದೆ. ಬಿ. ಶ್ರೀರಾಮುಲು ಅವರು ಮಾತನಾಡಿ, ‘ಕಾಂಗ್ರೆೆಸ್‌ನಿಂದ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡರೆ, ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವೇ? ಮೃತ ರಾಜಶೇಖರನ ಸಾವಿಗೆ ನ್ಯಾಾಯ ಸಿಗಲಿದೆಯೇ? ಇಡೀ ಪ್ರಕರಣವನ್ನು ಮುಚ್ಚಿಿಹಾಕುವ ಪ್ರಯತ್ನ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗಲಭೆಯ ಸಂದರ್ಭದಲ್ಲಿ ನಡೆದ ನೂಕುನುಗ್ಗಲಿನ ಆವೇಶದಲ್ಲಿ ಖಾರದಪುಡಿ ಮತ್ತು ಕಟ್ಟಿಿಗೆ ಬಳಕೆ ಆಗಿರಬಹುದು. ಗಲಭೆಗೆ ಸಂಬಂಧಿಸಿದಂತೆ ಎರಡೂ ಕಡೆಯವರ ಬಂಧನವಾಗಿದೆ. ಪೊಲೀಸರು ಅಗತ್ಯವಿದ್ದಲ್ಲಿ ನನ್ನನ್ನು ಬಂಧಿಸಲಿ, ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ಗಲಭೆ ನಿಯಂತ್ರಿಿಸಲು - ಜಗಳ ಬಿಡಿಸಲು ಬಂದಿದ್ದ ಜಿ. ಜನಾರ್ಧನರೆಡ್ಡಿಿಯ ಪಕ್ಕದಲ್ಲಿಯೇ ಗುಂಡು ಹಾರಿದೆ ಎಂದರು.
ಶಾಸಕ ಜಿ. ಜನಾರ್ಧನರೆಡ್ಡಿಿ ಅವರು ಮಾತನಾಡಿ, ಡಿ.ಕೆ. ಶಿವಕುಮಾರ್ ಅವರು ಶಾಸಕ ನಾರಾ ಭರತರೆಡ್ಡಿಿಗೆ ಬೆಂಬಲ ಕೊಡಲು ಬರುತ್ತಿಿರುವುದರಿಂದ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲ ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್‌ಗೆ ಕಸಿಯಲು ಏನೂ ಇಲ್ಲ. ಇಂಥಹವರು ರಾಜ್ಯದ ಮುಖ್ಯಮಂತ್ರಿಿ ಆದಲ್ಲಿ ರಾಜ್ಯದ ಪಾಡೇನು? ಎಂದು ಟೀಕಿಸಿದರು.
ಈ ಮಧ್ಯೆೆ, ಕಾಂಗ್ರೆೆಸ್ ಪಾಳೆಯದಿಂದ ಗಲಭೆಯ ಸಂದರ್ಭದಲ್ಲಿ ಖಾರದ ಪುಡಿಯನ್ನು ಎರಚಿತ ಮಹಿಳೆಯರ ಮತ್ತು ಕಟ್ಟಿಿಗೆಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಗಲಭೆ ನಡೆದ ಸ್ಥಳದಲ್ಲಿ ತಿರುಗಾಡಿದ ವೀಡಿಯೋಗಳನ್ನು ಬಿಡುಗಡೆ ಮಾಡಿ, ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸುವ ಕೆಲಸ ನಡೆದಿದೆ.
ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಮತ್ತು ಜಿಲ್ಲೆೆಯ ಎಲ್ಲಾಾ ಶಾಸಕರು, ಸಂಸದರು ಮತ್ತು ಮೇಯರ್ ಅವರ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾಾರೆ. ಜನಪ್ರತಿನಿಧಿಗಳ ಸ್ಥಳದಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರ ಆತ್ಮಸ್ಥೈರ್ಯ ತುಂಬುವ - ವಿಶ್ವಾಾಸ ವೃದ್ಧಿಿಸುವ ವಿಚಾರಗಳನ್ನು ವ್ಯಕ್ತಪಡಿಸಿ, ಬುದ್ಧಿಿವಾದ ಹೇಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ