Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಯಶಸ್ಸಿಿಯಾಗಿ ಜರುಗಿದ ಆರ್.ಎಸ್.ಎಸ್ ಪಥಸಂಚಲನ

ಸುದ್ದಿಮೂಲ ವಾರ್ತೆ ಚಿತ್ತಾಾಪುರ, ನ.16:
ತೀವ್ರ ಕುತೂಹಲ ಮೂಡಿಸಿದ ಆರ್‌ಎಸ್‌ಎಸ್ ಪಥಸಂಚಲನವು ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು 300 ಜನ ಗಣವೇಶಧಾರಿಗಳಿಂದ ಯಶಸ್ಸಿಿಯಾಗಿ ಜರುಗಿತು.
ಪಟ್ಟಣದ ಬಜಾಜ್ ಕಲ್ಯಾಾಣ ಮಂಟಪದಿಂದ ಆರಂಭವಾದ ಪಥಸಂಚಲನವು ಬಸವೇಶ್ವರ ವೃತ್ತ, ಬಸ್ ನಿಲ್ದಾಾಣ ವೃತ್ತ, ಅಂಬೇಡ್ಕರ್‌ವೃತ್ತ, ರಾಘವೇಂದ್ರ ಖಾನಾವಳಿ, ಕೆನರಾ ಬ್ಯಾಾಂಕ್, ತಾಪಂ ಕಚೇರಿ ವೃತ್ತದ ಮೂಲಕ ಬಜಾಜ್ ಕಲ್ಯಾಾಣ ಮಂಟಪಕ್ಕೆೆ ತಲುಪಿತು.
300 ಜನ ಗಣವೇಷಧಾರಿಗಳು ಹಾಗೂ 50 ಜನ ಘೋಷವಾದಕರಿಂದ ಪಥ ಸಂಚಲನ ನಡೆಯಿತು.
ಭಾರತ್ ಮಾತಾಕಿ ಜೈ, ವಂದೇ ಮಾತರಂ ಎಂದು ಸಹಸ್ರಾಾರು ಜನರು ಘೋಷಣೆ ಕೂಗಿದದರು.
ಇದೇ ವೇಳೆ ಪಥಸಂಚಲನದಲ್ಲಿ ಭಾಗವಹಿಸಿದ ಗಣವೇಶಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪಾಾರ್ಚನೆ ಮಾಡಿದರು.
ಪಟ್ಟಣಕ್ಕೆೆ ಸಂಪರ್ಕಿಸುವ ನಾಲ್ಕೂ ರಸ್ತೆೆಗಳಲ್ಲಿ ಪೊಲೀಸರು ನಾಕಾ ಬಂದಿ ಹಾಕಿ, ಪಟ್ಟಣ ಪ್ರವೇಶಿಸುವ ಬಸ್ ಸೇರಿದಂತೆ ಬಹುತೇಕ ಎಲ್ಲ ವಾಹನಗಳನ್ನೂ ತಪಾಸಣೆಗೆ ಒಳಪಡಿಸುತ್ತಿಿದ್ದರು. ಪಥಸಂಚಲನ ಸಾಗುವ ಸಮಯದಲ್ಲಿ ಹತ್ತು ಡ್ರೋೋನ್ ಕ್ಯಾಾಮೆರಾಗಳು ದೃಶ್ಯ ಸೆರೆ ಹಿಡಿದು ನಿಗಾ ವಹಿಸಿದ್ದವು. ಸಮಗ್ರ ದೃಶ್ಯ ಸೆರೆ ಹಿಡಿಯಲೆಂದು ಡ್ರೋೋನ್ ಮುಖಾಂತರ ವಿಡಿಯೊ ಕ್ಯಾಾಮೆರಾಗಳನ್ನು ಬಳಸಿದ್ದರು.
ಈ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ