Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬಿಡಿಎ ಆಯುಕ್ತರಿಂದ ಜೆ.ಪಿ. ನಗರ, ಅಂಜನಾಪುರ ಬಡಾವಣೆಗೆ ಹಠಾತ್ ಭೇಟಿ

ಸುದ್ದಿಮೂಲ ವಾರ್ತೆ

ಬೆಂಗಳೂರು, ಸೆ.16: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ. ಕುಮಾರ ನಾಯಕ ಅವರು ಇಂದು ಜೆ.ಪಿ. ನಗರ 8ನೇ, 9ನೇ ಹಂತ, ಅಂಜನಾಪುರ ಟೌನ್ ಶಿಪ್, ಮುಂದುವರೆದ ಅಂಜನಾಪುರ ಬಡಾವಣೆ ಮತ್ತು ಆಲಹಳ್ಳಿ ಕೆರೆ ಹೊಂದಿಕೊಂಡಂತಿರುವ ಬಡಾವಣೆಗೆ ಹಠಾತ್ ಭೇಟಿ ನೀಡಿ ಪರಿವೀಕ್ಷಿಸಿದರು.

ಜೆ.ಪಿ. ನಗರ 8, 9ನೇ ಹಂತ, ಅಂಜನಾಪುರ ಟೌನ್ ಶಿಪ್, ಮುಂದುವರೆದ ಅಂಜನಾಪುರ ಬಡಾವಣೆ ನಿರ್ಮಾಣ ಮಾಡಲು 1999 ರಿಂದ 2002ರಲ್ಲಿನ ಅಂತಿಮ ಅಧಿಸೂಚನೆಯಂತೆ 3058 ಎಕರೆ 27 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಸದರಿ ಜಮೀನಿನ ಪೈಕಿ 1071 ಎಕರೆ 23 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ವಿವಿಧ ಅಳತೆಯ 14881 ಮಧ್ಯಂತರ ನಿವೇಶನಗಳನ್ನು 2176 ಮೂಲೆ ನಿವೇಶನಗಳನ್ನು ಒಟ್ಟು 17057 ನಿವೇಶನಗಳನ್ನು ರಚಿಸಿ, 39 ಸಿ.ಎ. ನಿವೇಶನಗಳು, 37 ಉದ್ಯಾನವನಗಳು ಪ್ರಾಧಿಕಾರದಿಂದ ನಿರ್ಮಿಸಲಾಗಿದೆ.

ಜೆ.ಪಿ. ನಗರ 9ನೇ ಹಂತ, 7ನೇ ಬ್ಲಾಕ್ ವ್ಯಾಪ್ತಿಗೆ ಒಳಪಡುವ ಆಲಹಳ್ಳಿ ಕೆರೆಯ ಹಿಂಭಾಗದಲ್ಲಿ ಅನುಮೋದಿತ ನಕ್ಷೆಯಂತೆ ಬಡಾವಣೆ ನಿರ್ಮಾಣ ಮಾಡಿ ವಿವಿಧ ಅಳತೆಯ 71 ನಿವೇಶನಗಳನ್ನು ರಚಿಸಲಾಗಿರುತ್ತದೆ. ಈ ನಿವೇಶನವು ರಸ್ತೆ ಮಟ್ಟದಿಂದ ಸುಮಾರು 5 ಅಡಿಗಳಷ್ಟು ಆಳದಲ್ಲಿರುವುದರಿಂದ ಮಳೆ ಬಂದಾಗ ಸಂಪೂರ್ಣ ಜಲಾವೃತವಾಗುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಆಯುಕ್ತರು ಸದರಿ ಪ್ರದೇಶವನ್ನು ಎತ್ತರಿಸಿ, ಮಳೆ ಬಂದಾಗ ಜಲಾವೃತವಾಗುವುದನ್ನು ಸರಿಪಡಿಸುವಂತೆ ಅಭಿಯಂತರ ಸದಸ್ಯರಿಗೆ ಸೂಚಿಸಿದರು.

ಸದರಿ ಬಡಾವಣೆಗಳಲ್ಲಿ ಸುಮಾರು 95.56 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿರುವ ಬಡಾವಣೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ