Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪ್ರಸ್ತುತ ತಲ್ಲಣಗಳ ಅನಾವರಣಗೊಳಿಸಿದ ಯುವ ಕವಿಗೋಷ್ಠಿ

 ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ರಾಯಚೂರು ಜಿಲ್ಲಾಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಕವಿಗೋಷ್ಠಿಿಯಲ್ಲಿ ಜಿಲ್ಲೆೆಯ ಇತಿಹಾಸ, ಬದುಕಿನ ಬಗೆ, ಒಳ್ಳೆೆಯತನದ ಅಗತ್ಯತೆ, ಬೆಲೆ ಏರಿಕೆ, ಹಸಿವು, ಸ್ವಚ್ಛತೆ ಜೊತೆಗೆ ಧರ್ಮದ ಹೆಸರಲ್ಲಿ ಛಿದ್ರಗೊಂಡ ಮನಸುಗಳ ಕುರಿತು ಮೆಲಕು ಹಾಕಿದ ಯುವಕವಿಗಳು ಕಳವಳ ವ್ಯಕ್ತ ಪಡಿಸಿದರು.
ಯುವ ಕವಿ ಮಲ್ಲೇಶ ಭೈರವ್ ಅವರ ಗಜಲ್ ನೆನಪಾಗುತ್ತಿಿವೆ ಕವನ ವಾಚನದ ಮೂಲಕ ಆರಂಭಪಡೆದ ಯುವಕವಿಗೋಷ್ಠಿಿ ಮಧ್ಯಾಾಹ್ನ 1.40ರವರೆಗೆ ಸಾಗಿತು. ನೆನಪಾಗುತ್ತಿಿದೆ ಕವನದಲ್ಲಿ ಭೈರವ್ ಕಾಲದೊಳಗೆ ಸಿಲುಕಿ ಬಣ್ಣದ ಇತಿಹಾಸ, ಧರ್ಮಾಂಧತೆಯಲ್ಲಿ ಒಡೆದ ದೇಶ, ಸೈನಿಕರ ಸ್ಮರಣೆ ಮಾಡಿದರೆ, ಕವಿ ಅಯ್ಯಣ್ಣ ನಾಯಕ ಪಾಮನ ಕಲ್ಲೂರು ಗೋಳು ಯಾರಿಗಿಲ್ಲ ಹೇಳು ಎಂಬ ಕವಿತೆ ಬಡವನಿಗೊಂದು ಇದ್ದವನಿಗೆ ಒಂದು ಬಗೆಯ ಗೋಳುಗಳ ಕಾಡುವಿಕೆಯನ್ನು ಬಿಚ್ಚಿಿಟ್ಟರು. ಗುಂಡಪ್ಪ ರಾಥೋಡ್ ಅವರ ನಾನು ಬದುಕಬೇಕಿದೆ ಎಂಬ ಕವಿತೆ ಬೆಳೆದ ಭತ್ತವನ್ನೇ ನ್ಯಾಾಯಬೆಲೆ ಅಂಗಡಿಯಲ್ಲಿ ಹಾಕಿಸಿಕೊಳ್ಳಲು ಅನ್ನಕ್ಕಾಾಗಿ ಸರತಿ ನಿಲ್ಲುವುದು, ಚಿನ್ನದ ಬೆಲೆ ಗಗನಕ್ಕೇರಿದೆ ಚಿನ್ನದನಾಡೆಂಬ ಖ್ಯಾಾತಿ ಹೇಳಿಕೊಳ್ಳಲಷ್ಟೆೆ ಎಂಬುದನ್ನು ಹೇಳಿದ ಅವರು ಆಸೆ ಬಿಟ್ಟಿಿದ್ದೇನೆ 371 ಜೆ ಕಲಂ ಮೇಲೆ ಆಸೆ ಇದೆ ಬದುಕಲು ಎಂಬುದನ್ನು ಹೇಳಿದರು.
ಮಲ್ಲಪ್ಪ ಮರ್ಚೇಟ್ಹಾಾಳ ನನ್ನೂರು ಮರೆತು ಹೋದ ಮಹಾಸಾಮ್ರಾಾಜ್ಯ ದಲ್ಲಿ ಕೋಟೆ ಕೊತ್ತಲಗಳ ಹಾಳಾದ, ಚಿನ್ನದ ಗಣಿ ಇದ್ದರೂ ನನ್ನವಳ ಕೊರಳಲ್ಲಿಲ್ಲ ಚಿನ್ನದ ಸರ, ಆರ್‌ಟಿಪಿಎಸ್ ಇದ್ದರೂ ಬೆಳಕಿಲ್ಲ ನಮಗೆ ಸರ್ಕಾರ ನಮ್ಮನ್ನು ಮರೆತಿದೆ ಎನ್ನುವ ಆಕ್ರೋೋಶ ತೋರಿಸಿದರೆ, ಚನ್ನಬಸವ ದೇವದುರ್ಗ ಅವರ ಮಾನವ ನಿನ್ನ ಪಯಣ ಎಲ್ಲಿಗೆ ಜಾತಿ ಧರ್ಮದ ಅಮಲಿನ ಬಗ್ಗೆೆ ವಿಸ್ತೃತ ವ್ಯಕ್ತಪಡಿಸಿದರೆ, ರವಿ ರಾಯಚೂರಕರ್ ಅವರ ಮುರಿದ ಬಂದೂಕು ಮತ್ತು ಗಂಜಿ ಎಂಬ ಕವನ ನಮ್ಮ ಪಯಣ ಚಂದ್ರಯಾನದತ್ತಿಿದೆ ಆದರೆ, ಇನ್ನೂ ಜನ ಅನ್ನ ಬೇಯಿಸಿಕೊಳ್ಳಲು, ಜೀವಕ್ಕಾಾಗಿ ಹೋರಾಟ ನಡೆದಿದೆ. ದೇಶ ಒಡೆದು, ದ್ವೇಷ ಬಿತ್ತನೆಯಾಗುತ್ತಿಿದ್ದು ಅಸೂಯೆ ಅಹಂಕಾರದ ಮೆಲಕು ಹಾಕಿದರು.
ಶ್ರಿಿಶೈಲ ದಿನ್ನಿಿ ಒಂದೊತ್ತು ನುಚ್ಚಿಿಲ್ಲ ಗಡಿ ದಾಟಿ ಹಸಿವಿಗೆ ಓಡಾಡಿಸಿದೆ ಅನ್ನಕ್ಕೆೆ ಕನ್ನ ಹಾಕಿದವರ ಬಗ್ಗೆೆ ಆಕ್ರಂದನ ತೋರಿಸಿದರೆ, ಡಾ. ಪ್ರಕಾಶ ಬುದ್ದಿನ್ನಿಿ ಮಡಿ ಯಾವುದು ಮೈಲಿಗೆ ಯಾವುದು ಎಂಬ ಕವಿತೆ ಮೂಲಕ ಪ್ರೀೀತಿ ಪ್ರೇೇಮದಲ್ಲಿ ಬಿದ್ದ ಯುವಕ-ಯುವತಿಯ ನಡುವಿನ ಪ್ರೇೇಮಾನುರಾಗ ಬಿಚ್ಚಿಿ ಟ್ಟರು.
ಶಂಕಸುತ ಮಹಾದೇವ ಎಲ್ಲವೂ ಗಗನ ಕುಸುಮ ಎಂಬ ಕವನ ಬೆಲೆ ಏರಿಕೆ, ಅನಾರೋಗ್ಯದ ಅನಾವರಣ ಮಾಡಿತು, ಬಾಗಲಕೋಟೆಯ ಮುತ್ತು ವಡ್ಡರ್ ಅವರ ಜನ್ಮ ನೀಡಿದ ಜನನಿ ಅಮ್ಮನ ಬಂಧುತ್ವದ ಸುತ್ತ ಸುತ್ತಿಿದರೆ ಬಿಪಿ ಕಟ್ಟಿಿಮನಿ ಅವರ ಮಿಕ್ಕ ಬದುಕಿಗೆ ಏತಕೆ ಸೊಕ್ಕ ಕವಿತೆ ನಮ್ಮೊೊಳಗಿನ ಅಹಂಕಾರ ತೊರೆದರೆ ಬದುಕು ಸುಂದರ ಎಂಬ ಮಾರ್ಗ ವಿವರಿಸಿತು. ಡಾ.ಶಿವರಾಜ್ ಯತಗಲ್ ಅವರ ಬೇಕಾಗಿದ್ದಾರೆ ಕವನ ಸಮಾಜದಲ್ಲಿನ ದ್ವೇಷ ಅಸೂಯೆ ಮೇಲುಕೀಳೆಂಬ ಹೆಣ್ಣು ಗಂಡೆಂಬ ಬೇಧ ಭಾವಗಳ ವಿಷಮದ ಕಾರ್ಮೋಡ ಸಮಾಜದ ಮಧ್ಯೆೆ ಉತ್ತಮರು ಬೇಕಾಗಿದ್ದಾಾರೆ ಎಂದು ಭಿನ್ನವಿಸಿಕೊಂಡಂತಿತ್ತುಘಿ.ದೇವರಾಜ ಜಿಸಿ ಘಂಟಿ ಕವನ ಸೂಳೆ ಕವಿತೆ ಹೊಗಳಿ ಸುಖ ಉಂಡವರು ಮನಸು ಮುಟ್ಟಲಿಲ್ಲ ಹಸಿವು ನೀಗಿಸಲಿಲ್ಲ ಎಂಬ ಹೆಣ್ಣಿಿನ ಆಕ್ರಂದನ ಬಿಚ್ಚಿಿಟ್ಟರು. ಪಂಪಾಪತಿ ಕಣ್ಣೂರು ಹೇಳದಿದ್ದರೆ ಕೇಳದಿದ್ದರೆ ಎಂಬ ಕವನ ಐಐಟಿ, ಏಮ್‌ಸ್‌‌ಘಿ, ಏರೊಪೋರ್ಟ್ ವಂಚಿಸಿದ ಪರಿ ತೆರೆದಿಟ್ಟು ಹೋರಾಟದಲ್ಲಿ ಒಗ್ಗಟ್ಟಿಿನ ಮಹತ್ವ ಸಾರಿದರು. ನರಸಿಂಹಲು ವಡವಾಟಿ ಸಿಂಧೂರ ಕವಿತೆ ಕಠಿಣ ಶಿಕ್ಷೆಯಾಗಬೇಕು ಶೋಷಣೆ ಸಂವಿಧಾನ, ಜನ ಗಣ ಮನ ಹೇಳಿಕೆ ತೀರ ತಿರಸ್ಕಾಾರ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಹೀಗೆ ಯುವ ಕವಿಗಳು ಈ ಸಮಾಜದಲ್ಲಿನ ಶೋಷಣೆ, ದ್ವೇಷ, ಅಸೂಯೆಗಳ ಮಧ್ಯೆೆ ಪ್ರೀತಿ, ಗೌರವ, ವಿಶ್ವಾಾಸದ ಇತಿಮಿತಿ ಮೇರೆಗಳ ಕವನಗಳ ವಾಚನ ಮಾಡಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ