Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬ್ಯಾನರ್ ಗಲಾಟೆಯ ಪರ - ವಿರೋಧಗಳ ಮಧ್ಯೆ ಸಹಜತೆಗೆ ಬಳ್ಳಾರಿ

ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.05:
ಬ್ಯಾಾನರ್ ಗಲಭೆಯ ಹಿನ್ನಲೆಯಲ್ಲಿ ಶಾಸಕ ಜಿ. ಜನಾರ್ಧನರೆಡ್ಡಿಿಯ ಪರವಾಗಿ ಪಕ್ಷ ಮತ್ತು ಮುಖಂಡರು ವೀಡಿಯೋಗಳನ್ನು - ೆಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಬಿಡುವಿಲ್ಲದ ಸುದ್ದಿಗೋಷ್ಠಿಿಗಳನ್ನು ನಡೆಸಿದ ನಂತರ, ಸೋಮವಾರದಿಂದ ಶಾಸಕ ನಾರಾ ಭರತರೆಡ್ಡಿಿಯ ಪರವಾಗಿ ಕಾಂಗ್ರೆೆಸ್ ಬೆಂಬಲಕ್ಕೆೆ ನಿಂತಿದೆ.
ಈ ವಿವಾದದಲ್ಲಿ ಒಂದು ಹಂತದಲ್ಲಿ ಮಿಲ್ಲರಪೇಟೆಯ ದೌಲಾ ಎನ್ನುವ ವ್ಯಕ್ತಿಯ ಜೊತೆಯಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರು ಆಪ್ಯಾಾಯತವಾಗಿ ಮನೆಯಲ್ಲಿ ನಡೆಸಿದ್ದ ಮಾತುಕತೆಯ ತುಣುಕನ್ನು ಸುದ್ದಿಮನೆಗಳಿಗೆ ಬಿಡುಗಡೆ ಮಾಡಿದ್ದ ಜಿ. ಜನಾರ್ಧನರೆಡ್ಡಿಿ, ಭರತರೆಡ್ಡಿಯ ಮನೆಯಲ್ಲಿಯೇ ಮಾಹಿತಿದಾರರನ್ನು ನೇಮಿಸಿಕೊಂಡಿರುವ ಕುರಿತು ಅನೇಕರನ್ನು ಗಾಬರಿಗೊಳಿಸಿದ್ದರು. ಆದರೆ, ಘಟನೆಯ ಹಿನ್ನಲೆಯಲ್ಲಿ ಜಿ. ಜನಾರ್ಧನರೆಡ್ಡಿಿಯ ಮನೆಯಲ್ಲಿದ್ದ ಕಟ್ಟಿಿಗೆಗಳು ಮತ್ತು ಅವುಗಳನ್ನು ಹಿಡಿದು ಗಲಭೆ ನಡೆದ ಸ್ಥಳದಲ್ಲಿ ನಿಂತಿದ್ದ ಜಿ. ಜನಾರ್ಧನರೆಡ್ಡಿಿ ಕಟ್ಟಾಾ ಬೆಂಬಲಿಗರ ೆಟೋಗಳನ್ನು ಕಾಂಗ್ರೆೆಸ್ಸಿಿಗರು ಒಂದೊಂದಾಗಿ ಬಿಡುಗಡೆ ಮಾಡುತ್ತಿಿದ್ದಾಾರೆ.
ಜಿ. ಜನಾರ್ಧನರೆಡ್ಡಿಿಯ ಪರವಾಗಿ ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಾಮಿ, ಮುಖಂಡ ಎಂ.ಪಿ. ರೇಣುಕಾಚಾರ್ಯ, ರೈಲ್ವೆೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಂದ ನಿರಂತರ ಪತ್ರಿಿಕಾಗೋಷ್ಠಿಿಗಳನ್ನು ನಡೆಸಿದ ಬಿಜೆಪಿ, ಇಡೀ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಾಯಾಧೀಶರಿಂದ ತನಿಖೆ ನಡೆಸಲು, ಶಾಸಕ ನಾರಾ ಭರತರೆಡ್ಡಿಿ ಅವರನ್ನು ಬಂಧಿಸಲು ನಿರಂತರ ಆಗ್ರಹಿಸಿ, ಮಾಧ್ಯಮಗಳಲ್ಲಿ ಬಿಡಿಯನ್ನು ಕಾಪಾಡಿಕೊಂಡಿತ್ತು.
ಕಾಂಗ್ರೆೆಸ್ ಘಟನೆಯ ಸತ್ಯಾಾಸತ್ಯತೆಯ ವರದಿ ನೀಡಲು ಎಚ್.ಎಂ. ರೇವಣ್ಣ ನೇತೃತ್ವದ ‘ಸತ್ಯ ಶೋಧನಾ ತಂಡ’ ಬಳ್ಳಾಾರಿಗೆ ಜನವರಿ 3 ರಂದು ಆಗಮಿಸಿ, ಅಧ್ಯಯನ ನಡೆಸಿ - ಕಾಂಗ್ರೆೆಸ್ ಮುಖಂಡರು - ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಹಾಗೂ ವಿವಿಧ ಸಂಘ - ಸಂಸ್ಥೆೆಗಳಿಂದ ಅಭಿಪ್ರಾಾಯಗಳನ್ನು ಸಂಗ್ರಹಿಸಿತ್ತು. ಆದರೆ, ಎಲ್ಲಿಯೂ ಶಾಸಕ ನಾರಾ ಭರತರೆಡ್ಡಿಿ ಅವರನ್ನು ಬೆಂಬಲಿಸಿ - ಟೀಕಿಸಿ ಹೇಳಿಕೆ ನೀಡಿರಲಿಲ್ಲ.
ಸೋಮವಾರದಿಂದ, ಇಡೀ ಪಕ್ಷವು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಬೆಂಬಲಿಸುವ ಸನ್ನಿಿವೇಶ ನಿರ್ಮಾಣವಾಗಿ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬಳ್ಳಾಾರಿಗೆ ಆಗಮಿಸಲಿದ್ದಾಾರೆ. ಗಲಭೆಯಲ್ಲಿ ಜಿ. ಜನಾರ್ಧನರೆಡ್ಡಿಿ ಅವರ ಮನೆಯಲ್ಲಿದ್ದ ಕಟ್ಟಿಿಗೆಯ ಸಾಕ್ಷಿಯನ್ನು - ಕಟ್ಟಿಿಗೆಗಳನ್ನು ಹಿಡಿದು ಗಲಭೆ ನಡೆದ ರಸ್ತೆೆಯಲ್ಲಿ ತಿರುಗಾಡಿದ ಸಾಕ್ಷಿಗಳನ್ನು ಸುದ್ದಿಮನೆಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ವೈರಲ್ ಆಗುತ್ತಿಿವೆ.
‘ಸ್ಥಳ ಪರಿಶೀಲನೆ’
ಬಂದೂಕಿನ ಗುಂಡುಗಳು ಸಿಡಿದ ತೀವ್ರತೆ ಮತ್ತು ನಿಷ್ಕೀಯಗೊಂಡ ಗುಂಡುಗಳು ಇನ್ನಿಿತರೆಗಳ ಕುರಿತು ತನಿಖೆ ನಡೆಸಲು ಹುಬ್ಬಳ್ಳಿಿಯ ಬ್ಯಾಾಲಿಸ್ಟಿಿಕ್ ತಂಡವು ಸೋಮವಾರ ಸ್ಥಳಕ್ಕೆೆ ಭೇಟಿ ನೀಡಿ, ಪರಿಶೀಲಿಸಿದೆ. ಪ್ರಕರಣದಲ್ಲಿ ಬಂಧಿತ 26 ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಾಯಾಲಯಕ್ಕೆೆ ಹಾಜರುಪಡಿಸಿ, ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ