Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ರಾಯಚೂರು ಜಿಲ್ಲಾಾ ಉಸ್ತುವಾರಿ ಸಚಿವರಿಗೆ ಪತ್ರ ಪಾಪಯ್ಯ ಸುರಂಗ ಅಗಲೀಕರಣಕ್ಕೆೆ ಶಾಸಕ ಬಾದರ್ಲಿ ಮನವಿ

ಸುದ್ದಿಮೂಲ ವಾರ್ತೆ ಸಿಂಧನೂರು, ಅ.09:
2025-26 ನೇ ಸಾಲಿನಲ್ಲಿ ತುಂಗಭದ್ರಾಾ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ 29 ರಲ್ಲಿ ಬರುವ ಪಾಪಯ್ಯ ಸುರಂಗ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿಿದ್ದು, ಸುರಂಗ ಅಗಲೀಕರಣ ಮಾಡಲು ಜಲಸಂಪನ್ಮೂಲ ಇಲಾಖೆಗೆ ಶಿಾರಸ್ಸು ಮಾಡುವಂತೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾಾರೆ.
ತುಂಗಭದ್ರಾಾ ಎಡದಂಡೆ ನಾಲೆಯು 225 ಕಿ.ಮೀ ಉದ್ದವಿದ್ದು, 6.31 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಮುಖ್ಯ ಕಾಲುವೆಯಲ್ಲಿ 4200 ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಮೇಲ್ಭಾಾಗದಲ್ಲಿ ರೈತರು ಶೇ.90 ರಷ್ಟು ನೀರು ಬಳಕೆ ಮಾಡಿಕೊಳ್ಳುತ್ತಿಿರುವದರಿಂದ ಸಿಂಧನೂರು, ಮಾನ್ವಿಿ, ಸಿರಿವಾರ ಹಾಗೂ ರಾಯಚೂರು ಕೆಳಭಾಗದ ರೈತರಿಗೆ ಸಮರ್ಪಕ ನೀರು ತಲುಪುತ್ತಿಿಲ್ಲ.
ಜಲಾಶಯದಿಂದ 4200 ಕ್ಯೂಸೆಕ್ ನೀರು ಬಿಟ್ಟರೂ ಪಾಪಯ್ಯ ಸುರಂಗದಲ್ಲಿ ಪ್ರಸ್ತುತ 3600 ಕ್ಯೂಸೆಕ್ ನೀರು ಮಾತ್ರ ಹರಿಯುವ ಸಾಮರ್ಥ್ಯವಿದೆ. ಸುರಂಗದ ಕೆಳಭಾಗದಲ್ಲಿ 5 ಲಕ್ಷದವರೆಗೆ ಭೂಮಿಯಿದ್ದು, ನೀರಿನ ಕೊರತೆಯಾಗುತ್ತಿಿದೆ. ಇದರಿಂದಾಗಿ ಕೆಳ ಭಾಗದ ರೈತರು ರಾಷ್ಟ್ರೀಯ, ರಾಜ್ಯ ಹೆದ್ದಾಾರಿ ಬಂದ್ ಮಾಡುವ ಮೂಲಕ ಹೋರಾಟ ಮಾಡುತ್ತಾಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಜೊತೆಗೆ ಕಾನೂನು ಸುವ್ಯವಸ್ಥೆೆ ಹದಗೆಡುತ್ತದೆ ಎಂದಿದ್ದಾಾರೆ.
ಎಐಬಿಪಿ ಯೋಜನೆಯಡಿಯಲ್ಲಿ 2026 ರ ಜನೆವರಿಯಲ್ಲಿ ಪಾಪಯ್ಯ ಸುರಂಗ ಅಭಿವೃದ್ದಿ ಕೈಗೊಳ್ಳಲು ಈಗಾಗಲೇ ರೂಪುರೇಷೆ ಸಿದ್ದವಾಗಿದೆ. ಜಲಾಶಯದ ಕ್ರಸ್‌ಟ್‌‌ಗಳ ಹೊಸದಾಗಿ ಅಳವಡಿಸುತ್ತಿಿರುದವರಿಂದ ಈ ಬಾರಿ ಒಂದೇ ಬೆಳೆಗೆ ನೀರು ಕೊಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಪಾಪಯ್ಯ ಸುರಂಗ ಅಭಿವೃದ್ದಿ ಮಾಡುವ ಜೊತೆಗೆ ಸುರಂಗ ಅಗಲೀಕರಣ ಮಾಡುವದು ಅಗತ್ಯವಿದೆ. ಅಭಿವೃದ್ದಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸುರಂಗ ಅಗಲೀಕರಣ ಮಾಡುವ ಮೂಲಕ ಕೆಳಭಾಗದ ರೈತರಿಗೆ ಸಮರ್ಪಕ ನೀರು ಒದಗಿಸಬಹುದು. ಸುರಂಗ ಅಗಲೀಕರಣ ಮಾಡುವ ಆಯ್ಕೆೆ ಮಾಡಿಕೊಳ್ಳಲು ಜಲಸಂಪನ್ಮೂಲ ಇಲಾಖೆಗೆ ಶಿಾರಸ್ಸು ಮಾಡುವಂತೆ ಸಚಿವರಿಗೆ ಶಾಸಕ ಬಾದರ್ಲಿ ಕೋರಿದ್ದಾಾರೆ.
ಶಾಸಕ ಹಂಪನಗೌಡ ಬಾದರ್ಲಿ ಪತ್ರಕ್ಕೆೆ ಸ್ಪಂದಿಸಿರುವ ಸಚಿವ ಶರಣಪ್ರಕಾಶ ಪಾಟೀಲ್, ಶಾಸಕರ ಕೋರಿಕೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳಿಗೆ ಶಿಾರಸ್ಸು ಮಾಡಿದ್ದಾಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ