ಬಲೂನ್ ಸ್ಫೋಟ : ಮೂರು ಮಕ್ಕಳಿಗೆ ಗಂಭೀರ ಗಾಯ
ಬೆಂಗಳೂರು, ಅ.1 : ಬರ್ತ್ ಡೇ ಸೆಲೆಬ್ರೇಷನ್ ವೇಳೆ ವಿದ್ಯುತ್ ತಂತಿಗೆ ಹೀಲಿಯಂ ಬಲೂನ್ ತಗುಲಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆ ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ನಡೆದಿದೆ.
ವಿಜಯ್ ಕುಮಾರ್ (44) ಧ್ಯಾನ್(7) , ಸಂಜಯ್(8), ಸೋಹಿಲಾ (3), ಈಶಾನ್ (3) ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರು.
ನಿನ್ನೆ ಹುಟ್ಟಹಬ್ಬ ಆಚರಣೆ ವೇಳೆ ಈ ದುರಂತ ಸಂಭವಿಸಿದೆ. ಇನ್ನೂ, ಹುಟ್ಟುಹಬ್ಬದ ಪ್ರಯುಕ್ತ ಹಿಲೇನಿಯಮ್ ಗ್ಯಾಸ್ ತುಂಬಿಸಿದ್ದ ಬಲೂನ್ಗಳನ್ನು ಬಳಸಲಾಗಿತ್ತು. ಇದೇ ವೇಳೆ ವಿದ್ಯುತ್ ತಂತಿಗೆ ಹಿಲೇನಿಯಮ್ ಬಲೂನ್ ತಗುಲಿ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಅವರನ್ನು ವಿಕ್ಟೋರಿಯಾ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.