Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಸವ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಇಂದು 

ಬಸವ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಇಂದು 



ಜೇವರ್ಗಿ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇಂದು ದಿ.೨೬ ರಂದು ರವಿವಾರ ಸಂಜೆ ೬:೦೦ ಗಂಟೆಗೆ ಶ್ರೀಷಣ್ಮುಖ ಶಿವಯೋಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಬಸವ ಚೇತನ ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ವಿಜಯಕುಮಾರ ಕಲ್ಲಾ ತಿಳಿಸಿದ್ದಾರೆ.

 

ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ.ಅಜಯಸಿಂಗ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ ಅದ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರಾಜಶೇಖರ ಸೀರಿ, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಪಿಎಸ್‌ಐ ಶಿವರಾಜ ಪಾಟೀಲ ಆಗಮಿಸುವರು.

 

ಇದೇ ವೇಳೆ ಸಾಹಿತಿ ಸದಾನಂದ ಪಾಟೀಲ, ಸಿಪಿಐ ರವಿ ನಾಯ್ಕೋಡಿ, ಪ್ರಾಧ್ಯಾಪಕ ಡಾ.ಗಣಪತಿ ಸಿನ್ನೂರ, ಶಿವಪುತ್ರಪ್ಪ ಸಾಹು ಕೋರಿ, ಬಸವಕೇಂದ್ರದ ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ಸಿದ್ದು ಸಾಹು ಅಂಗಡಿ, ಡಾ.ಮಹ್ಮದ್ ಯಾಸೀನ್, ರಾಜು ಪವಾರ, ಪ್ರಾಚಾರ್ಯರಾದ ನವೀದ್ ಅಂಜು ಸಲ್ಮಾ, ಮೋಹಿನುದ್ಧಿನ್ ಇನಾಂದಾರ, ಮಹಿಬೂಬ ಪಟೇಲ, ಶರಣು ಅವರಾದ, ಅರುಣರೆಡ್ಡಿ, ರವಿಚಂದ್ರ ಗುತ್ತೇದಾರ, ಮಹಾನಂದ ಹುಗ್ಗಿ, ರಾಣೋಜಿ ಸುಬೇದಾರ, ಶರಣು ಪಾಟೀಲ, ಸಂಗಣ್ಣ ಹೂಗಾರ, ಸಿದ್ದು ಅಂಕಸದೊಡ್ಡಿ, ಸಿದ್ದು ಮಾವನೂರ ಅವರಿಗೆ ಬಸವ ಚೇತನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಂತರ ಗಾಯಕರಾದ ಇದು ಬ್ಯಾರೆನೆ ಐತಿ ಖ್ಯಾತಿಯ ಸುರೇಶ ಇಂಚಗೇರಿ, ಭರತರಾಜ, ದೀಪಾ ಹಳಿಯಾಳ, ಕವಿತಾ ಚಲಗೇರಿ, ಕಲ್ಯಾಣಿ ಬೆಳಗಾವಿ, ಜೂ.ರವಿಚಂದ್ರ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ