Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗುರು - ಶಿಷ್ಯರ ಸಂಬಂಧವೇ ಕರ್ಪೂರದ ಬೆಳಗು : ಯಶಸ್ವಿ ಪ್ರದರ್ಶನ

ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.24:
ಕರ್ಪೂರದ ಬೆಳಗು ನಾಟಕವು ಕೇವಲ ರಂಗಪ್ರದರ್ಶನ ಆಗಿರದೆ ಆಧ್ಯಾಾತ್ಮಿಿಕ-ಸಾಂಸ್ಕೃತಿಕ ಅನುಭವವಾಗಿ ಪಾತ್ರಗಳಲ್ಲಿ ಅನುಭೂತಿಗೊಳ್ಳಲಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಅವರು ತಿಳಿಸಿದ್ದಾಾರೆ.
ಬಳ್ಳಾಾರಿ ಜಿಲ್ಲಾಾ ಶರಣ ಸಾಹಿತ್ಯ ಪರಿಷತ್ತು , ಶರಣ ಶ್ರೀ ಸಕ್ಕರೆ ಕರಡೀಶ ಸೌಹಾರ್ದ ಪತ್ತಿಿನ ಸಹಕಾರಿ ಸಂಘ ಹಾಗೂ ವೀರಶೈವ ತರುಣ ಸಂಘ ಇವರ ಸಹಯೋಗದಲ್ಲಿ ಸಿದ್ಧರಾಮ ಕಲ್ಮಠ ಅವರು ರಚಿಸಿರುವ, ಮಹಾಂತೇಶ್ ರಾಮದುರ್ಗ ಅವರು ನಿರ್ದೇಶಿಸಿರುವ ‘ಕರ್ಪೂರದ ಬೆಳೆಗು’ವನ್ನು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ಪ್ರದರ್ಶನಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕರ್ಪೂರದ ಬೆಳಗು’ ಕಾಯಕ, ದಾಸೋಹ, ಭಕ್ತಿಿ, ತತ್ವ ಮತ್ತು ಧರ್ಮ - ಆಧ್ಯಾಾತ್ಮಗಳನ್ನು ಒಳಗೊಂಡಿದೆ. 18ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಖ್ಯಾಾತರಾಗಿದ್ದ ಶಿವಶರಣ, ಪವಾಡಪುರುಷ ಮರಿಸ್ವಾಾಮಿಗಳು ಮತ್ತು ಅವರ ಶಿಷ್ಯ ಶರಣ ಸಕ್ಕರೆ ಕರಡೀಶ ಅವರ ಗುರು - ಶಿಷ್ಯ ಸಂಬಂಧವನ್ನು ಸಾಕ್ಷೀಕರಿಸುತ್ತಿಿದೆ ಎಂದರು.
ಕಲಾವಿದರಾದ ಬಿ. ರುದ್ರಯ್ಯ, ಸಿದ್ಧರಾಮ ಕಲ್ಮಠ, ಜೋಳದರಾಶಿ ಬಸವರಾಜ, ವೀರೇಶ ಕರಡಕಲ್, ಕೆ.ಎಂ. ಸಿದ್ದಲಿಂಗಯ್ಯ, ಹೆಚ್.ಎಂ. ಜಗದೀಶಯ್ಯ (ಕೊಳಗಲ್), ಹೆಚ್.ಎಂ. ಅಮರೇಶ್, ಡಾ. ಗಂಗಾಧರ ದುರ್ಗಂ, ಎ.ಎಂ.ಪಿ. ವೀರೇಶಸ್ವಾಾಮಿ, ಎಂ. ದಕ್ಷಿಣಾಮೂರ್ತಿ, ಡಾ. ಬಿ. ಗೋವಿಂದರಾಜು, ಚಾಂದ್‌ಪಾಷಾ, ಸುಬ್ಬಣ್ಣ ಶಿಳ್ಳೆೆಕ್ಯಾಾತರ, ಎಂ. ಮಲ್ಲಿಕಾರ್ಜುನ, ಹಳ್ಳಿಿ ಸಿದ್ದನಗೌಡ, ಶಿವಪುತ್ರ, ಕಿರಣ್ ಕುಮಾರ್, ಅಗಸ್ತ್ಯ ಕಲ್ಮಠ, ಮಲ್ಲಿಕಾರ್ಜುನ ದೇವರಮನೆ ಹಾಗೂ ವೀರೇಶ ಅವರು ತಮ್ಮ ಪಾತ್ರಗಳಲ್ಲಿ ಜೀವತುಂಬಿ, ಪ್ರೇೇಕ್ಷಕರ ಮನದಲ್ಲಿ ಭಕ್ತಿಿಯನ್ನು ಮೂಡಿಸಿದರು.
ಸ್ತ್ರೀ ಕಲಾವಿದರಾದ ಶ್ರೀಮತಿ ಜಯಶ್ರೀ ಪಾಟೀಲ, ಶ್ರೀಮತಿ ಭವಾನಿ (ಹಿರಿಯೂರು), ಶ್ರೀಮತಿ ಲತಾಶ್ರೀ (ದಾವಣಗೆರೆ) ಹಾಗೂ ಕುಮಾರಿ ಆರ್.ಎಂ. ಕೃಪಾ, ಕೆ. ಮನ್ವಿಿತಾ ಅವರ ಅಭಿನಯ ನಾಟಕಕ್ಕೆೆ ಭಾವನಾತ್ಮಕ ಸ್ಪರ್ಶವನ್ನು ನೀಡಿತು.
ಮುದ್ದಟನೂರು ತಿಪ್ಪೇಸ್ವಾಾಮಿ ಅವರು ಹಿನ್ನಲೆ ಗಾಯನ ಮಾಡಿದ್ದು, ಹಾಡುಗಳನ್ನು ಸಂಯೋಜಿಸಿದ ಗಾಯಕ ಕೆ. ವಸಂತಕುಮಾರ್, ಹಿನ್ನೆೆಲೆ ಗಾಯನದಲ್ಲಿ ಪುಟ್ಟರಾಜು ಮತ್ತು ಕು. ತಸ್ಮಯ ಅವರು ಪಾತ್ರಗಳಿಗೆ ಇಂಪನ್ನು ನೀಡಿತ್ತು.
ಅಮರೇಶ ಸಿರಿಗೇರಿ ಮತ್ತು ರಮೇಶ ಅವರು ಧ್ವನಿ ಮತ್ತು ಬೆಳಕನ್ನು ನಿರ್ವಹಿಸಿದರು. ಕೆ.ಹರೀಶ್ ಅವರ ಪ್ರಸಾಧನ - ಮಂಜುನಾಥ ಗೋವಿಂದವಾಡ ಅವರ ರಂಗಸಜ್ಜಿಿಕೆ ಪ್ರೇೇಕ್ಷಕರ ಮನಸೂರೆಗೊಂಡಿತು. ವಿಭೂತಿ ಎರ್ರಿಿಸ್ವಾಾಮಿ ಅವರ ತಂಡದ ಮೇಲ್ವಿಿಚಾರಣೆ ಸಕಾಲಿಕವಾಗಿತ್ತು.
ನಾಟಕವನ್ನು ಸಾವಿರಾರು ಪ್ರೇೇಕ್ಷಕರು ಮೂರು ಗಂಟೆಯ ಕಾಲ ಮೂಕ ವಿಸ್ಮಿಿತರಾಗಿ ವೀಕ್ಷಿಸಿದ್ದು ವಿಶೇಷವಾಗಿತ್ತು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ