Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಳಿ ತೆಗಿಸಿದ್ದು ಮಹಿಳೆಯರಿಗೆ ಅವಮಾನ

ಸುದ್ದಿಮೂಲವಾರ್ತೆ

ಕೊಪ್ಪಳ,ನ.9:ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಳಿ,ಕಾಲುಂಗುರ ತೆಗೆಸಿದ ಪ್ರಕರಣ ಮನಸ್ಸಿಗೆ ನೋವು ತಂದಿದೆ. ಹಿಂದು ಧರ್ಮದ ಮಹಿಳೆಯರಿಗೆ ಇದು ಅವಮಾನ ಮಾಡಿದಂತೆ. ಮುಂದೆ ಇಂಥ ಘಟನೆಗಳು ನಡೆಯಬಾರದು ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ ಹೇಳಿದರು.

ಅವರು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಈ ಪ್ರಕರಣದಿಂದ‌ ಇಡೀ ಮಹಿಳೆಯರಿಗೆ ನೋವಾಗಿದೆ ಇದನ್ನು ಸರಕಾರ ಆದೇಶ ಮಾಡಿದಿಯೊ ಅಥವಾ ಅಧಿಕಾರಿಗಳು ಸರಕಾರದ ಆದೇಶವನ್ನು ನೆಪವಾಗಿಟ್ಟುಕೊಂಡು ಈ ರೀತಿ‌ ಮಾಡುತ್ತಿದ್ದಾರೊ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರಕಳುಹಿಸಬಾರದು ಎಂದು ಒತ್ತಾಯಿಸಿದರು.

ಈಗ ಕೆಲವು ಕಡೆ ಹಿಜಾಬ್ ಪರೀಕ್ಷೆ ಬರೆಯುತ್ತಾರೆ ಅಂದಾದರೆ.ನಾವು ತಾಳಿ,ಕಾಲುಂಗುರ ಹಾಕಿಕೊಂಡು ಪರೀಕ್ಷೆ ಬರೆದರೆ ತಪ್ಪೇನು? ಇದು ಸುಮಂಗಲಿಯರಿಗೆ ಮಾಡಿದ ಅವಮಾನವಾಗಿದೆ.‌ ಮಾಧ್ಯಮಗಳಲ್ಲಿ ತಾಳಿ,ಕಾಲುಂಗರ ತೆಗೆದದ್ದು ಮಾತ್ರ ಬಂದಿದೆ.ಬೇರೆ ಯಾವ ವಿಷಯವೂ ಬಂದಿಲ್ಲ. ಇದರಿಂದಾಗಿ ನಮ್ಮನ್ಮೇ ಟಾರ್ಗೆಟ್ ಮಾಡಿದ್ದಾರೆ ಎಂದಾದಂತಾಗುತ್ತದೆ ಎಂದರು.

ಹೆಣ್ಣುಮಕ್ಕಳು ಎರಡು ಸಂದರ್ಭದಲ್ಲಿ ಮಾತ್ರ ತಾಳಿ,ಕಾಲುಂಗುರ ತೆಗೆಯುತ್ತಾರೆ.

ವಿಧವೆ ಆದಾಗ, ಸ್ಕ್ಯಾನ್ ಸಂದರ್ಭದಲ್ಲಿ ಮಾತ್ರ ಎರಡನ್ನೂ ತೆಗೆಯುತ್ತಾರೆ. ತಾಳಿ ಹಾಗು ಕಾಲುಂಗುರು ಹಾಕಿಕೊಳ್ಳುವದರಿಂದ ಏನು ಸಮಸ್ಯೆ ಎಂಬುವುದು ಯಾರಿಗೂ ಗೊತ್ತಿಲ್ಲ.ಮುಂದಿನ ಪರೀಕ್ಷೆಯಲ್ಲಿ ಇದು ಮರುಕಳಿಸಬಾರದೆಂದ ಎಂ ಎಲ್ ಸಿ ಹೇಮಲತಾ ನಾಯಕ್ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿಯ ಗೀತಾ ಪಾಟೀಲ ಹಾಗು ಶೋಭಾ ನಗರಿ ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ