Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮನರೇಗಾ ಯೋಜನೆ ಮರುಜಾರಿಗೆ ಒತ್ತಾಯಸಿ ಕಾಂಗ್ರೆಸ್ ಪ್ರತಿಭಟನೆ

ಸುದ್ದಿಮೂಲ ವಾರ್ತೆ ಲಿಂಗಸುಗೂರು, ೆ.22:
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ (ಮನರೇಗಾ) ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಹೆಸರು ಬದಲಿಸಿರುವುದು ಖಂಡನೀಯ. ಕೇಂದ್ರ ಸರ್ಕಾರ ಕೂಡಲೇ ಮನರೇಗಾ ಯೋಜನೆ ಮರು ಜಾರಿಗೆ ತರಬೇಕೆಂದು ಒತ್ತಾಾಯಿಸಿ ಬ್ಲಾಾಕ್ ಕಾಂಗ್ರೆೆಸ್ ಸಮಿತಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವಸಾಗರ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಳೆದ 2005ರಲ್ಲಿ ಅಂದಿನ ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಿಸಲು ಗ್ರಾಾಮೀಣ ಭಾಗದ ಬಡ ಕೂಲಿಕಾರ್ಮಿಕರಿಗೆ ಉದ್ಯೋೋಗ ಸೃಷ್ಟಿಿಸುವ ಉದ್ಧೇಶದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋೋಗ ಖಾತ್ರಿಿ ಯೋಜನೆ ಜಾರಿಗೆ ತಂದಿತು. ಗ್ರಾಾಮೀಣ ಪ್ರದೇಶದ ಜನರ ಆರ್ಥಿಕ ಸುಧಾರಣೆ, ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಗ್ರಾಾಮೀಣ ಅಭಿವೃದ್ಧಿಿಗೆ ಆದ್ಯತೆ ನೀಡಲಾಗಿತ್ತು. ಇದರಿಂದ ಪಟ್ಟಣ ಪ್ರದೇಶಗಳಿಗೆ ಜನರು ಗುಳೆ ಹೋಗುವುದನ್ನು ತಪ್ಪಿಿಸುವ ಉದ್ಧೇಶ ಹೊಂದಲಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ (ಮನರೇಗಾ) ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂಬ ಹೆಸರು ಬದಲಿಸಿದೆ. ಸದರಿ ಯೋಜನೆ ಕೇವಲ ಒಂದು ಕಲ್ಯಾಾಣ ಯೋಜನೆಯಾಗಲಿದೆಯೇ ಹೊರತು ಉದ್ಯೋೋಗ ಖಾತ್ರಿಿ ಯೋಜನೆಯತೆ ಗ್ರಾಾಮೀಣ ಜನರಿಗೆ ಉದ್ಯೋೋಗ ಒದಗಿಸಲಾರದು. ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿಿದ್ದು, ಯೋಜನೆಯ ಸಂಪೂರ್ಣ ಸಲತೆ ತಡೆಯುವ ಮತ್ತು ಕೇಂದ್ರ ಸರ್ಕಾರ ತನ್ನ ಜವಾಬ್ದಾಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿಿದೆ.
ಗ್ರಾಾಮೀಣ ಪ್ರದೇಶದ ಜನರ ದುಡಿಯುವ ಹಕ್ಕನ್ನು ಕಿತ್ತಿಿಕೊಳ್ಳುವುದು ನ್ಯಾಾಯ ಸಮ್ಮತವಲ್ಲ. ಸಧ್ಯ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆ ಹಿಂಪಡೆದು ಜನರ ಜೀವನ ಸುಭದ್ರಗೊಳಿಸುವ ಮತ್ತು ಉದ್ಯೋೋಗದ ಖಾತರಿಯ ಹಕ್ಕನ್ನು ನೀಡಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಾಮೀಣ ಉದ್ಯೋೋಗ ಖಾತ್ರಿಿ (ಮನರೇಗಾ) ಯೋಜನೆ ಮರು ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಗೋವಿಂದ ನಾಯಕ, ಯುವ ಘಟಕ ಅಧ್ಯಕ್ಷ ಸಂತೋಷ ಸೊಪ್ಪಿಿಮಠ, ಮುಖಂಡರಾದ ವೆಂಕಟೇಶ ಗುತ್ತೇದಾರ, ಶರಣಬಸವ ಮೇಟಿ, ಸಂಜೀವಕುಮಾರ ಕಂದಗಲ್, ಅಮರೇಶ ಮಡ್ಡಿಿ, ಮಹಾದೇವಯ್ಯ ಗೌಡೂರು, ಶ್ರೀನಿವಾಸ ನಾಯಕ, ಜೀವನ ಬಾಳೇಗೌಡ, ಎಂ.ಡಿ.ರಫೀ, ನಾಗರಡ್ಡೆೆಪ್ಪ, ವೀರಭದ್ರಯ್ಯ ಗುಂತಗೋಳ, ಹಾಜಿಬಾಬು, ಶಿವಶಂಕರಗೌಡ, ಉಮೇಶ ಹುನಕುಂಟಿ, ಸಂಜೀವಪ್ಪ ಹುನಕುಂಟಿ, ವಿಶ್ವಕ್ರಾಾಂತಿ, ಅಮರೇಗೌಡ ಕೋಠಾ, ರಮೇಶ ಗುತ್ತೇದಾರ, ಎಸ್.ಆರ್.ರಸೂಲ್, ತಮ್ಮಣ್ಣ ಗುತ್ತೇದಾರ, ಬಾಲನಗೌಡ, ವಿಜಯಲಕ್ಷ್ಮೀ ದೇಸಾಯಿ, ಶ್ವೇತಾ ಲಾಲಗುಂದಿ ಸೇರಿ ಇತರರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ