Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಕಾಂಗ್ರೆಸ್ ಮೂರನೇ ಪಟ್ಟಿ ರೀಲಿಸ್: ಶೆಟ್ಟರ್ ಕ್ಷೇತ್ರ ಇನ್ನೂ ಖಾಲಿ ಬಿಟ್ಟ ಕಾಂಗ್ರೆಸ್

ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.15: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕೋಲಾರದಿಂದ ಕೊತ್ತುರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಮತ್ತು ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತು. ಈಗ ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಇನ್ನೂ 15 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.

ವಿಶೇಷ ಎಂದರೆ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಬಿಜೆಪಿ ಅವರಿಗೆ ಇನ್ನೂ ಟಿಕೆಟ್ ನೀಡಿಲ್ಲ. ಬದಲಿಗೆ ಯುವಕರಿಗೆ ಅವಕಾಶ ನೀಡುವುಂತೆ ಹೇಳಿರುವುದರಿಂದ ಶೆಟ್ಟರ್ ಮುನಿಸಿಕೊಂಡಿದ್ದಾರೆ. ಈ ಮಧ್ಯೆ ಶೆಟ್ಟರ್‌ ಅವರು ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಮತ್ತು ಈಶ್ವರ್ ಖಂಡ್ರೆ ಪ್ರಸ್ತಾವನೆ ಇಟ್ಟಿದ್ದಾರೆ. ಕಾಂಗ್ರೆಸ್ ಪ್ರಕಟಿಸುರುವ ಮೂರನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವುದು ಕುತೂಹಲ ಮೂಡಿಸಿದೆ.

ಈ ಮಧ್ಯೆ ಬಿಜೆಪಿ ತೊರೆದು ನಿನ್ನೆಯಷ್ಟೇ ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ ಅವರಗೆ ಅಥಣಿ ಟಿಕೆಟ್ ಘೋಷಿಸಲಾಗಿದೆ.



ಕಾಂಗ್ರೆಸ್ 3 ನೇ ಪಟ್ಟಿ ಹೀಗಿದೆ..

ಅಥಣಿ - ಲಕ್ಷ್ಮಣ ಸವದಿ

ರಾಯಬಾಗ - ಎಸ್‌ಸಿ- ಮಹಾವೀರ ಮೊಹಿತ್

ಅರಭಾವಿ - ಅರವಿಂದ ದಳವಾಯಿ

ಬೆಳಗಾವಿ ಉತ್ತರ- ಆಸೀಫ್ ಸೇಠ್​

ಬೆಳಗಾವಿ ದಕ್ಷಿಣ- ಪ್ರಭಾವತಿ ಮಾಸ್ತಮರಡಿ

ತೇರದಾಳ - ಸಿದ್ದಪ್ಪ ರಾಮಪ್ಪ ಕೊಣ್ಣೂರು

ದೇವರ ಹಿಪ್ಪರಗಿ - ಶರಣಪ್ಪ ಟಿ.ಸುಣಗಾರ

ಸಿಂಧಗಿ -ಅಶೋಕ ಎಂ.ಮನಗೂಳಿ

ಗುಲ್ಬರ್ಗಾ ಗ್ರಾಮೀಣ - ರೇವು ನಾಯಕ ಬೆಳಮಗಿ

ಔರಾದ್ ಕ್ಷೇತ್ರ - ಡಾ.ಶಿಂಧೆ ಭೀಮಸೇನ್​ ರಾವ್

ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ

ದೇವದುರ್ಗ-ಎಸ್‌ಟಿ- ಶ್ರೀದೇವಿ ಆರ್.ನಾಯಕ

ಸಿಂಧನೂರು- ಹಂಪನಗೌಡ ಬಾದರ್ಲಿ

ಶಿರಹಟ್ಟಿ-ಎಸ್‌ಸಿ - ಸುಜಾತಾ ಎನ್.ದೊಡ್ಮನಿ

ನವಲಗುಂದ- ಎನ್.ಹೆಚ್.ಕೋನರೆಡ್ಡಿ

ಕುಂದಗೋಳ- ಕುಸುಮಾ ಶಿವಳ್ಳಿ

ಕುಮಟಾ-ನಿವೇದಿತ ಆಳ್ವಾ

ಸಿರುಗುಪ್ಪ ಎಸ್‌ಟಿ - ಬಿ.ಎಂ.ನಾಗರಾಜ್​

ಬಳ್ಳಾರಿ ನಗರ- ನಾರಾ ಭರತ್​ ರೆಡ್ಡಿ

ಜಗಳೂರು-ಎಸ್‌ಟಿ- ಬಿ.ದೇವೇಂದ್ರಪ್ಪ

ಹರಪ್ಪನಹಳ್ಳಿ - ಎನ್.ಕೊಟ್ರೇಶ್​

ಹೊನ್ನಾಳಿ- ಡಿ.ಜಿ.ಶಾಂತನಗೌಡ

ಶಿವಮೊಗ್ಗ ಗ್ರಾಮೀಣ-ಎಸ್‌ಸಿ - ಡಾ.ಶ್ರೀನಿವಾಸ ಕರಿಯಣ್ಣ

ಶಿವಮೊಗ್ಗ- ಹೆಚ್.ಸಿ.ಯೋಗೇಶ್​

ಶಿಕಾರಿಪುರ- ಜಿ.ಬಿ.ಮಾಲ್ತೇಶ್

ಕಾರ್ಕಳ ಕ್ಷೇತ್ರ-ಉದಯ್ ಶೆಟ್ಟಿ

ಮೂಡಿಗೆರೆ-ಎಸ್‌ಸಿ- ನಯನಾ ಜ್ಯೋತಿ ಜವಾರ್

ತರೀಕೆರೆ- ಜಿ.ಹೆಚ್.ಶ್ರೀನಿವಾಸ

ತುಮಕೂರು ಗ್ರಾಮಾಂತರ -ಜಿ.ಹೆಚ್.ಷಣ್ಮುಖಪ್ಪ ಯಾದವ್​

ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್ ಅಯ್ಯರ್​

ಕೋಲಾರ- ಕೊತ್ತೂರು ಮಂಜುನಾಥ

ದಾಸರಹಳ್ಳಿ - ಧನಂಜಯ ಗಂಗಾಧರಯ್ಯ

ಚಿಕ್ಕಪೇಟೆ- ಆರ್.ವಿ.ದೇವರಾಜ್​

ಬೊಮ್ಮನಹಳ್ಳಿ ಕ್ಷೇತ್ರ-ಉಮಾಪತಿ ಶ್ರೀನಿವಾಸಗೌಡ

ಬೆಂಗಳೂರು ದಕ್ಷಿಣ: ಆರ್.ಕೆ.ರಮೇಶ್​

ಚನ್ನಪಟ್ಟಣ -ಎಸ್.ಗಂಗಾಧರ್​

ಮದ್ದೂರು- ಕೆ.ಎಂ.ಉದಯ್​

ಅರಸೀಕೆರೆ - ಕೆ.ಎಂ.ಶಿವಲಿಂಗೇಗೌಡ

ಹಾಸನ - ಬನವಾಸಿ ರಂಗಸ್ವಾಮಿ

ಮಂಗಳೂರು ನಗರ ದಕ್ಷಿಣ - ಜಾನ್​ ರಿಚರ್ಡ್ ಲೋಬೋ

ಪುತ್ತೂರು - ಅಶೋಕ್ ಕುಮಾರ್ ರೈ

ಕೃಷ್ಣರಾಜ - ಎಂ.ಕೆ.ಸೋಮಶೇಖರ್

ಚಾಮರಾಜ - ಕೆ.ಹರೀಶ್ ಗೌಡ

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ