Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮಹಿಷ ದಸರಾ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ

ಸುದ್ದಿಮೂಲ ವಾರ್ತೆ

ಮೈಸೂರು, ಅ.13:ಒಕ್ಕಲಿಗರು ಸಂಸ್ಕೃತಿ ಹೀನರು‌ ಎಂದು ಜರಿದ ಕ್ಷಣದಲ್ಲೇ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಅವರು, ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು ಎಂದು ಹೇಳಿದರು.



ಶುಕ್ರವಾರ ಪುರಭವನದ ಬಳಿ ಮಹಿಷ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ತಮ್ಮ ಭಾಷಣದೂದ್ದಕ್ಕೂ ಹಿಂದು ಧರ್ಮದ ವಿರುದ್ಧ ವಾಮಗೋಚರ ವಾಗ್ದಾಳಿ ನಡೆಸಿದರು

ಭಗವಾನ್‌ ಅವರ ವಾಗ್ಜರಿ ಹರಿದಿದ್ದು ಹೀಗೆ

ಒಕ್ಕಲಿಗರ ಸಂಸ್ಕೃತಿಯನ್ನು ಅರಿತಿಲ್ಲ. ಅವರ ಸಂಸ್ಕೃತಿ ಹೀನರು, ಇದನ್ನು ನಾನು ಹೇಳಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ. ಸತ್ಯ ಹೇಳಿದರೆ ಹೊಡೆಯಲಿಕ್ಕೆ ಬರುತ್ತಾರೆ,ನಿಜ ಹೇಳಿದವರನ್ನು ಯಾರು ಬಿಡಲ್ಲ.ಆದರೇ ನಿಜ ಹೇಳಿಯೇ ಸಾಯಬೇಕು.

ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ.ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ .ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ‌ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರೋರು. 2 ಸಾವಿರ ವರ್ಷದಿಂದ ಇವರು ಬೇರೆ ಅವರಿಗೆ ಸಂಸ್ಕೃತ ಕಲಿಸಲಿಲ್ಲ.

ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲು. ಇಂತಹ ಧರ್ಮ ಬೇಕಿಲ್ಲ. ಎಲ್ಲರೂ ದೇವರ ಬಗ್ಗೆ ದೊಡ್ಡ ಚಿಂತೆ ಮಾಡ್ತಾರೆ. ದೇವರು ಯಾಕೆ ಕೊರೋನಾ ತಡೆಯಲಿಲ್ಲ. ದೇವಸ್ಥಾನದಲ್ಲಿ ಕಳ್ಳತನವಾಗುವುದನ್ನು ದೇವರು ಯಾಕೆ ತಡೆಯಲಿಲ್ಲ. ದೇವರೆ ಕಳ್ಳನಾಗಿದ್ದಾನೋ ಏನೋ. ಎಲ್ಲರೂ ರಾಮ ರಾಜ್ಯದ ಬಗ್ಗೆ ಹೇಳ್ತಾರೆ. 11 ಸಾವಿರ ವರ್ಷ ರಾಮ ರಾಜ್ಯಭಾರ ಎಂದು ಹೇಳ್ತಾರೆ. ವಾಸ್ತವವಾಗಿ ಅದು 11 ವರ್ಷ.

ರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಹೋಡಿಸಿದ. ಆಕೆ ಏನು ಆದಳು ಅಂತ ರಾಮ ಕೇಳಲಿಲ್ಲ.

ಅಶ್ವಮೇಧ ಯಾಗದಲ್ಲಿ ಮಕ್ಕಳು ಹೆಂಡತಿ ಗೊತ್ತಾಗೋದು. 15 ವರ್ಷ ಹೆಂಡತಿ ಮಕ್ಕಳನ್ನು ಕೇಳದೇ ಇರೋದು ಈ ರಾಮ ಎಂತವನು. ಶೂದ್ರರು ತಲೆ ಬೆಳೆಸಿಕೊಳ್ಳದೇ ಬ್ರಾಹ್ಮಣರ ಬಳಿ‌ ಹೋಗ್ತಾರೆ. ರಾಮ ರಾಜ್ಯ ಎಂದರೆ ಶೂದ್ರರನ್ನು ಕೊಲ್ಲುವ ರಾಜ್ಯ ಎಂದು ಭಗವಾನ್ ಹೇಳಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ