Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಭೂಮಿಯಿಂದ ಆದಿತ್ಯನ ವಿದಾಯಕ್ಕೆ ದಿನಗಣನೆ

ಸುದ್ದಿಮೂಲ ವಾರ್ತೆ

ಬೆಂಗಳೂರು, ಸೆ.17: ಇನ್ನೊಂದೇ ದಿನ ಬಾಕಿ. ಹೌದು, ನಾಳೆ ಮಧ್ಯಾಹ್ನ ವಿನಾಯಕ ಚೌತಿಯ ಸಡಗರದ ನಡುವೆ ಆದಿತ್ಯನ ಸಮೀಪದ ( ಈಗ ಮನುಷ್ಯ ನಿರ್ಮಿತ ಬಾಹ್ಯಾಕಾಶ ನೌಕೆ ತಲುಪಿರುವ) ಕಕ್ಷೆ ಎಲ್ 1 ನತ್ತ ಹೊರಟಿರುವ ಭಾರತದ ಪ್ರತಿಷ್ಡಿತ ಆದಿತ್ಯ ಎಲ್1 ಗೆ ಭೂಮಿಯಿಂದ ವಿದಾಯ ಕೋರುವ ಗಳಿಗೆ ಬಂದೊದಗಲಿದೆ. ನಾಳೆ (ಸೆ.19) ತಡರಾತ್ರಿ ಎರಡು ಗಂಟೆ ಸುಮಾರಿಗೆ ಸೆಂಡ್ ಆಫ್ ನಡೆಯಲಿದೆ.

ಏನಿದು ಸೆಂಡ್ ಆಫ್?

ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ಶ್ರೀ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭದತ್ತ ಯಶಸ್ಸಿಯಾಗಿ ಚಿಮ್ಮಿದ್ದ ಆದಿತ್ಯ ಎಲ್ 1 ಗೀಗ ಭೂಮಂಡಲದ ವಿದಾಯ‌ ಸಮಯ ಸಮೀಪಿಸಿದೆ. ಇದುವರೆಗಿನ ತನ್ನ ಕಕ್ಷೆಯನ್ನು ನಾಲ್ಕು ಬಾರಿ ಯಶಸ್ವಿಯಾಗಿ ಬದಲಿಸಿ ಮುನ್ನುಗ್ಗುತ್ತಿರುವ ಆದಿತ್ಯ‌ ಕಳೆದ ಸೆ.15ರಂದು 296km x 71767 km ಕಕ್ಷೆ ಪ್ರವೇಶಿಸಿದ್ದ. ಈ ಪ್ರಕ್ರಿಯೆ ಮೇಲೆ ಇಸ್ರೊದ ಬೆಂಗಳೂರು, ಮಾರಿಷಸ್, ಪೋರ್ಟ್ ಬ್ಲೇರ್ ಮತ್ತು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಗಳು (ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್) ನಿಗಾ ಇಟ್ಟಿದ್ದವು. ಇದುವರೆಗೂ ಭೂ ಕಕ್ಷೆಯ ಪರಿಭ್ರಮಣೆಯಲ್ಲೇ ಇರುವ ಆದಿತ್ಯ ನನ್ನು ಭೂ ಪರಿಭ್ರಮಣೆಯಿಂದ ಅದರ ಗಮ್ಯ ಸ್ಥಾನ ಎಲ್ 1 (ಲಗ್ರಾಂಜಿಯನ್ ಬಿಂದು)ನತ್ತ ಪರಿಭ್ರಮಿಸಲು ಕಳುಹಿಸುವ ಪ್ರಕ್ರಿಯೆ ಈ ಸೆಂಡ್ ಆಫ್!.

ಸೆ.2ರಂದು ನಭದತ್ತ ನೆಗೆದಿದ್ದ ಆದಿತ್ಯ ಇದುವರೆಗೆ ನಾಲಕ್ಕು ಬಾರಿ ಕಕ್ಷೆ ಬದಲಾವಣೆಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದ. ಸೆ.3ರಂದು ಮೊದಲ ನಿರ್ವಹಣೆ ಮೂಲಕ (ಅಥ್೯ ಬೌಂಡ್ ಮ್ಯಾನ್ ಯುವರ್) ಮೂಲಕ 245km x 22459 km. ಕಕ್ಷೆಗೇರಿದ್ದ ಆದಿತ್ಯ ಬಳಿಕ ಕ್ರಮವಾಗಿ ಸೆ.3ರಿಂದ 15ರವರೆಗೆ ಎರಡನೇ, ಮೂರನೇ ಮತ್ತು ನಾಲ್ಕನೇ ಭೂ ನಿರ್ವಹಣೆ ಬಳಿಕ ಇದೀಗ ಅಂತಿಮವಾಗಿ ಭೂಮಿಯಿಂದ 15 ಕೋಟಿ ಕಿಮೀ ದೂರ ಇರುವ ಸೂರ್ಯನ ಅಧ್ಯಯನಕ್ಕೆ ಭೂಮಿಯಿಂದ 15ಲಕ್ಷ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದು (ಎಲ್1) ತಲುಪಿ ಅಲ್ಲಿ ನೆಲೆಯೂರಲಿದೆ.ಈ ಮೂಲಕ ಆದಿತ್ಯನ ಅಧ್ಯಯನಕ್ಕೆ ಭಾರತದ ಮೊಟ್ಟ ಮೊದಲ ಖಗೋಳ ಸೌರ ಅಧ್ಯಯನ ಕೇಂದ್ರ (ಸೋಲಾರ್ ಆಬ್ಸರ್ವೇಟರಿ) ಬಾಹ್ಯಾಕಾಶದಲ್ಲಿ ಆದಿತ್ಯ ಎಲ್ ೧ ಮೂಲಕ ತೆರೆದುಕೊಳ್ಳಲಿದೆ.

ಅಂದಹಾಗೆ ಎಲ್1 ಕಕ್ಷೆ ತಲುಪಲು ಇನ್ನೂ ಸುಮಾರು ನಾಲ್ಕು ತಿಂಗಳು ಆದಿತ್ಯ ಪ್ರಯಾಣಿಸಬೇಕಿದೆ. 2024 ಜನವರಿ ಮಧ್ಯಭಾಗದಲ್ಲಿ ಎಲ್1 ಕಕ್ಷೆ ತಲುಪಲಿದ್ದು ಫೆಬ್ರವರಿಯಿಂದ ಸೂರ್ಯಮಂಡಲದ 1440 ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ.ಈ ಮೂಲಕ ಸೌರ ಅಧ್ಯಯನದ ಹೊಸ ಅಧ್ಯಾಯವೊಂದು ತೆರೆದುಕೊಳ್ಳಲಿದೆ.

ಭೂಮಿ- ಚಂದ್ರನ ಜೊತೆ ಸೆಲ್ಫೀ ಕ್ಲಿಕ್ಕಿಸಿದ ಆದಿತ್ಯ!

ಭೂಮಿಯಿಂದ 15 ಲಕ್ಷ ಕಿಮೀ ದೂರದ ಎಲ್1 ನತ್ತ ಹೊರಟಿರುವ ಆದಿತ್ಯ ಮಾರ್ಗ ಮಧ್ಯದಲ್ಲಿ ಭೂಮಿ ಮತ್ತು ಚಂದ್ರನ ಜೊತೆಗೆ ತನ್ನದೂ ಸೆಲ್ಫೀ ಕ್ಲಿಕ್ಕಿಸಿದ್ದಾನೆ. ಅತ್ಯಂತ ಸುಂದರವಾಗಿರುವ ಈ ಕಲರ್ಫುಲ್ ಚಿತ್ರ ಸೆ.7ರಂದು ಭೂಮಿಗೆ ಬಂದಿದ್ದು ಇಸ್ರೋ ತನ್ನ ಟ್ವಿಟರ್ (ಈಗ ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಅಂದ ಹಾಗೆ ಅದೇ ದಿನ ಜಪಾನ್ ಕೂಡ ಚಂದಿರನ ಅಂಗಳಕ್ಕೆ ಯಶಸ್ವಿ ಪ್ರಯಾಣ ಆರಂಭಿಸಿತ್ತು. ಸ್ಲಿಮ್ ಲ್ಯಾಂಡರ್ ಹೆಸರಿನ ಈ ಬಾಹ್ಯಾಕಾಶ ನೌಕೆ ಅಂದೇ ಉಡ್ಡಯನಗೊಂಡಿತ್ತು.

ಮತ್ತೆ ಏಳ್ತಾನ ಮಲಗಿರೋ ವಿಕ್ರಮ

ಹೌದು.ಇದೀಗ ಸಮಸ್ತ ಖಗೋಳ ಶಾಸ್ತ್ರಜ್ಞರೊಂದಿಗೆ ನಾವೆಲ್ಲರೂ ಅತೀ ನಿರೀಕ್ಷೆ ಇರಿಸಿರುವ ಮತ್ತೊಂದು ದಿನಗಣನೆ ಆರಂಭಗೊಂಡಿದೆ. ಚಂದಿರನ ದಕ್ಷಿಣ ಧ್ರುವದ ಅಂಗಳದಲ್ಲಿ ಮನೆ ಮಾಡಿ ಕುಳಿತಿರುವ ವಿಕ್ರಮನಿಗೆ ಇದೇ ತಿಂಗಳ 22 ಹೊಸ ಬೆಳಗು. ಹೊಸ ಬೆಳಕು. ಅಂದು ಚಂದ್ರನಲ್ಲಿ ಸೂರ್ಯೋದಯವಾಗಲಿದೆ. ಭೂಮಿಯ ಮೇಲೆ ಪ್ರತಿದಿನವೂ ಸೂರ್ಯೋದಯ ಆದರೆ ಚಂದ್ರನಲ್ಲಿ ಸೂರ್ಯ ಉದಯಿಸೋದು 15 ದಿನಕ್ಕೊಮ್ಮೆ.

ಹೀಗಾಗಿ ವಿಕ್ರಮ ಭಾರತವು ಆದಿತ್ಯನತ್ತ ಪಯಣ ಆರಂಭಿಸಿದ್ದ ದಿನವೇ ಪ್ರಜ್ಞಾನ್ ರೋವರ್ ಸ್ಲೀಪ್ ಮೋಡ್ ನಲ್ಲಿ ಇರಿಸಿದ್ದರೆ ಎರಡು ದಿನಗಳ ಬಳಿಕ ವಿಕ್ರಮನು ನಿದ್ರೆಗೆ ಜಾರಿದ್ದ. ಸೂರ್ಯಕಾಂತಿ ಮೂಲಕವೇ ಚಾರ್ಜ್‌ ಆಗುವ ಈ ಎರಡೂ ಉಪಗ್ರಹಗಳ ಉಪಕರಣಗಳು ಸೆ.22ರ ಸೂರ್ಯೋದಯ ವೇಳೆ ಸಂಪೂರ್ಣವಾಗಿ ಚಾಜ್೯ ಕಳೆದುಕೊಳ್ಳದೇ ಇದ್ದಲ್ಲಿ ಮತ್ತೆ ಪುನಶ್ಚೇತನಗೊಂಡು ಮತ್ತೆ ತನ್ನ ಕೆಲಸ ಆರಂಭ ಮಾಡುವ ನಿರೀಕ್ಷೆ ಇದೆ. ಇದಕ್ಕಾಗಿಯೇ ಇಸ್ರೋ ವಿಜ್ಞಾನಿಗಳು ಬಹು ನಿರೀಕ್ಷೆ ಕಾತರದ ಕಣ್ಣುಗಳಿಂದ ಈ ದಿನವನ್ನು ಎದುರು ನೋಡುತ್ತಿದ್ದಾರೆ.

ಒಂದೊಮ್ಮೆ ವಿಕ್ರಮ್ ಯಶಸ್ವಿಯಾಗಿ ಪುನಶ್ಚೇತನಗೊಂಡರೆ ಮತ್ತೊಂದು ಹಿರಿಮೆಯ ಗರಿ ಇಸ್ರೋ ಮುಡಿಗೇರಲಿದೆ.ಶುಕ್ರವಾರ ಚಂದ್ರನಲ್ಲಿ‌ ಸೂರ್ಯೋದಯ ಸಮಯದಲ್ಲಿ‌ ಸೂರ್ಯ ಕಿರಣಗಳು ರೋವರ್ ಸೌರ ಫಲಕಗಳ ಮೇಲೆ ನೇರವಾಗಿ ರಾಚುವಂತಹ ಸ್ಥಿತಿಯಲ್ಲೀಗ ನಿಲ್ಲಿಸಲಾಗಿದ್ದು ರೋವರ್-ವಿಕ್ರಮ ಮತ್ತೆ ಕಾರ್ಯಾಚರಿಸುತ್ತಾನೋ ಕಾದು ನೋಡಬೇಕಿದೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ