Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ

ಸುದ್ದಿಮೂಲ ವಾರ್ತೆ

ಮಂತ್ರಾಲಯ,ಸೆ.1: ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಅಂಗವಾಗಿ ತಿರುಪತಿ ತಿರುಮಲ

ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು.

ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ತಲೆಯ ಮೇಲೆ ಹೊತ್ತು ಮೂಲ ವೃಂದಾವನ ಪ್ರದಕ್ಷಿಣೆ ಮಾಡುವ ಮೂಲಕ ರಾಯರಿಗೆ ಸಮರ್ಪಿಸಿದರು.

ನಂತರ ಶ್ರೀಗಳು ಮಾತನಾಡಿ, ಇಂದು ಭೂ ಲೋಕದ ಒಡೆಯ ಶ್ರೀನಿವಾಸ ಶೇಷ ವಸ್ತ್ರದ ಮೂಲಕ ಗುರುರಾಯರ ಸನ್ನಿಧಾನಕ್ಕೆ ಬಂದಿದ್ದಾನೆ, ಕಳೆದ ಅನೇಕ ವರ್ಷಗಳಿಂದ

ಗುರುರಾಯರ ಆರಾಧನೆ ಸಮಯದಲ್ಲಿ ಪ್ರತಿ ವರ್ಷ ತಿರುಪತಿಯ ಶ್ರೀನಿವಾಸನ ಸನ್ನಿಧಿಯಿಂದ ಶೇಷ ವಸ್ತ್ರವನ್ನು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿ ತಪ್ಪದೆ ವಾಡಿಕೆ ತಪ್ಪದೆ ಪಾಲಿಸುತ್ತ ಬಂದಿದ್ದು, ನಾಡ ನುಡಿಯಂತೆ ದೇವರು ಎಂದರೆ ತಿರುಪತಿ ತಿಮ್ಮಪ್ಪ ಗುರುಗಳು ಎಂದರೆ ಮಂತ್ರಾಲಯ ರಾಗಪ್ಪ ಎನ್ನುವ ಹಾಗೆ ತಿರುಪತಿ ಮಂತ್ರಾಲಯ ನಡುವೆ ಅವಿನಾವ ಸಂಬಂಧ ಹೊಂದಿದೆ ಎಂದರು.

ತಿರುಪತಿ ತಿರುಮಲ ದೇವಸ್ಥಾನ - ತಿರುಪತಿ ಜೆ. ಇ. ಒ. ಶ್ರೀ ವೀರ ಬ್ರಮಹೇಂದ್ರ ಮಾತನಾಡಿ ಇಂದು ಗುರುರಾಯರ ಮದ್ಯಾರಾಧನೆ ಸಮಯದಲ್ಲಿ ತಿರುಪತಿಯಿಂದ ಶೇಷ ವಸ್ತ್ರ ನೀಡುವ ಪರಂಪರೆ ನಡೆದುಕೊಂಡು ಬಂದಿದ್ದು, ಇಂದು ನಾವು ತಿರುಪತಿಯಿಂದ ತಂದ ಶೇಷ ವಸ್ತ್ರವನ್ನು ಶ್ರೀ ಗಳ ಮೂಲಕ ಗುರುರಾಯರಿಗೆ ಅರ್ಪಿಸಿದ್ದೆವೆ ಎಂದರು.

ಇದೇ ವೇಳೆ ಶ್ರೀಗಳು ಶರತ ಕುಮಾರ, ವರ್ಣಬೇಧ, ಸಾಧನೆಯಲ್ಲಿ ಹಿಂದೆ, ನಾವೆಕೆ ಎಚ್ಚರವಿಲ್ಲ,ಯಾರು ಸಾಧಕರು,ನಮ್ಮಲ್ಲಿ ಇರಬೇಕಾದ ಗುಣಗಳ ಸಮೀಕ್ಷೆ, ನಮ್ಮಲ್ಲಿ ಇರುವ ದೋಷಗಳ ಸಮೀಕ್ಷೆ, ಬೃಹ್ಮ ತತ್ವ, ಬೃಹ್ಮ ಸೋತ್ರ ಭಾಷೆ, ಶ್ರೀ ಪಾದರ 11 ವರ್ಷದ ಸಾಧನೆ ಸೇರಿದಂತೆ ಇತರೆ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ತಿರುಪತಿ ತಿರುಮಲ ವಿದ್ವಾನ ವಾದಿರಾಜ ಆಚಾರ್ಯ, ವಿದ್ವಾನ ಸುಧೀಂದ್ರ ಅಚಾರ್ಯ, ಧರಶ್ರೀ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ವೆಂಕಟೇಶ್ ಜೋಶಿ ,ಗುರುಸಾರಭೌಮ ವಿದ್ಯಾಪೀಠದ ಪ್ರಚಾರ್ಯರಾದ ರಮಣರಾವ, ಶ್ರೀ ಮಠದ ಮಾಧ್ಯಮ ಉಸ್ತುವಾರಿ ಶ್ರೀನಿಧಿ ಸೇರಿದಂತೆ ಗುರುಸಾರಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ