Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಜ 2, 3 ರಂದು ಧರಣಿ

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.31:
ಭೂ ಕಬಳಿಕೆ ನಿಷೇಧದ ನೆಪದಲ್ಲಿ ಜಿಲ್ಲಾಾಡಳಿತ, ತಾಲ್ಲೂಕು ಆಡಳಿತ ಬಡವರನ್ನು ಬೀದಿಪಾಲಾಗಿಸಿದೆ. ಪರ್ಯಾಯ ವ್ಯವಸ್ಥೆೆಗೆ ಆಗ್ರಹಿಸಿ ಜನೇವರಿ 2, 3 ರಂದು ನಗರದ ಮಿನಿ ವಿಧಾನಸೌಧದ ಮುಂದೆ ಧರಣಿ ಹಮ್ಮಿಿಕೊಳ್ಳಲಾಗುವದು. ಜ.3 ರಂದು ಸಿಂಧನೂರಿಗೆ ಆಗಮಿಸಲಿರುವ ಮುಖ್ಯಮಂತ್ರಿಿಗ ಧರಣಿ ಸ್ಥಳಕ್ಕೆೆ ಬಂದು ನ್ಯಾಾಯ ಒದಗಿಸಬೇಕು ಎಂದು ಬೀದಿಬದಿ ವ್ಯಾಾಪಾರಸ್ಥರ ಸಂಘದ ಸಂಚಾಲಕ ಡಿ.ಹೆಚ್.ಪೂಜಾರ್ ಆಗ್ರಹಿಸಿದರು.
ಬುಧವಾರ ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದ ಅವರು, ಬೀದಿ ಬದಿ ವ್ಯಾಾಪಾರಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಪರ್ಯಾಯ ವ್ಯವಸ್ಥೆೆ ಕಲ್ಪಿಿಸುವುದಾಗಿ ಭರವಸೆ ನೀಡಿದ್ದರೂ ಅದು ಈವರೆಗೆ ಈಡೇರಿಲ್ಲ. ಸಹಕಾರಿ ಇಲಾಖೆ ಜಾಗ ಬಾಡಿಗೆಗೆ ಕೊಡಿಸಲಿಲ್ಲ. ಶಾಸಕರು ಸುಳ್ಳು ಭರವಸೆ ನೀಡಿದ್ದಾಾರೆ. ಶಾಸಕರ ಮನೆಗೆ 10 ಸಾರಿ ನಿಯೋಗ ತೆರಳಿ ಮನವಿ ಮಾಡಿದ್ದೇವೆ. ಆದರೆ ಶಾಸಕರಿಂದ ಸೂಕ್ತ ಸ್ಪಂದನೆ ದೊರಕಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಎರಡು ಕಾನೂನು:
ಸಿಂಧನೂರಿನಲ್ಲಿ ಎರಡು ಕಾನೂನು ಜಾರಿಯಲ್ಲಿದೆ. ಬಡವರಿಗೊಂದು, ಶ್ರೀಮಂತರಿಗೊಂದು. ಭೂಕಬಳಿಕೆ ನಿಷೇಧ ಕಾಯ್ದೆೆ ಮೂಲಕ ಬೀದಿಬದಿ ವ್ಯಾಾಪಾರಸ್ಥ ತೆರವುಗೊಳಿಸಿದ ತಾಲ್ಲೂಕು ಆಡಳಿತ ಶ್ರೀಮಂತರ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ವಿಲವಾಗಿದೆ. 2020ಕ್ಕಿಿಂತ ಮುಂಚೆ ಹೈಕೋರ್ಟ್ ಆದೇಶದಂತೆ ನಗರ ವ್ಯಾಾಪ್ತಿಿಯ 300 ಕಟ್ಟಡಗಳಿಗೆ ನೋಟಿಸ್ ಕೊಡಲಾಗಿತ್ತು. ಆದರೆ ಈವರೆಗೆ ಆ ಕಟ್ಟಡಗಳನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಮುಂದಾಗಿಲ್ಲ. ಅಧಿಕಾರಿಗಳು ನ್ಯಾಾಯಾಲಯದ ಆದೇಶ ಪಾಲನೆ ಮಾಡಬೇಕಾದರೆ ಎಲ್ಲರನ್ನು ತೆರವುಗೊಳಿಸಬೇಕಿತ್ತು. ಪೊಲೀಸ್ ಠಾಣೆ, ಬಸ್‌ಸ್ಟ್ಯಾಾಂಡ್ ಸಮೀಪದ ಮುಖ್ಯರಸ್ತೆೆಗಳಲ್ಲಿರುವ ಕಟ್ಟಡಗಳಿಗೆ ಪಿಡಬ್ಲ್ಯೂಡಿ ಇಲಾಖೆ ನೋಟಿಸ್ ನೀಡಿದ ಪ್ರಕಾರ ಯಾಕೆ? ತೆರವುಗೊಳಿಸಲಿಲ್ಲ ಎಂದು ಪೂಜಾರ್ ಪ್ರಶ್ನಿಿಸಿದರು.
ಜಿಲ್ಲಾಾಧಿಕಾರಿ, ತಹಸೀಲ್ದಾಾರ, ಪೌರಾಯುಕ್ತರು ತಮ್ಮ ಸ್ಥಾಾನ, ನೌಕರಿ ಭದ್ರಪಡಿಸಿಕೊಳ್ಳಲು ಬಡವರ ಹೊಟ್ಟೆೆ ಮೇಲೆ ಹೊಡೆದಿದ್ದಾಾರೆ. ಬೀದಿಬದಿ ವ್ಯಾಾಪಾರಿಗಳು ಈವರೆಗೆ ಮೂರು ಜನ ಆತ್ಮಹತ್ಯೆೆ ಮಾಡಿಕೊಂಡಿದ್ದಾಾರೆ. ಸಾಲದ ಕಿರಿಕಿರಿಯಿಂದ ಮಕ್ಕಳ ಮುಖ ನೋಡೋಕೆ ಆಗ್ತಿಿಲ್ಲ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದಾಾವೆ. ಸಿಂಧನೂರಿಗೆ ಆಗಮಿಸುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಸಿಂಧನೂರಿನ ಜನರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಾಪಾರಸ್ಥರ ಸಂಘದ ಸಂಚಾಲಕರಾದ ಬಸವರಾಜ ಬಾದರ್ಲಿ, ಚಂದ್ರಶೇಖರ ಗೊರಬಾಳ, ಬಸವರಾಜ ಹಂಚಿನಾಳ, ನಾರಾಯಣ ಬೆಳಗುರ್ಕಿ, ರಮೇಶ ಪಾಟೀಲ್ ಬೇರ್ಗಿಿ, ಚಿಟ್ಟಿಿಬಾಬು ಬೂದಿವಾಳ ಕ್ಯಾಾಂಪ್, ಬಸವರಾಜ ಹಳ್ಳಿಿ ಇತರರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ