Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನವೀನ ಚಂದಾದಾರಿಕೆ ಮಾದರಿಯೊಂದಿಗೆ ಚಾಲಕರಿಗಾಗಿ ನಮ್ಮ ಯಾತ್ರಿಯಿಂದ ಡಿಜಿಟಲ್ ಸಬಲೀಕರಣ

ಸುದ್ದಿಮೂಲ ವಾರ್ತೆ

ಬೆಂಗಳೂರು,ಆ.23:ಚಾಲಕರನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಬೆಂಗಳೂರು ಮೂಲದ ಚಲನಶೀಲ ಅಪ್ಲಿಕೇಶನ್ ನಮ್ಮ ಯಾತ್ರಿ, ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡಲು ಚಾಲಕರ ಗಳಿಕೆಯನ್ನು ಹೆಚ್ಚಿಸಲು ನವೀನ ಚಂದಾದಾರಿಕೆ ಮಾದರಿಗಳನ್ನು ಅನಾವರಣಗೊಳಿಸಿದೆ. ಚಾಲಕರು ಯಾವುದೇ ಕಮಿಷನ್ ಪಾವತಿಸದೆ ಒಟ್ಟಾರೆಯಾಗಿ 100 ಕೋಟಿ ಗಳಿಸುತ್ತಿದ್ದಾರೆ. ನಮ್ಮ ಯಾತ್ರಿ ಒಂದು ಮಹತ್ವದ ಮೈಲಿಗಲ್ಲನ್ನು ಆಚರಿಸುತ್ತಿರುವಾಗ ಈ ಪ್ರಕಟಣೆ ಹೊರ ಬಂದಿದೆ. ಈ ವೇದಿಕೆಯ ಯಶಸ್ಸು ಭಾರತದ ಇತರ ನಗರಗಳಿಗೆ ಮಾದರಿಯಾಗಿದೆ.



ಜಸ್ಪೇ ಟೆಕ್ನಾಲಜೀಸ್ ನಿಂದ ಬೆಂಗಳೂರಿನ ಆಟೋ ಚಾಲಕರ ಸಹಭಾಗಿತ್ವದಲ್ಲಿ ನಿರ್ಮಿಸಲಾದ ನಮ್ಮ ಯಾತ್ರಿ, ಗ್ರಾಹಕರು ಕಡಿಮೆ ಪಾವತಿಸುವುದನ್ನು ಖಾತ್ರಿಪಡಿಸುವ ಮೂಲಕ ಚಾಲಕರು ಹೆಚ್ಚು ಗಳಿಸಲು ಅನುವು ಮಾಡಿಕೊಡುವ ಉಪಯುಕ್ತತೆಯಂತೆ ತಂತ್ರಜ್ಞಾನವನ್ನು ಪ್ರವೇಶಿಸುವ ಉದ್ದೇಶವನ್ನು ಇದು ಹೊಂದಿದೆ. 88,000 ಕ್ಕೂ ಅಧಿಕ ಚಾಲಕರ ಅಭಿವೃದ್ಧಿ ಹೊಂದುತ್ತಿರುವ ಸಮುದಾಯದೊಂದಿಗೆ ಮತ್ತು 17 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ‌.

ಕಳೆದ 9 ತಿಂಗಳುಗಳಲ್ಲಿ ಸುಮಾರು 90,000 ದೈನಂದಿನ ಟ್ರಿಪ್ ಗಳನ್ನು ಮತ್ತು 70 ಲಕ್ಷಕ್ಕೂ ಹೆಚ್ಚು ಟ್ರಿಪ್ ಗಳನ ಮಾಡಿದೆ.

ಆಟೋ ಚಾಲಕ ಪ್ರಸನ್ನ ಅವರು ನಮ್ಮ ಯಾತ್ರಿಯ ಬಗ್ಗೆ ಮಾತನಾಡಿ "ನಮ್ಮ ಯಾತ್ರಿ ಅಪ್ಲಿಕೇಶನ್ ಮಾತ್ರ ಇದ್ದರೆ, ಅದು ನಮಗೆ ತುಂಬಾ ಪ್ರಯೋಜನ. ಏಕೆಂದರೆ ನಾವು ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುತ್ತೇವೆ ಮತ್ತು ಯಾವುದೇ ಕಮಿಷನ್ ಇಲ್ಲದೆ ಪಾವತಿಯನ್ನು ಸ್ವೀಕರಿಸುತ್ತೇವೆ, ಇದು ಗ್ರಾಹಕರು ಮತ್ತು ಚಾಲಕರನ್ನು ಸಂತೋಷಪಡಿಸುತ್ತಿದೆ ಎಂದರು.

ಮತ್ತೋರ್ವ ಆಟೋ ಚಾಲಕ ಮುನಿರಾಜು ಮಾತನಾಡಿ, "ನಮ್ಮ ಯಾತ್ರಿ ಬಂದಾಗಿನಿಂದ ಇದು ನಿಜವಾಗಿಯೂ ನಮಗೆ ಅನುಕೂಲಕರವಾಗಿದೆ; ಗ್ರಾಹಕರು ಮತ್ತು ಚಾಲಕರು ಬೇಗನೆ ಸವಾರಿ ಮಾಡುತ್ತಾರೆ. ನಾವು ಈಗ ಹೆಚ್ಚಿನ ಹಣವನ್ನು ಗಳಿಸಲು ಸಮರ್ಥರಾಗಿದ್ದೇವೆ. ನಮ್ಮ ಯಾತ್ರಿ ಪರಿಚಯಿಸಿದ ಚಂದಾದಾರಿಕೆ ಯೋಜನೆಗಳು ಹೊಂದಿಕೊಳ್ಳುವ ಮತ್ತು ಕೈಗೆಟುಕುವಂತದ್ದು." ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಯಾತ್ರಿ ಚಾಲಕರ ಆದ್ಯತೆಗಳಿಗೆ ಅನುಗುಣವಾಗಿ ಎರಡು ಚಂದಾದಾರಿಕೆ ಯೋಜನೆಗಳನ್ನು ನೀಡುತ್ತದೆ. "ಪ್ರತಿದಿನ ಅನ್ಲಿಮಿಟೆಡ್" ಯೋಜನೆಯು ದಿನಕ್ಕೆ ಕೇವಲ 25ರೂ ನಿಂದ ಸೀಮಿತವಿಲ್ಲದೇ ಸವಾರಿಗಳನ್ನು ನೀಡುತ್ತದೆ, ಹಾಗೂ ಮೊದಲ ಸವಾರಿ ಉಚಿತವಾಗಿದೆ. ಪರ್ಯಾಯವಾಗಿ, "ಪ್ರತಿದಿನ ಪ್ರತಿ ಸವಾರಿ" ಯೋಜನೆಯು ಪ್ರತಿದಿನ 10 ಸವಾರಿಗಳಿಗೆ ಪ್ರತಿ ಸವಾರಿಗೆ ರೂ.3.50 ಶುಲ್ಕವನ್ನು ವಿಧಿಸುತ್ತದೆ, ಅದಕ್ಕೂ ಮೀರಿದ ಸವಾರಿಗಳು ಉಚಿತವಾಗಿರುತ್ತದೆ. ಎರಡೂ ಯೋಜನೆಗಳು ಕಮಿಷನ್ ಆಧಾರಿತ ಮಾದರಿಯಿಂದ ಮೂಲಭೂತವಾಗಿ ವಿಭಿನ್ನವಾಗಿವೆ ಮತ್ತು ಸಾಂಪ್ರದಾಯಿಕ ಅಗ್ರಿಗೇಟೊಗೆ ಹೋಲಿಸಿದರೆ ಚಾಲಕರಿಗೆ ಗಣನೀಯ ವೆಚ್ಚದ ಉಳಿತಾಯವನ್ನು ನೀಡುತ್ತವೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ