Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ತಾಲೂಕು ಕಚೇರಿ ಆವರಣದಲ್ಲಿಯೇ ಕ್ರಿಮಿನಾಶಕ ಸೇವಿಸಲು ಮುಂದಾದ ರೈತರು





ಸುದ್ದಿಮೂಲ ವಾರ್ತೆ

ಸಿರುಗುಪ್ಪ: ಏ-01: ನಗರದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ತಾಲೂಕಿನ ತೆಕ್ಕಲಕೋಟೆ, ಹಳೆಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ, ಬೈರಾಪುರ, ಮುಂತಾದ ಗ್ರಾಮಗಳಿಂದ ಆಗಮಿಸಿದ್ದರು.


ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತ ಭತ್ತದ ಬೆಳೆಗೆ ಕೊನೆಯ ಹಂತದ ನೀರಿನ ಅವಶ್ಯಕತೆ ಇದೆ. ನಮಗೆ ಈ ಮೊದಲು ನೀರು ಬಿಡುವುದಾಗಿ ತಿಳಿಸಿದ ಕಾರಣದಿಂದ ನಾಟಿ ಮಾಡಿದ್ದೆವು. ಅಂದು ಏಪ್ರಿಲ್ ಹತ್ತರವರೆಗೂ ನೀರು ಕೊಡುವುದಾಗಿ ತಿಳಿಸಿದ್ದರು. ಆದರೆ ಇದೀಗ ಕಾಲುವೆಗೆ ನೀರು ಬರುತ್ತಿಲ್ಲವಾದ ಕಾರಣ ಬೆಳೆಗಳು ಒಣಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ, ಈಗಾಗಲೇ ಸುಮಾರು 40 ರಿಂದ 50,000 ಪ್ರತಿ ಎಕರೆಗೆ ಖರ್ಚು ಮಾಡಿದ್ದೇವೆ ನಮ್ಮ ಗೋಳು ಕೇಳುವವರು ಯಾರು ಇಲ್ಲ ಅಧಿಕಾರಿಗಳನ್ನು ಕೇಳಿದರೆ ಚುನಾವಣಾ ಕರ್ತವ್ಯದಲ್ಲಿ ಇದ್ದೇವೆ ಎನ್ನುತ್ತಾರೆ


ಆದ ಕಾರಣ ಬೆಳೆ ಹಾಳಾದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗಲೇ ತಾಲೂಕು ಆಡಳಿತ ಕಚೇರಿಯ ಅವರಣದಲ್ಲಿಯೇ ವಿಷ ಸೇವಿಸುತ್ತೇವೆ ಎಂದು ರಾಸಾಯನಿಕ ಕ್ರಿಮಿನಾಶಕಗಳ ಬಾಟಲಿಗಳೊಂದಿಗೆ ಬಂದಿದ್ದರು. ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ  ಪೊಲೀಸ್ ಅಧಿಕಾರಿಗಳು ಬಂದು ರೈತರ ಕೈಗಳಲ್ಲಿದ್ದ ರಾಸಾಯನಿಕ ಕ್ರಿಮಿನಾಶಕ ಬಾಟಲಿಗಳನ್ನು ಪಡೆದರು


ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ ಕೃಷಿ ಅಧಿಕಾರಿ ಎಸ್.ಎಸ್. ಪಾಟೀಲ್ ಕಾಲುವೆ ಮೇಲ್ವಿಚಾರಕ ಸುರೇಶ್ ಪೂಜಾರಿ, ಸಿಪಿಐ ಯಶ್ವಂತ ಬಿಸ್ನಳ್ಳಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಕೆ ರಂಗಯ್ಯ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ರೈತರ ಆಗ್ರಹದ ಅಳಲನ್ನು ಕೇಳಿ ತಿಳಿದುಕೊಂಡರು.


ಈ ವೇಳೆ  ಮಂಜುನಾಥ ಸ್ವಾಮಿ ತಕ್ಷಣವೇ ನಾನು ನಿಮ್ಮೊಂದಿಗೆ ಅಧಿಕಾರಿಗಳನ್ನು ಕಳಿಸುತ್ತೇನೆ. ನೀವು ಅವರೊಂದಿಗೆ ಇದ್ದು ವರದಿ ಕೊಡಲು ಸಹಕರಿಸಿ. ನಾನು ಅನ್ನದಾತರ ತೊಂದರೆಗಳ ಪರಿಹಾರಕ್ಕೆ ಮನಃಪೂರ್ವಕವಾಗಿ ಕೆಲಸ ಮಾಡುತ್ತೇನೆಂದು  ರೈತರೊಂದಿಗೆ ಅಧಿಕಾರಿಗಳನ್ನು ಕಳುಹಿಸಿದರು. ತಕ್ಷಣ ಕಾರ್ಯಪ್ರವೃತ್ತರಾಗಿ, ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಕಳುಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ತುಂಗಭದ್ರಾ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ, ನೆಣೆಕೆಪ್ಪ, ಜ್ಞಾನೇಂದ್ರ ಸ್ವಾಮಿ, ರಾಜಣ್ಣ, ವೀರೇಶ, ಸುಧಾಕರ ನೂರಾರು ರೈತರಿದ್ದರು






Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ