Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಆರ್‌ಎಸ್‌ಎಸ್ ನೋಂದಣಿ ಬಗ್ಗೆೆ ನಾನು ಚಕಾರವೆತ್ತಿಿಲ್ಲ - ಸಿಎಂ

ಸುದ್ದಿಮೂಲ ವಾರ್ತೆ ಹರಪನಹಳ್ಳಿಿ, ನ.09:
ದೇಶದಲ್ಲಿ ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಬೇಕೆಂದು ನಾನು ಎಂದು ಎಲ್ಲಿಯೂ ಹೇಳಿಲ್ಲ? ಬದಲಾಗಿ ಎಲ್ಲಾ ಸಂಘಟನೆಗಳು ( ಆರ್ಗನೈಜೇಷನ್ )ಎಂದಿದ್ದೇನೆ.ಅದನ್ನು ಬಿಜೆಪಿ ಪಕ್ಷದವರು ಹಾಗೂ ಸಂಘ ಪರಿವಾರದವರು ಆರ್‌ಎಸ್‌ಎಸ್ ಎಂದು ತಪ್ಪುು ಭಾವಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು.
ಪಟ್ಟಣದಲ್ಲಿ ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಅವರ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಬ್ರಿಿಟಿಷ್ ಕಾಲದಲ್ಲಿಯೇ ಆರ್‌ಎಸ್‌ಎಸ್ ಇದೆ ಆರ್‌ಎಸ್‌ಎಸ್ ಹುಟ್ಟಿಿ ನೂರು ವರ್ಷಗಳು ಕಳೆದಿವೆ. ಪ್ರಸ್ತುತ ರಾಜಕೀಯ ವಿಚಾರವಾಗಿ ಆರ್‌ಎಸ್‌ಎಸ್ ನೋಂದಣಿ ವಿಚಾರವನ್ನು ಎಳೆದು ತರುವುದು ಎಷ್ಟು ಸರಿ ಎಂಬ ಪ್ರಶ್ನೆೆಗೆ ಉತ್ತರಿಸಿದ ಅವರು ನಾನೆಂದೂ ಆರ್‌ಎಸ್‌ಎಸ್ ನೊಂದಣಿ ಬಗ್ಗೆೆ ಚಕಾರೆತ್ತಿಿಲ್ಲ ಅವರು ತಪ್ಪಾಾಗಿ ತಿಳಿದಿದ್ದಾರೆ ನಾನೇನೂ ಮಾಡಲಾಗುವುದಿಲ್ಲ ಎಂದರು.
ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾಾದಕರಿಗೆ ಹಾಗೂ ಉಮೇಶ್ ರೆಡ್ಡಿಿಗೆ ರಾಜಾತಿಥ್ಯ ನೀಡುತ್ತಿಿರುವ ವಿಡಿಯೋ ವೈರಲ್ ಆಗುತ್ತಿಿವೆ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆೆಗೆ ಉತ್ತರಿಸಿದ ಅವರು ತಪ್ಪುು ಮಾಡಿದವರ ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ವರದಿ ಕೇಳಿದ್ದೇವೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸ್ಥಳೀಯ ರೈತರು ಮೆಕ್ಕೆೆಜೋಳ ಬೆಂಬಲ ಬೆಲೆ ನೀಡಬೇಕು ಪ್ರಶ್ನೆೆಗೆ ಮೆಕ್ಕೆೆಜೋಳಕ್ಕೆೆ ಬೆಂಬಲ ಬೆಲೆ ಸೂಚಿಸ ಬೇಕಾಗಿರುವುದು ಕೇಂದ್ರ ಸರ್ಕಾರ.ರಾಜ್ಯ ಸರ್ಕಾರವಲ್ಲ ನಾವು ಶಿಾರಸ್ಸು ಮಾಡಬಹುದೆಷ್ಟೇ ಎಂದರು.
ಕಬ್ಬು ಬೆಳೆ ರೈತರೊಂದಿಗೆೆ ಮಾತನಾಡಿ ಎಲ್ಲವೂ ಸರಿಪಡಿಸಲಾಗಿದೆ ಈಗ ಅವರಿಗೆ ಹಣ ನೀಡುವ ವಿಚಾರದಲ್ಲಿ ಯಾರಾದರೂ ಒಪ್ಪದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಕಾರ್ಖಾನೆ ಮಾಲೀಕರು ಹಾಗೂ ಬಸವನಗೌಡ ಯತ್ನಾಾಳ್ ರವರು ನಮ್ಮ ಕಾರ್ಖಾನೆಗೆ ಲಾಸ್ ಆಗುತ್ತೆೆ ಎಂದಿದ್ದಾರೆ ಎಂಬ ಪ್ರಶ್ನೆೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಇದೇ ವೇಳೆ ರೈತರು ಅಹವಾಲುಗಳನ್ನು ನೀಡಿದರು ಮೆಕ್ಕೆೆಜೋಳ ಖರೀದಿ ಕೇಂದ್ರ ಹೋಬಳಿ ಮಟ್ಟದಲ್ಲಿ ಸ್ಥಾಾಪನೆ ಮಾಡುವಂತೆ ರೈತ ಮುಖಂಡರು ಆಗ್ರಹಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ