Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ದಸರಾ ಪ್ರಧಾನ ಕವಿಗೋಷ್ಠಿ ಉದ್ಘಾಟನೆ

ಸುದ್ದಿಮೂಲ ವಾರ್ತೆ

ಮೈಸೂರು, ಅ.21:ನೊಂದವರಿಗೆ,ಸಂಕಷ್ಟದಲ್ಲಿರುವವರಿಗೆ ಕವಿ ತನ್ನ ಕಾವ್ಯದ ಮೂಲಕ ದನಿಯಾಗಬೇಕು. ಆಯಾ ಕಾಲದ ಪರಿಸ್ಥಿತಿ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಆ ಪ್ರದೇಶದ ಪ್ರತಿನಿಧಿ ಆಗಬೇಕು ಎಂದು ಕವಯತ್ರಿ ಶಶಿಕಲಾ ವಸ್ತ್ರದ ಪ್ರತಿಪಾದನೆ ಮಾಡಿದರು.

ಶನಿವಾರ ನಗರದ ಕಲಾಮಂದಿರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಪ್ರಜ್ಞೆಯುಳ್ಳವನಾಗಿರಬೇಕು. ಸಾಮಾಜಿಕ ಪ್ರಜ್ಞೆ ಇಲ್ಲದವರು ಜೀವಂತ ಮೃತರು ಎಂದು ಅಭಿಪ್ರಾಯಪಟ್ಟರು.

ಕಾವ್ಯ ಮನರಂಜನೆಗಾಗಿ ಅಲ್ಲ, ಅದು ಸಮಾಜದ ಸುಧಾರಣೆಗೆ ಬಹಳ ಪ್ರಮುಖ ಅಸ್ತ್ರ., ಕವಿಗಳು ಹಾಗೂ ಕವಿತೆಗಳು ಜೀವಂತವಾಗಿರುವ ಈ ಕಾಲವೇ ಸುವರ್ಣಕಾಲ. ಮೈಸೂರು ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿ ಕವಿಗೋಷ್ಠಿಯನ್ನು ನಡೆಸಲಾಗುತ್ತಿದೆ. ನಮಗೆ ಕಾವ್ಯ ಯಾಕೆ ಬೇಕು ಎಂಬುದರ ಬಗ್ಗೆ ನಾವು ಅರಿಯಬೇಕು ಎಂದು ಸಲಹೆ ನೀಡಿದರು.

ನಾಡು ನುಡಿ ಹಾಗೂ ಸಂಸ್ಕೃತಿ ಉಳಿದರೆ ನಮ್ಮ ಕನ್ನಡದ ಅಸ್ತಿತ್ವ ಉಳಿಯುತ್ತದೆ. ನಮ್ಮ ಭಾಷೆ ಸಂಸ್ಕೃತಿ ಸಾಹಿತ್ಯ ಉಳಿಸಿಕೊಳ್ಳುವುದು ಅನಿವಾರ್ಯ ಇದನ್ನು ನಾವು ಮನನ ಮಾಡಿಕೊಳ್ಳಬೇಕು ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲ ಕನ್ನಡಿಗರದ್ದು. ಯಾವ ಭಾಷೆಯನ್ನು ನಾವು ಹೆಚ್ಚು ಬಳಸುವುದಿಲ್ಲವೋ ಆ ಭಾಷೆ ಹೆಚ್ಚು ಬದುಕುವುದಿಲ್ಲ ಎಂದು ಹೇಳಿದರು.

ಕನ್ನಡ ಭಾಷೆ ನಮ್ಮ ತಾಯಿ, ಅದಿಲ್ಲದೆ ನಮ್ಮ ಬದುಕಿಲ್ಲ. ಯಾವುದೇ ರಾಜ್ಯಕ್ಕೆ ಹೋದರು ಅಲ್ಲಿ ಆ ರಾಜ್ಯದವರು ಆ ರಾಜ್ಯದ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ. ಆದರೆ ನಮ್ಮಲ್ಲಿ ಹೊರ ರಾಜ್ಯದವರ ಜೊತೆ ಸಂವಹನ ಮಾಡುವಾಗ ಬಹುತೇಕ ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ. ಇತರ ಭಾಷೆಗಳನ್ನು ಕಲಿಯುವುದು ಸಂತೋಷ. ಆದರೆ, ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಜವಾಬ್ದಾರಿ ಎಂದರು.

ಕವಿತೆಗಳನ್ನು ಬರೆಯುವ ನಮ್ಮ ನವ ಕವಿಗಳಿಗೆ ಹೋರಾಟದ ಮನಸ್ಥಿತಿ ಇರಬೇಕು. ಆತ್ಮಗೌರವ, ತಾಯ್ತನ, ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ತುಳಿತಕ್ಕೊಳಗಾದ, ರೈತರ, ದಲಿತರ, ಮಹಿಳೆಯರ ನೊಂದವರ ಮಾತು ಆಲಿಸಿ ಅವರ ನೋವಿಗೆ ದನಿಯಾಗಬೇಕು ಎಂದು ನಾಡಿನ ನವ ಕವಿಗಳಿಗೆ ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಲೋಕನಾಥ್ ಮಾತನಾಡಿ, ಈ ಬಾರಿಯ ಕವಿಗೋಷ್ಠಿಯು ನಮ್ಮ ದಸರ ಸಂಭ್ರಮವನ್ನು ಹೆಚ್ಚಿಸಿದೆ. ಕವಿಗಳು ಕಂಡ ದಸರಾ ಬಹಳ ವಿಶಿಷ್ಟವಾಗಿದೆ, ಭಾಷೆಯನ್ನು ಬಳಸುವ ಅತ್ಯುತ್ತಮ ಘಟ್ಟ ಕಾವ್ಯ ರಚನೆಯಾಗಿದೆ ಎಂದರು.

ಈ ವರ್ಷದ ನವೆಂಬರ್ ನಿಂದ ಮುಂದಿನ ನವೆಂಬರ್ ತಿಂಗಳವರೆಗೆ ಕರ್ನಾಟಕ ಸಂಭ್ರಮ ವರ್ಷಾಚರಣೆಯನ್ನು ಆಚರಿಸಲಿದ್ದೇವೆ. ಇದು ನಮ್ಮೆಲ್ಲರಿಗೂ ಸಂತಸದ ವಿಷಯ. ಕನ್ನಡ ಭಾಷೆಯಲ್ಲಿರುವ ಶಕ್ತಿ ವಿಶೇಷವಾಗಿದ್ದು, ಸಮಾಜವನ್ನು ಸುಸ್ಥಿತಿಗೆ ತರುವಲ್ಲಿ ಸಾಹಿತ್ಯದ ಪ್ರಭಾವ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಶರಣಪ್ಪ ವಿ ಹಲಸೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ. ಎಂ ದಾಸೆಗೌಡ, ಕಾರ್ಯಧ್ಯಕ್ಷ ವಿಜಯಕುಮಾರ್ ಎಸ್ ಕರಿಕಲ್, ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ದಂಡಿಕೆರೆ ನಾಗರಾಜ್ ಹಾಗೂ ರವಿಚಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ