Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಕೆ.ಆರ್.ಪಿ ಪಕ್ಷದ ಬೃಹತ್ ಸಮಾವೇಶ 

ಸುದ್ದಿಮೂಲ ವಾರ್ತೆ,

ಜೇವರ್ಗಿ : ರಾಜಕೀಯದವರು ನನ್ನ ಜೊತೆ ಪುಟ್ಬಾಲ್ ತರಹ ಆಟವಾಡಿದರೆ ಎಲ್ಲಾ ಪಕ್ಷಗಳನ್ನು  ಪುಟ್ ಬಾಲ್‌ ನಂತೆ  ಒಡೆದುಡಿಸಬೇಕಾಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.


ಪಟ್ಟಣದ ದತ್ತ ನಗರದ ಎದುರುಗಡೆ ಗೋಗಿ ಲೇಔಟ್ ನಲ್ಲಿ ಕೆ.ಆರ್. ಪಿ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2008 ರ ಚುನಾವಣೆಯಲ್ಲಿ ದಿ. ಧರ್ಮಸಿಂಗ್ ಅವರಿಗೆ ಸೋಲುಣಿಸಲು ಮುಖ್ಯ ಕಾರಣೀಕರ್ತರಲ್ಲಿ ನಾನು ಒಬ್ಬ ಎಂದರು. ಜೇವರ್ಗಿ ಕ್ಷೇತ್ರವು ಅಭಿವೃದ್ಧಿ ವಂಚಿತ ಮತ್ತು ಹಿಂದುಳಿದ ತಾಲೂಕು. ಈ ಕ್ಷೇತ್ರದಿಂದ ಹಲವಾರು ಸಚಿವ ಖಾತೆ, ಮುಖ್ಯಮಂತ್ರಿ ಸ್ಥಾನದ ವೆರೆಗೆ ಹೋದರು ಅಭಿವೃದ್ಧಿ ಹೊಂದಿಲ್ಲ ಎಂದು ಹೇಳಿದರು. ರಾಜಕೀಯ ಎಂದರೆ ತಂತ್ರ, ಕುತಂತ್ರ, ದ್ವೇಷ, ಇನ್ನೊಬರನ್ನು ತುಳಿದು ಮಾಡುವದು ನನಗೆ ಗೊತ್ತಿಲ್ಲ, ನಾನು ಪ್ರವಾಸೋದ್ಯಮ ಸಚಿವ ನಿದಾಗ ಹಲವಾರು ಯೋಜನೆಗಳು ಹಾಕಿಕೊಂಡು ದೇಶ ವಿದೇಶದಿಂದ ಬರುವ ಪ್ರಯಾಣಿಕರಿಗೆ ಕೇವಲ 3 ದಿನದಲ್ಲಿ ಕರ್ನಾಟಕ ಸಂಚರಿಸಿ ನೋಡುವಂತೆ ಮಾಡಿದ್ದೆ ಎಂದು ಹೇಳಿದರು.



ಮೂಲಭೂತ ಸಚಿವನಿದಾಗ ಹಲವಾರು ವಿಮಾನ ಶ್ರೇಯ ಮದಿದ್ದು, ಅದರಲ್ಲಿ ಕಲಬುರಗಿಯೂ ಒಂದು ಬಡಜನರ ಜಮೀನು ಹೆಚ್ಚಿನ ಆದಾಯ, ಯುವಕರಿಗೆ ಉದೋಗ, ಕೈಗಾರಿಕೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಮಾಡುತ್ತಿದ್ದ ನನಗೆ ರಾಜಕೀಯ ಶತ್ರುಗಳ ಜೊತೆ ಸೇರಿಕೊಂಡು ನನನ್ನು 12 ವರ್ಷ ಜೈಲು ವಾಸ ಮಾಡುವಂತೆ ಮಾಡಿದರು.


ಒಬ್ಬ ಮನುಷ್ಯ ಇನೊಬ್ಬ ಮನುಷ್ಯನನ್ನು ಕೆಡವಲು ಸಾಧ್ಯವಿಲ್ಲ ಎಲ್ಲಾ ದೇವರ ಹಿಚ್ಛೆ ಎಂದರು.13 ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಕಾರಣ ನನನ್ನು ಬಳ್ಳಾರಿಯಿಂದ ದೂರ ಇಟ್ಟರು. ನನ್ನ 12 ವರ್ಷ ಅಮೂಲ್ಯ ಕ್ಷಣಗಳು ಕಳೆದುಕೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಪಕ್ಷ ನೊಂದವರ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಕಟ್ಟಿದ್ದು ಈ ಪಕ್ಷಕ್ಕೆ ಜನರ ಆಶೀರ್ವಾದದಿಂದ ಈ ಚುನಾವಣೆಯಲ್ಲಿ 30 ಸ್ಥಾನ ಪಡೆದುಕೊಳುವದು ಖಚಿತ ಎಂದು ಹೇಳಿದರು.



ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ ಮಾಸಿಕ 15 ಸಾವಿರ, 9ಗಂಟೆಗಳ ಕಾಲ ವಿದ್ಯುತ್ ಉಚಿತ, ರೈತರಿಗೆ ಪ್ರತಿಗ್ರಾಮದಲ್ಲಿ ರಸಗೊಬ್ಬರ, ಬಿತ್ತನೆಬೀಜ ಉಚಿತವಾಗಿ ನಿಡುತೇವೆ ಎಂದು ಘೋಷಣೆ ಮಾಡಿದರು. ಅಶೋಕ ಸಾಹು ಗೋಗಿ ಮಾತನಾಡಿ, ಬಿಜೆಪಿ ಈ ಕೆ. ಆರ್. ಪಿ ಪಕ್ಷ ಅಭಿವೃದ್ಧಿ ಪಕ್ಷವಾಗಿದ್ದು, ನೊಂದವರ ಬೆಂದವರ ಹಿತದೃಷ್ಟಿಗಾಗಿ ಈ ಬಾರಿ ಪಕ್ಷಕ್ಕೆ ಜನರ ಆಶೀರ್ವಾದ ಮಾಡಬೇಕು ಎಂದರು.



ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಹೇಮಲತಾ, ಕರೆಪ್ಪಗೌಡ ಮುರ್ಗನೂರ್, ಮಲ್ಲಿಕಾರ್ಜುನ್ ನಾಟಿಕಾರ್, ಮಲ್ಲಿಕಾರ್ಜುನ ಉಗ್ಗಿ, ಶರಣಗೌಡ ವಾಸ್ತರಿ, ಶಿವಲಿಂಗಪ್ಪ ಸಾಹು ಬಸ್ಗಿ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ, ಮಹಾಂತಗೌಡ ಕಲ್ಲೂರ್, ವೆಂಕಟೇಶ ಗುತ್ತೇದಾರ, ಶಾಬೋದಿನ ಪಟೇಲ್ ಯಾಳವಾರ, ಪ್ರಶಾಂತ ಆಂದೋಲ, ಶಭೀರ್ ಎಂ. ಹಿಪ್ಪರಗಿ, ವಿಷ್ಣುಕಾಂತ ಬಿರೇದಾರ, ಮಹಾಂತಗೌಡ ಹಳ್ಳಿ, ಭಗವಂತರಾಯ ವಾಸ್ತರಿ, ರೇವಣಸಿದ್ದಪ್ಪ ಸುಂಬುಡ್, ದೇವಿಂದ್ರ ಈ ತಳವಾರ, ಸಂಗನಗೌಡ ಹಿರೇಗೌಡರ, ಸಿದ್ದು ಸಾಹುಕಾರ ಸೇರಿದಂತೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ