Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕುವೆಂಪು ಅವರು ಸಾಹಿತ್ಯದಿಂದಲೇ ವಿಶ್ವಮಾನವರಾದರು

ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.29:
ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ, ರಸಋಷಿ, ಕರ್ನಾಟಕ ರತ್ನ, ಕನ್ನಡದ ಪ್ರಪ್ರಥಮ ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತರಾದ ಕುವೆಂಪುರವರ ಸಾಹಿತ್ಯವನ್ನು ಓದುವಾಗ ಸಾಹಿತ್ಯದ ವಸ್ತು ಓದುಗರನ್ನು ತನ್ನಲ್ಲಿ ಸೆಳೆದುಕೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿಿನ ನಿಕಟ ಪೂರ್ವ ಜಿಲ್ಲಾಾ ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಿನ ಬಳ್ಳಾಾರಿ ಜಿಲ್ಲಾಾ ಅಧ್ಯಕ್ಷರಾಗಿರುವ ಸಿದ್ದರಾಮ ಕಲ್ಮಠ ಅವರು ಅಭಿಪ್ರಾಾಯ ವ್ಯಕ್ತಪಡಿಸಿದ್ದಾಾರೆ.
ಬಳ್ಳಾಾರಿಯ ಪಾರ್ವತಿ ನಗರದಲ್ಲಿ ಇರುವ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಾ ಘಟಕ ಏರ್ಪಡಿಸಿದ್ದ ಕುವೆಂಪು ಅವರ 121ನೇ ಜಯಂತಿ ಉದ್ಘಾಾಟಿಸಿ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿಗಳು ಮಲೆನಾಡಿನ ಸೊಬಗನ್ನು ಮತ್ತು ಬದುಕನ್ನು ಕಣ್ಣ ಮುಂದೆ ತೆರೆದಿಡುತ್ತವೆ. ಇಂಥಹ ಕಥಾ ವಸ್ತುಗಳು ಮತ್ತು ಬರಹದ ಶೈಲಿಯಿಂದಲೇ ಅವರು ರಾಷ್ಟ್ರಕವಿಯಾಗಿದ್ದಾಾರೆ ಎಂದರು.
ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲೆೆಗಳ ಜಿಲ್ಲಾಾ ಅಧ್ಯಕ್ಷರಾಗಿರುವ ಕೆ. ರಾಜಶೇಖರ್ (ಕುರಿಹಟ್ಟಿಿ ರಾಜಣ್ಣ) ಅವರು, ಕನ್ನಡ ನಾಡು, ನುಡಿ ಮತ್ತು ನೆಲ-ಜಲಕ್ಕೆೆ ತನ್ನದೇ ಆದ ಮಹತ್ವವಿದೆ. ನೈಸರ್ಗಿಕವಾದ ಮಹತ್ವಕ್ಕೆೆ ಸಾಹಿತ್ಯದ ಮೂಲಕ ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವರಾಗಿದ್ದಾಾರೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಸದಸ್ಯ ಗುಡಿಗಂಟೆ ಹನುಮಂತ, ನಾಗರಾಜ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ