Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜನವರಿ 3ರ ಶನಿವಾರ ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ

 ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.04:
ಬಳ್ಳಾಾರಿ ನಗರದಲ್ಲಿ ಅನಾವರಣ ಆಗಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪುತ್ಥಳಿಯ ನಿರ್ಮಾಣ ಕಾಮಗಾರಿಯನ್ನು ಮಹರ್ಷಿ ಶ್ರೀ ವಾಲ್ಮೀಕಿ ಅವರು ನನ್ನ ಮೂಲಕ ನೆರವೇರಿಸುತ್ತಿಿದ್ದು, ಜನವರಿ 3, 2026ರ ಶನಿವಾರ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಬಳ್ಳಾಾರಿ ನಗರ ಶಾಸಕ ನಾರಾ ಭರತರೆಡ್ಡಿಿ ಅವರು ತಿಳಿಸಿದ್ದಾಾರೆ.
ಬಳ್ಳಾಾರಿ ನಗರ ಮತ್ತು ಜಿಲ್ಲೆೆಯ ವಾಲ್ಮೀಕಿ ಸಮಾಜದ ಮುಖಂಡರು ಏರ್ಪಡಿಸಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪುತ್ಥಳಿ ಅನಾವರಣದ ಎರಡನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಯೋಧ್ಯೆೆಯ ರಾಮಲಲ್ಲಾಾನ ಮೂರ್ತಿ ಕೆತ್ತಿಿರುವ ಶಿಲ್ಪಿಿ ಅರುಣ್ ಯೋಗಿರಾಜ್ ಅವರ ಕುಸರಿ ಕಲೆಯಲ್ಲಿಯೇ ಮಹರ್ಷಿ
ಶ್ರೀ ವಾಲ್ಮೀಕಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುತ್ತಿಿದೆ. ಪುತ್ಥಳಿ ಅನಾವರಣಕ್ಕೆೆ ವಾಲ್ಮೀಕಿ ನಾಯಕರ ಸಮಾಜದವರ ವಿವಿಧ ಸಮಿತಿಗಳನ್ನು ರಚಿಸಿ, ಯಶಸ್ವಿಿಗೆ ಶ್ರಮಿಸಬೇಕು ಎಂದರು.
ವಾಲ್ಮೀಕಿ ವಿದ್ಯಾಾಭಿವೃದ್ಧಿಿ ಸಂಘದ ಅಧ್ಯಕ್ಷ ಬಿ. ರಾಂ ಪ್ರಸಾದ್ ಅವರು, ಪುತ್ಥಳಿ ಅನಾವರಣದಲ್ಲಿ ವಾಲ್ಮೀಕಿ ನಾಯಕರ ಸಮಾಜದವರ ಭಾಗೀದಾರಿಕೆ ಬಹಳ ಮುಖ್ಯ. ಕಾರ್ಯಕ್ರಮ ಯಶಸ್ವಿಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಿ, ಎಲ್ಲರನ್ನೂ ಪಾಲ್ಗೊೊಳ್ಳುವಂತೆ ಮಾಡಲಾಗುತ್ತದೆ. ಮಾಜಿ ಸಚಿವ ಬಿ. ನಾಗೇಂದ್ರ ಅವರೂ ಪುತ್ಥಳಿ ಅನಾವರಣ ಯಶಸ್ವಿಿಗೊಳಿಸಲು ಮನವಿ ಮಾಡಿದ್ದಾಾರೆ ಎಂದರು.
ಹಿರಿಯ ವಕೀಲ ಜಯರಾಂ, ನಾರಾಯಣಪ್ಪ, ಮೀನಳ್ಳಿಿ ಡಿ. ತಾಯಣ್ಣ, ಮಾಜಿ ಮೇಯರ್ ನಾಗಮ್ಮ, ಮಾಜಿ ಉಪ ಮೇಯರ್ ಜಾನಕಮ್ಮ, ಪಾಲಿಕೆಯ ಸದಸ್ಯ ಹನುಮಂತಪ್ಪ, ಕಾಂಗ್ರೆೆಸ್ ಮುಖಂಡರಾದ ಸದಾಶಿವಪ್ಪ, ವೀರೇಶಪ್ಪ, ಮೀಸೆ ರಾಮಣ್ಣ, ಪಿ. ಜಗನ್ನಾಾಥ, ಮುದಿಮಲ್ಲಯ್ಯ, ಮೋಕ ಮಲ್ಲಯ್ಯ, ಇನ್ನಿಿತರರು ಸಭೆಯಲ್ಲಿ ಶಾಸಕರ ಕುರಿತು ಮೆಚ್ಚುಗೆ ಮಾತುಗಳನ್ನಾಾಡಿದರು.
ಸಭೆಗೂ ಮುನ್ನ ಮಹರ್ಷಿ
ಶ್ರೀ ವಾಲ್ಮೀಕಿಯವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಲಾಯಿತು.
ಬೇನ್ಪಾಾಡ್ ಹನುಮಂತಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಕಿಟ್ಟ, ಕಪ್ಪಗಲ್ಲು ರಾಮಣ್ಣ, ಕೆ. ನಾರಾಯಣಪ್ಪ, ಸೇರಿದಂತೆ ಹಲವರು ಹಾಜರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ