Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಬೃಹತ್ ಮೆರವಣಿಗೆ ಮೂಲಕ ವೃತ್ತ ತಲುಪಿದ ಮಹರ್ಷಿ ವಾಲ್ಮೀಕಿ ಪುತ್ಥಳಿ ಜ.3 ರಂದು ಅದ್ಧೂರಿ ಅನಾವರಣ ಕಾರ್ಯಕ್ರಮ: ಶಾಸಕ ನಾರಾ ಭರತ್ ರೆಡ್ಡಿಿ

ಸುದ್ದಿಮೂಲ ವಾರ್ತೆ ಬಳ್ಳಾಾರಿ, ಡಿ.25:
ಭವ್ಯ ಮೆರವಣಿಗೆಯೊಂದಿಗೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ವೃತ್ತಕ್ಕೆೆ ತರಲಾಗಿದೆ, ಜ.03 ರಂದು ಅದ್ಧೂರಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಬಳ್ಳಾಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಿ ಹೇಳಿದರು.
ಗುರುವಾರ ನಗರ-ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ವತಿಯಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಸ್ವಾಾಗತ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಒಟ್ಟು 16 ಟನ್ ತೂಕದ ಮಹರ್ಷಿ ವಾಲ್ಮೀಕಿಯವರ ಈ ಪುತ್ಥಳಿಯ ನಿರ್ಮಾಣಕ್ಕೆೆ 1.18 ಕೋಟಿ ವೆಚ್ಚ ಖರ್ಚಾಗಿದೆ, ಇಡೀ ವೃತ್ತ ನಿರ್ಮಾಣಕ್ಕೆೆ 8.50 ಕೋಟಿ ರೂ.ಗಳು ಅನುದಾನ ವಿನಿಯೋಗ ಆಗಿದೆ ಎಂದರು.
ಅಯೋಧ್ಯೆೆಯ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿಿರುವ ಕಲಾವಿದ ಅರುಣ್ ಯೋಗಿರಾಜ್ ಅವರೇ ಬಳ್ಳಾಾರಿಯ ಈ ವಾಲ್ಮೀಕಿಯವರ ಪುತ್ಥಳಿಯನ್ನು ಕೆತ್ತಿಿದ್ದು, ರಾಮಲಲ್ಲಾನ ಮೂರ್ತಿಗೆ ಬಳಸಲಾದ ಕಲ್ಲನ್ನೇ ಈ ಮೂರ್ತಿಗೆ ಬಳಸಲಾಗಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿಿ, ಅರುಣ್ ಯೋಗಿರಾಜ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ವಾಲ್ಮೀಕಿಯವರ ಪುತ್ಥಳಿ ಇಡೀ ದೇಶದಲ್ಲಿ ಇದೇ ಒಂದು ಎಂದರು.
ಜ.03 ರಂದು ಅದ್ಧೂರಿಯಾಗಿ ಪುತ್ಥಳಿಯ ಅನಾವರಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ, ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಮಾಜಿ ಸಚಿವ ಶಾಸಕ ಬಿ.ನಾಗೇಂದ್ರ, ಶಾಸಕರಾದ ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ ಹಾಗೂ ಎಸ್ಟಿಿ ಸಮುದಾಯದ ಹಲವು ಶಾಸಕರು ಭಾಗಿಯಾಗಲಿದ್ದಾರೆ, ಕಾರ್ಯಕ್ರಮದ ಸಾನಿಧ್ಯ ರಾಜನಹಳ್ಳಿಿ ವಾಲ್ಮೀಕಿ ಪೀಠದ ಪ್ರಸನ್ನಾಾನಂದಪುರಿ ಸ್ವಾಾಮೀಜಿ ವಹಿಸಲಿದ್ದಾರೆ ಎಂದರು.
ಭವ್ಯ ಮೆರವಣಿಗೆ, ಕುಂಭ-ಕಳಶ ಹೊತ್ತ ಮಹಿಳೆಯರಿಂದ ಪುತ್ಥಳಿಗೆ ಸ್ವಾಾಗತ: ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಸ್ವಾಾಗತಿಸಲು ವಾಲ್ಮೀಕಿ ನಾಯಕರ ಸಮಾಜದ ವತಿಯಿಂದ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾವಿರಾರು ಜನರು, ಮುಖಂಡರು ಭಾಗಿಯಾದರು. ಹಲವು ಗಣ್ಯರು ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. 1008 ಜನ ಕುಂಭ-ಕಳಶ ಹೊತ್ತ ಮಹಿಳೆಯರು, ವಿವಿಧ ಕಲಾ ವಾದ್ಯ ತಂಡಗಳೊಂದಿಗೆ ಜರುಗಿದ ಮೆರವಣಿಗೆಯು ಕಣ್ಣಿಿಗೆ ಹಬ್ಬದಂತಿತ್ತು. ಕೋಟೆ ಶ್ರೀ ಆಂಜನೇಯಸ್ವಾಾಮಿ ದೇವಸ್ಥಾಾನದಿಂದ ವಾಲ್ಮೀಕಿ ವೃತ್ತದವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ವಾಲ್ಮೀಕಿ ನಾಯಕರ ಸಮಾಜದ ಮುಖಂಡ, ಮಾಜಿ ಸಂಸದ ಸಣ್ಣಕ್ಕೀರಪ್ಪ, ಗುಮ್ಮನೂರು ಚಿನ್ನಾಾಯಪ್ಪ, ಕೆಇಬಿ ರುದ್ರಪ್ಪ, ವಕೀಲರಾದ ಜಯರಾಂ, ನಾಗರಾಜ, ರಾಂಪ್ರಸಾದ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ತಿಮ್ಮನಗೌಡ, ನಾಗಭೂಷಣಗೌಡ, ಮೇಯರ್ ಪಿ.ಗಾದೆಪ್ಪ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಜಶೇಖರ, ಕೆ.ಎಸ್ .ಅಶೋಕ್, ನೂರ್ ಮೊಹಮ್ಮದ್, ಕುಬೇರಾ, ಆಸ್ಿ, ಪಿ.ಶಶಿಕಲಾ, ವೆಂಕಟೇಶ ಹೆಗಡೆ, ಮಹಮ್ಮದ್ ಭಾಯ್, ಪರಶುರಾಮುಡು, ದೇವಿನಗರ ಹೊನ್ನೂರಪ್ಪ, ಹಗರಿ ಗೋವಿಂದ, ಹಾವಂಭಾವಿ ಲೋಕೇಶ್, ಯರಗುಡಿ ಸೋಮಣ್ಣ, ಮುದಿಮಲ್ಲಯ್ಯ, ಕೆ.ಕೆ.ಹಾಳ್ ಸತ್ಯನಾರಾಯಣ, ಹುಲಿಯಪ್ಪ, ಪಿ.ಜಗನ್ನಾಾಥ, ಕೆ.ಎಸ್.ದಿವಾಕರ್, ವಿ.ಎನ್.ಶ್ರೀನಾಥ, ಲಾಲಸ್ವಾಾಮಿ, ಬಸರಕೋಡು ಗೋವಿಂದ, ಎಪಿಎಂಸಿ ರಾಮಣ್ಣ, ಸುಧಾಕರ್, ಭವಾನಿ ಪ್ರಸಾದ್, ಪದ್ಮಾಾ, ಮಂಜುಳಾ ಸೇರಿದಂತೆ ಹಲವರು ಹಾಜರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ