Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಲವು ಗ್ರಾಾಮಗಳು ಜಲಾವೃತ, ಜನಜೀವನ ಅಸ್ತವ್ಯಸ್ತ : ಭೀಮೆಯ ಪ್ರವಾಹಕ್ಕೆೆ ತತ್ತರಿಸಿದ ಕಲಬುರಗಿ

ಸುದ್ದಿಮೂಲ ವಾರ್ತೆ ಕಲಬುರಗಿ, ಸೆ.28:
ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ನದಿ ಪಾತ್ರದ ಗ್ರಾಾಮಗಳು ತತ್ತರಿಸಿಹೋಗಿದ್ದು, ಪ್ರವಾಹದಿಂದ ಹಲವು ಗ್ರಾಾಮಗಳು ಜಲಾವೃತಗೊಂಡು ಸಂಪೂರ್ಣ ಜನ ಜೀವನ ಅಸ್ತವ್ಯಗೊಂಡಿದೆ.
ಕಲಬುರಗಿ ತಾಲೂಕಿನ ಸರಡಗಿ(ಬಿ), ಜೇವರ್ಗಿ ತಾಲೂಕಿನ ಕಟ್ಟಿಿ ಸಂಗಾವಿ, ಕೂಡಿ, ಕೋಬಾಳ್, ಮಲ್ಲಾ ಕೆ, ಮಲ್ಲಾ ಬಿ, ಬೀರಾಳ, ಹೊತ್ತಿಿನಮಡು, ಹೊನ್ನಾಾಳ ಸೇರಿದಂತೆ ಹಲವು ಗ್ರಾಾಮಗಳು ಪ್ರವಾಹಕ್ಕೆೆ ತುತ್ತಾಾಗಿದ್ದು, ಜನರು ಸಂಕಷ್ಟಕ್ಕೆೆ ಸಿಲುಕಿದ್ದಾರೆ.
ಕಲಬುರಗಿ ತಾಲೂಕಿನ ಸರಡಗಿ(ಬಿ) ಗ್ರಾಾಮವು ಭೀಮೆಯ ಪ್ರವಾಹಕ್ಕೆೆ ತುತ್ತಾಾಗಿ ಅಕ್ಷರಶಃ ನಲುಗಿಹೋಗಿದೆ. ಸಂಪೂರ್ಣ ಗ್ರಾಾಮ ಜಲಾವೃತಗೊಂಡಿದ್ದು, ಹಲವು ಮನೆಗಳು ಅರ್ಧದಷ್ಟು ಮುಳುಗಡೆಗೊಂಡಿದ್ದು, ಗ್ರಾಾಮವು ದ್ವೀಪಪ್ರದೇಶದಂತಾಗಿದೆ.
ಸರಡಗಿ(ಬಿ) ಗ್ರಾಾಮಕ್ಕೆೆ ಭೀಮಾ ನದಿ ನೀರು ನುಗ್ಗಿಿ ನಾಲ್ಕು ದಿನಗಳು ಆದರೂ ನಮ್ಮ ಗ್ರಾಾಮಕ್ಕೆೆ ಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ್ ಅವರು ಭೇಟಿ ನೀಡಿಲ್ಲ ಎಂದು ಗ್ರಾಾಮಸ್ಥರು ಭಾರಿ ಆಕ್ರೋೋಶ ವ್ಯಕ್ತಪಡಿಸಿದರು.
ಮತ ಕೇಳಲು ಬರುವ ಶಾಸಕರು, ಜನಪ್ರತಿನಿಧಿಗಳು, ಕಳೆದ ನಾಲ್ಕು ದಿನಗಳಿಂದ ಗ್ರಾಾಮದಲ್ಲಿ ನೀರು ಹೊಕ್ಕಿಿವೆ, ಆದರೆ ಇಲ್ಲಿಯವರೆಗೆ ಯಾರು ಬಂದಿಲ್ಲ. ನಮ್ಮ ಸಮಸ್ಯೆೆ ಕೇಳುತ್ತಿಿಲ್ಲ. ಸರಿಯಾಗಿ ಊಟ ಸಹ ನೀಡಿಲ್ಲ ಎಂದು ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸಿದರು.
ಭೀಮಾ ನದಿ ಪ್ರವಾಹದಿಂದ ನಮ್ಮ ಮನೆಗಳಿಗೆ ನೀರು ನುಗ್ಗಿಿ ಮನೆಗಳು ಸಂಪೂರ್ಣ ಹಾಳಾಗಿವೆ, ನಮ್ಮಗೆ ಮನೆಗಳನ್ನು ಕಲ್ಪಿಿಸಬೇಕು ಎಂದು ಗ್ರಾಾಮದ ಅನೇಕ ಮಹಿಳೆಯರು ಸರ್ಕಾರಕ್ಕೆೆ ಮನವಿ ಮಾಡಿದರು.
ಪ್ರವಾಹದಲ್ಲಿ ಕೊಚ್ಚಿಿ ಹೋದ ಮೀನುಗಾರರ ಬದುಕು:
ಸರಡಗಿ(ಬಿ) ಗ್ರಾಾಮದ ಭೀಮಾ ನದಿ ಪಾತ್ರದಲ್ಲಿ ಮೀನುಗಾರಿಕೆ ಮೂಲಕ ಜೀವನ ಕಟ್ಟಿಿಕೊಂಡಿದ ಮೀನುಗಾರರ ಕುಟುಂಬದ ಬದುಕು ಭೀಮಾ ನದಿ ಪ್ರವಾಹದಲ್ಲಿ ಕೊಚ್ಚಿಿಕೊಂಡು ಹೋಗಿದೆ.
ಮೀನುಗಾರಿಕೆ ಮೂಲಕ ಜೀವನ ನಡೆಸುತ್ತಿಿದ ಮೀನುಗಾರರ 8 ಮನೆಗಳಿಗೆ ನದಿ ನೀರು ನುಗ್ಗಿಿ, ಮೀನುಗಾರಿಕೆ ಬಲೆ, ಕಿಸ್ತಿಿ ನೀರಿನಲ್ಲಿ ಕೊಚ್ಚಿಿಕೊಂಡು ಹೋಗಿ ನದಿ ಪಾಲಾಗಿವೆ ಎಂದು ಮೀನುಗಾರರ ಕುಟುಂಬದವರು ತಮ್ಮ ನೋವು ತೋಡಿಕೊಂಡರು.
ಭೀಮಾ ನದಿ ಪ್ರವಾಹದಿಂದಾಗಿ ಕುಟುಂಬದಲ್ಲಿನ ಮಕ್ಕಳು, ಗರ್ಭಿಣಿ ಮಹಿಳೆ ಜತೆಗೆ ಕಾಳಜಿ ಕೇಂದ್ರದಲ್ಲಿ ಬಂದು ಉಳಿದ್ದಿದ್ದೇವೆ. ನಮಗೆ ಶಾಶ್ವತ ಪುನರ್ ವಸತಿ ಕಲ್ಪಿಿಸಬೇಕು. ಕಳೆದ ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ನಮ್ಮಗೆ ಪುನರ ವಸತಿ ಕಲ್ಪಿಿಸುತ್ತೇವೆ ಎಂದು ಹೇಳಿದರು. ಆದರೆ ಇಲ್ಲಿಯವರೆಗೂ ಕಲ್ಪಿಿಸಿಲ್ಲ. ಈ ಬಾರಿ ನಮ್ಮಗೆ ಪುನರ ವಸತಿ ಕಲ್ಪಿಿಸಬೇಕು ಎಂದು ಮೀನುಗಾರ ಕುಟುಂಬ ಮಹಿಳೆ ಭೀಮಭಾಯಿ ಸರ್ಕಾರಕ್ಕೆೆ ಮನವಿ ಮಾಡಿದರು.
ರಾಷ್ಟೀಯ ಹೆದ್ದಾರಿ ಬಂದ್ :
ಭೀಮಾ ನದಿ ಪ್ರವಾಹದ ಹಿನ್ನಲೆ ಬೀದರ್ - ಶ್ರೀರಂಗಪಟ್ಟಣ ರಾಷ್ಟೀಯ ಹೆದ್ದಾರಿಯನ್ನು ಕಟ್ಟಿಿ ಸಂಗಾವಿ ಹಾಗೂ ಸರಡಗಿ ಬ್ರಿಿಡ್ಜ್ ಕ್ರಾಾಸ್ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಭೀಮಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಾಗಿ ಕಟ್ಟಿಿ ಸಂಗಾವಿ ಸೇತುವೆ ಮೇಲಿಂದ ನೀರು ಹರಿದಿದ್ದರಿಂದ ಸಂಚಾರ ಬಂದ್ ಮಾಡಲಾಗಿತ್ತು. ಇನ್ನೂ, ರಾಷ್ಟೀಯ ಹೆದ್ದಾರಿಯ ಸರಡಗಿ ಬ್ರಿಿಡ್ಜ್ ಕ್ರಾಾಸ್ ಬಳಿಯ ಖಣಿ ಬಳಿ ಸಣ್ಣ ಸೇತುವೆ ಜಲಾವೃತಗೊಂಡಿದರಿಂದ ಸರಡಗಿ ಬ್ರಿಿಡ್ಜ್ ಕ್ರಾಾಸ್ ಬಳಿಯೇ ಸಂಚಾರ ಬಂದ್ ಮಾಡಲಾಗಿತ್ತು. ಕಲಬುರಗಿ ಜೇವರ್ಗಿ ತೆರಳು ಪ್ರಯಾಣಿಕರು ಕೂಡಿ ಮಾರ್ಗವಾಗಿ ಸಂಚರಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ