Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ವಾಣಿಜ್ಯ ಮಳಗಿ ಹರಾಜಿಗೆ ಮೀನಾಮೇಷ

ಸುದ್ದಿಮೂಲವಾರ್ತೆ

ಕೊಪ್ಪಳ,ಸೆ.11:ಕೊಪ್ಪಳ ನಗರಸಭೆಯು ಕೇವಲ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ನಗರಸಭೆಗೆ ಆದಾಯ ತರುವ ಮಳಗಿಗಳನ್ನು ಬಾಡಿಗೆ ನೀಡದೆ ನಿರ್ಲಕ್ಷ್ಯ ವಹಿಸಿ ಆದಾಯಕ್ಕೆ ಖೋತಾ ಮಾಡಿಕೊಳ್ಳುತ್ತಿದೆ. ನಗರಸಭೆಯ ನಿರ್ಮಿಸಿದ ಮಳಗಿಗಳು ಈಗ ಖಾಲಿ ಬಿದ್ದಿವೆ.

ಕೊಪ್ಪಳ ನಗರದಲ್ಲಿ ಖಾಸಗಿಯಾಗಿ ಯಾರೇ ವಾಣಿಜ್ಯ ಗಳನ್ನು ನಿರ್ಮಿಸಿದರೂ ನಿರ್ಮಾಣ ಹಂತದಲ್ಲಿಯೇ ಅವುಗಳಿಗೆ ಬಾಡಿಗೆದಾರರು ಬರುತ್ತಾರೆ. ಆದರೆ ಕೊಪ್ಪಳ ನಗರಸಭೆಯಿಂದ ನಿರ್ಮಿಸಿದ ವಾಣಿಜ್ಯ ಮಳಗಿಗಳಿಗೆ ಬೇಡಿಕೆ ಇದ್ದರೂ ಬಾಡಿಗೆ ನೀಡಲು ಮೀನಾ ಮೇಷ ಎಣಿಸುತ್ತಿದೆ. ಇದರಿಂದಾಗಿ ವಾಣಿಜ್ಯಗಳು ಮಳಗಿಗಳು ಖಾಲಿ ಬಿದ್ದಿವೆ.

ಸಣ್ಣ ಹಾಗು ಮಧ್ಯಮ ನಗರಗಳ ಅಭಿವೃದ್ದಿ ಯೋಜನೆ( ಐಡಿಎಸ್ಎಂಟಿ) ಯೋಜನೆಯಲ್ಲಿ ಕೊಪ್ಪಳದಲ್ಲಿ ಎರಡು ಕಡೆ ವಾಣಿಜ್ಯ ಮಳಗಿಗಳನ್ನು ನಿರ್ಮಿಸಿದ್ದರು. ನಗರಸಭೆಯ ಪಕ್ಕದಲ್ಲಿ ಹಾಗು ಬಸ್ ನಿಲ್ದಾಣ ಮುಂದೆ ಬೃಹತ್ ವಾಣಿಜ್ಯ ಮಳಗಿಗಳನ್ನು ನಿರ್ಮಿಸಿದ್ದರು. ಆದರೆ ಬಸ್ ನಿಲ್ದಾಣ ಮುಂದೆ ಇದ್ದ ಬೃಹತ್ ಕಟ್ಟಡವು ಸುಸ್ಥಿತಿಯಲ್ಲಿದ್ದರೂ ಈ ಕಟ್ಟಡ ಶಿಥಲಾವಸ್ಥೆಯಲ್ಲಿದೆ ಎಂದು 2021 ರ ಮೇ ತಿಂಗಳಲ್ಲಿ ಕೆಡವಿದರು. ಇದೇ ಜಾಗೆಯಲ್ಲಿ ಮತ್ತೆ ಮೂರು ಅಂತಸ್ತಿನ ಒಟ್ಟು 36 ವಾಣಿಜ್ಯ ಮಳಗಿಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು.

ಇದರಿಂದ ಮೊದಲು ಹಂತವಾಗಿ 8 ವಾಣಿಜ್ಯ ಮಳಗಿಗಳನ್ನು 50 ಲಕ್ಷ ರೂಪಾಯಿ ನಿರ್ಮಿಸಿದೆ. ನಿರ್ಮಿಸಿ ಒಂದು ವರ್ಷವಾದರೂ ಈ ಮಳಗಿಗಳನ್ನು ಹರಾಜು ಮಾಡಿ ಬಾಡಿಗೆದಾರರಿಗೆ ನೀಡಬೇಕು. ಆದರೆ ನಗರಸಭೆಯು ಈ ಕುರಿತು ಚಿಂತನೆ ಮಾಡಿಲ್ಲ. ಖಾಸಗಿಯಾಗಿರುವ ವಾಣಿಜ್ಯ ಮಳಗಿಗಳಿಗೆ 8-10 ಸಾವಿರ ರೂಪಾಯಿ ಪ್ರತಿ ತಿಂಗಳು ಬಾಡಿಗೆ ನೀಡುತ್ತಾರೆ. ನಗರಸಭೆಯು ಇಲ್ಲಿ ಬಾಡಿಗೆಯನ್ನು ನಿಗಿದಿ ಮಾಡಿ ಟೆಂಡರ್ ಕರೆದು ವಾಣಿಜ್ಯ ಮಳಗಿಗಳನ್ನು ನೀಡಬೇಕು. ಆದರೆ ನಗರಸಭೆಯು ಇತ್ತ ನೋಡಿಯೇ ಇಲ್ಲ.

ನಗರಸಭೆಗೆ ಪ್ರತಿ ತಿಂಗಳ ಆದಾಯ ಬರುತ್ತಿತ್ತು. ತಮ್ಮ ಆದಾಯಕ್ಕೂ ಕಾಳಜಿ ವಹಿಸದೆ ವಾಣಿಜ್ಯ ಮಳಗಿಗಳನ್ನು ಹಾಗೆಯೇ ಬಿಡಲಾಗಿದೆ. ಬರುವ ದಿನಗಳಲ್ಲಿ ಈ ವಾಣಿಜ್ಯ ಮಳಗಿಗಳು ಬಳಕೆಯಿಲ್ಲ ಹಾಳಾಗುವ ಸಾಧ್ಯತೆ ಇದೆ. ಈಗಲಾದರೂ ನಗರಸಭೆ ಇತ್ತ ನೋಡುತ್ತಾ ಕಾದು ನೋಡಬೇಕು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ