Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಗಾಳಿಪಟ ಗುರಿ ಮುಟ್ಟುವ ಪಾಠ ಕಲಿಸುತ್ತದೆ: ಎನ್ ಚಲುವರಾಯಸ್ವಾಮಿ

ಆ,13:ಜೀವನದಲ್ಲಿ ನಿಗದಿಪಡಿಸಿಕೊಳ್ಳುವ ಗುರಿಯನ್ನು ತಲುಪಬೇಕು ಎಂಬ ಪಾಠವನ್ನು ಗಾಳಿಪಟ ಕಲಿಸುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜನಪದ ಪರಿಷತ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 33 ನೇ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ಅನ್ನ ದಸೋಹದ ಜೊತೆಗೆ ಜನಪದ ಕಲೆಯನ್ನು ಆದಿ ಚುಂಚನಗಿರಿ ಮಠ ಪೋಷಿಸುತ್ತಿದೆ. ಮಠ ಜನಪದ ಕಲೆಯಲ್ಲಿ ಆಸಕ್ತಿ ಹೊಂದಿರುವವರನ್ನು ಬೆಳೆಸಿ ಅವರ ಕಲೆಯನ್ನು ಸಮಾಜಕ್ಕೆ ನೀಡುತ್ತಿದೆ ಎಂದರು.

ಗಾಳಿಪಟ ಮನಸ್ಸಿಗೆ ಸಂತೋಷ ನೀಡುವ ಕ್ರೀಡೆ, ಆಷಾಢದಏಕದಾಶಿಯಲ್ಲಿ ಮೊದಲು ಎಲ್ಲಡೆ ಗಾಳಿಪಟದ ಹಾರಾಟವನ್ನು ನೋಡುತ್ತಿದ್ದೇವೆ. ಇದು ಮೊದಲು ಸಾರ್ವಜನಿಕರ ಹಬ್ಬವಾಗಿತ್ತು. ಇಂದು ಜನಪದ ಕ್ರೀಡೆಗಳಿಂದ ಜನರು ವಿಮುಖರಾಗುತ್ತಿದ್ದು, ಇಂದು ಸರ್ಕಾರದಿಂದ ಆಚರಿಸಲಾಗುತ್ತಿದೆ. ಜನಪದ ಕಲೆ ಹಾಗೂ ಕ್ರೀಡೆಯನ್ನು ಉಳಿಸಿ ಬೆಳಸಬೇಕಿದೆ ಎಂದರು.

ಗಾಳಿಪಟ ಹಾರಿಸಿದ ಅನುಭವ ಸಿಗುವುದು ಅದನ್ನು ಹಾರಾಟ ಮಾಡಿದಾಗ, ಬದುಕಿನ ಸುತ್ತ ಕಷ್ಟಗಳಿರುತ್ತದೆ. ಅದನ್ನು ಗೆಲ್ಲಲ್ಲೂ ದ್ವೇಷ, ಅಸೂಯೆ ಯನ್ನು ದೂರವಿಟ್ಟಿ ತತ್ವ, ಸಿದ್ದಾಂತ ಎಂಬ ಸೂತ್ರವನ್ನು ರೂಡಿಸಿಕೊಂಡು ಜೀವನದ ಗಾಳಿಪಟ ಹಾರಿಸುವ ಕಲೆಗಾರರಾಗಬೇಕು. ಆಗ ಆಕಾಶದ ಯಾವುದೇ ಎತ್ತರಕ್ಕೂ ಏರಲೂ ಅಥವಾ ಬೆಳೆಯಲು ಸಾಧ್ಯ. ಸೂತ್ರ ಮುರಿದು ಹೋದಾರೆ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಡಾಃ ನಿರ್ಮಾಲಾನಂದ ಮಹಾಸ್ವಾಮೀಜಿಗಳು ತಿಳಿಸಿದರು.

ಗಾಳಿಪಟ ತುಂಬ ಹಳೆಯ ಕಾರ್ಯಚಟುವಟಿಕೆಯಾಗಿದ್ದು, ಯುವಕರು ಹಾಗೂ ವಯಸ್ಸಾದವರಿಗೆ ಉತ್ಸವ ತುಂಬುವ ಚಟುವಟಿಕೆ. ಮಕ್ಕಳ ಜೀವನದಲ್ಲಿ ಉಲ್ಲಾಸ, ಜಿಗಿಯುವ ಮತ್ತು ಮಹತ್ತರ ಸಾಧನೆ ಸಾಧಿಸುವ ಛಲವನ್ನು ಗಾಳಿಪಟ ತುಂಬುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ನ ರಾಜ್ಯಾಧ್ಯಕ್ಷ ಇ.ಸಿ. ರಾಮಚಂದ್ರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಪೂಜಾ ಕುಣಿತ, ಕಂಸಾಳೆ, ಪಟ ಕುಣಿತ,ಹುಲಿವೇಷ, ಪೂರ್ಣ ಕುಂಭ ಹೊತ್ತ ಮಹಿಳೆಯರು, ಮಾಚ್೯ ಫಾಸ್ಟ್ ನೊಂದಿಗೆ ಸ್ವಾಗತಿಸಿದರು.

ಹೆಣ್ಣು ಭ್ರೂಣ ಹತ್ಯೆ ಅಪರಾಧ, ಪರಿಸರ ಉಳಿಸಿ,, ಓಂ ಕಾರ, ಪುನೀತ ರಾಜ್ ಕುಮಾರ್, ಆದಿ ಚುಂಚನಗಿರಿ ಬಾಲಗಂಗಾಧರ್ ನಾಥ್ ಮಹಾಸ್ವಾಮೀಜಿ, ಅಂಜುನೇಯ ಸ್ವಾಮಿ ಸುಂದರ ಮಹಿಳೆ,‌ ವಿವಿಧ ಪಕ್ಷಿ ಆಕೃತಿಯ ಪಟಗಳು, ಸೇರಿದಂತೆ ವಿವಿಧ‌ ಪಟಗಳನ್ನು ಹಾರಿಸಿದರು

ಕಾರ್ಯಕ್ರಮದಲ್ಲಿ, ಮಂಡ್ಯ ಶಾಸಕರಾದ ರವಿಕುಮಾರ್, ಜಿಲ್ಲಾಧಿಕಾರಿ ಡಾ:ಕುಮಾರ, ಜಿಲ್ಲಾ ಪೊಲೀಸ್ ‌ವರಿಷ್ಢಾಧಿಕಾರಿ ಎನ್, ಯತೀಶ್ ,ಜಿಲ್ಲಾ ಪಂಚಾಯತ್ ಮಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್,ಉಪವಿಭಾಗಾಧಿಕಾರಿ ನಂದೀಶ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಿ.ಎನ್ ಮಂಜೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ