Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಡಿ.3ರಂದು ಅಂಜನಾದ್ರಿಿಯಲ್ಲಿ ಹನುಮಮಾಲಾ ವಿಸರ್ಜನೆ ಗಂಗಾವತಿಯಲ್ಲಿ ಸಂಕೀರ್ತನಾ ಶೋಭಾಯಾತ್ರೆ - ಸೂರ್ಯನಾರಾಯಣ

ಸುದ್ದಿಮೂಲ ವಾರ್ತೆ ಗಂಗಾವತಿ, ನ.30:
ಪ್ರತಿ ವರ್ಷದಂತೆ ಈ ಬಾರಿಯು ಕೂಡ ಗಂಗಾವತಿ ತಾಲೂಕಿನ ಐತಿಹಾಸಕ ಪ್ರಸಿದ್ಧ ಅಂಜನಾದ್ರಿಿ ಪರ್ವತದಲ್ಲಿನ ಶ್ರೀಆಂಜನೇಯ ಸ್ವಾಾಮಿ ದೇವರ ಸನ್ನಿಿಧಿಯಲ್ಲಿ ಡಿ.3 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವಿಶ್ವ ಬಜರಂಗ ದಳದ ಕ್ಷೇತ್ರ ಪ್ರಮುಖ ಸೂರ್ಯನಾರಾಯಣ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಆಮಂತ್ರಣ ಪತ್ರಿಿಕೆ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯದ ನಾನಾ ಜಿಲ್ಲೆೆಗಳಿಂದ ಒಂದುವರೆ ಲಕ್ಷಕ್ಕೂ ಅಧಿಕ ಮಾಲಾಧಾರಿಗಳು ಅಂಜನಾದ್ರಿಿ ಬೆಟ್ಟಕ್ಕೆೆ ಆಗಮಿಸಿ, ಮಾಲೆಯನ್ನು ವಿಸರ್ಜನೆ ಮಾಡಿ, ಹನುಮನ ದರ್ಶನ ಪಡೆದುಕೊಳ್ಳಲಿದ್ದಾಾರೆ.
ಸಂಕೀರ್ತನಾ ಶೋಭಾಯಾತ್ರೆೆ : ಹನುಮಮಾಲಾ ವಿಸರ್ಜನೆಯ ಅಂಗವಾಗಿ ಗಂಗಾವತಿ ನಗರದಲ್ಲಿ ಡಿಸೆಂಬರ 03 ರಂದು ಬೃಹತ್ ಸಂಕೀರ್ತನಾ ಶೋಭಾಯಾತ್ರೆೆಯನ್ನು ವಿಶ್ವ ಹಿಂದು ಪರಿಷತ್, ಬಜರಂಗದಳದವತಿಯಿಂದ ಹಮ್ಮಿಿಕೊಳ್ಳಲಾಗಿದೆ. ಬೆಳಗ್ಗೆೆ 08 ಗಂಟೆಗೆ ನಗರದ ಎಪಿಎಂಸಿ ಆವರಣದ ಸಮುದಾಯ ಭವನದಿಂದ ಶೋಭಾಯಾತ್ರೆೆಯು ಆರಂಭವಾಗಲಿದ್ದು, ಪ್ರಮುಖ ಸರ್ಕಲ್‌ಗಳಲ್ಲಿ ಮೆರವಣಿಗೆಯನ್ನು ನಡೆಸಿ, ಡಾ.ಬಾಬು ಜಗಜೀವನರಾಮ ವೃತ್ತದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲಾಗುವುದು ಎಂದರು.
ನಾನಾ ಭಾಗಗಳಿಂದ ಶೋಭಾಯಾತ್ರೆೆಯಲ್ಲಿ ಭಾಗವಹಿಸಲು ಆಗಮಿಸುವ ಮಾಲಾಧಾರಿಗಳಿಗೆ ರಾತ್ರಿಿಯ ಉಪಹಾರ ಹಾಗೂ ಮುಂಜಾನೆಯ ಉಪಹಾರದ ವ್ಯವಸ್ಥೆೆಯನ್ನು ಮಾಡಲಾಗುತ್ತಿಿದೆ. ಅಧಿಕ ಸಂಖ್ಯೆೆಯಲ್ಲಿ ಮಾಲಾಧಾರಿಗಳು ಸೇರಿದಂತೆ ಹಿಂದುಗಳು ಶೋಭಾಯಾತ್ರೆೆಯಲ್ಲಿ ಭಾಗವಹಿಸುವ ಮೂಲಕ ಶೋಭಾಯಾತ್ರೆೆಯನ್ನು ಯಶಸ್ವಿಿಗೊಳಿಸಬೇಕು ಎಂದು ಹೇಳಿದರು.
ಬಜರಂಗದಳದ ಪ್ರಾಾಂತ ಸಹ ಕಾರ್ಯದರ್ಶಿ ಪುಂಡಲೀಕ ದಳವಾಯಿ ಪ್ರಮುಖರಾದ ಬಸವರಾಜಗೌಡರು, ಮಲ್ಲಿಕಾರ್ಜುನ, ಉಗಮರಾಜ್ ಜೈನ್, ರಾಮಾಂಜನೇಯ, ವಿನಯ್ ಪಾಟೀಲ್ ಹಾಗೂ ಇತರರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ