Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅನ್ಯ ಭಾಷಿಕರಿಗೆ ಕನ್ನಡದಲ್ಲೇ ಉತ್ತರಿಸುವ ಮನೋಭಾವ ಹೊಂದಬೇಕು

ಸುದ್ದಿಮೂಲ ವಾರ್ತೆ

ದೇವನಹಳ್ಳಿ,ನ.27: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಯ ರಾಯಭಾರಿಯಾಗಿ ನೆಲದ ಸದ್ವಿಚಾರಗಳನ್ನು ಕಾಪಾಡುವ ಸೈನಿಕನಂತೆ ಯುವಕರು ಕೆಲಸ ಮಾಡಬೇಕಿದೆ. ನೆಲದ ಭಾಷೆಗೆ ಗೌರವ ನೀಡಿದರೇ ಎಲ್ಲರಿಗೂ ಗೌರವ ನೀಡಿದಂತೆ' ಎಂದು ಜಾಲಿಗೆ ಪಂಚಾಯಿತಿಯ ಸದಸ್ಯ ಬೆಟ್ಟಹಳ್ಳಿ ಮಹೇಶ ಕುಮಾರ್ ತಿಳಿಸಿದರು.

ತಾಲ್ಲೂಕಿನ ಕುಂದಾಣ ಹೋಬಳಿಯ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಕರ್ನಾಟಕ ಸಂಭ್ರಮ-50' ಕಾರ್ಯಕ್ರಮದಲ್ಲಿ ಮಹೇಶ್ವರಮ್ಮ ದೇವಿ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ಓದುವಂತೆ ಮಾತನಾಡುವ, ಮಾತನಾಡುವಂತೆ ಬರೆಯುವ ಹಾಗೂ ನುಡಿದಂತೆ ನಡೆಯುವ ಜನರು ಕನ್ನಡಿಗರು. ಶಿವನ ಡಮರುಗದ ನಾದದಿಂದ ಕನ್ನಡ ಭಾಷೆ ಉಗಮಗೊಂಡಿದ್ದು, ಇದೊಂದು ದೇವಭಾಷೆಯಾಗಿದೆ. ಕರುನಾಡಿನಲ್ಲಿ ಜನ್ಮಿಸಿದ ಭಗವಾನ್ ನುಮಂತನಂತೆ ಕನ್ನಡ ಭಾಷೆಯೂ ಚಿರಂಜೀವಿಯಾಗಿದ್ದು, ಕನ್ನಡಿಗರ ಆಸ್ಮಿತೆಯ ಪ್ರತೀಕವಾಗಿದೆ' ಎಂದು ತಿಳಿಸಿದರು.

ವಿಶ್ವ ಲಿಪಿಗಳ ರಾಣಿ ಎಂದೇ ಕನ್ನಡವನ್ನು ಗುರುತ್ತಿರುತ್ತಾರೆ. ಪ್ರಪಂಚದಲ್ಲಿ ಅತ್ಯಂತ ವೈಜ್ಞಾನಿಕ ಭಾಷೆ ಕನ್ನಡ, ಶ್ರೀಮಂತ ಇತಿಹಾಸ ಹೊಂದಿರು ಕನ್ನಡ ನುಡಿಯ ವೈಭವ ಸ್ಮರಿಸುತ್ತಾ, ನಾಡಿನ ಏಕೀಕರಣಕ್ಕೆ ಶ್ರಮಿಸಿದ ಮಹಾನೀಯರನ್ನು ಸ್ಮರಿಸುತ್ತಾ ಭುವನೇಶ್ವರಿಯ ಸೇವೆಗೆ ಯುವ ಪಡೆ ಸಜ್ಜಾಗಬೇಕು' ಎಂದು ಕರೆ ನೀಡಿದರು.

ಜಾಲಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್‌.ಎಂ.ಆನಂದ್ ಕುಮಾರ್ ಮಾತನಾಡಿ, 'ಅನ್ಯ ಭಾಷಿಕರು ಮಾತನಾಡುವಾಗ ನಮ್ಮ ಭಾಷೆಯಲ್ಲಿ ಉತ್ತರಿಸುವ ಮನೋಭಾವ ಹೊಂದಬೇಕು. ಭಾ‍‍ಷಾಭಿಮಾನವನ್ನು ನಿಜ ಜೀವನದಲ್ಲಿ ಪ್ರದರ್ಶಿಸುವ ಅಗತ್ಯತೆ ಇದೆ. ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿಯ ಕುರಿತು ವೈವಿಧ್ಯಮಯವಾದ ಸಮಾರಂಭಗಳು ವರ್ಷದ ಎಲ್ಲ ತಿಂಗಳ ಆಯೋಜಿಸಬೇಕು' ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಗ್ರಾಮದ ಮುಖಂಡರಾದ ಮುನೇಗೌಡ, ದೊಡ್ಡಕೆಂಪಣ್ಣ, ಹಿರಿಯರಾದ ಸೀನಪ್ಪ, ಡೇರಿ ಅಧ್ಯಕ್ಷ ಜಯಣ್ಣ, ಬೆಟ್ಟೇನಹಳ್ಳಿ ಹನುಮಸೇನೆಯ ಯುಕವರು, ಕೂರ್ಲಪ್ಪ, ಚಿಕ್ಕ ಮುನಿಯಪ್ಪ, ಕೇಶವ್ , ಮಾಸ್ಟರ್ ರಾಮಾಂಜಿನಪ್ಪ , ಪ್ರಸನ್ನ ಚಾರ್, ಮಹೇಶ್, ಮೋಹನ್, ಮುನಿಯಪ್ಪ ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ