Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕಾವೇರಿ ವಿಷಯದಲ್ಲಿ ಸಿಎಂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು: ಪಂಚಮಸಾಲಿ ಶ್ರೀ

ಸುದ್ದಿಮೂಲವಾರ್ತೆ

ಕೊಪ್ಪಳ ಸೆ 28:ಕಾವೇರಿ ವಿಷಯಕ್ಕೆ ನಾನು ಬೆಂಬಲಿಸುತ್ತೇನೆ. ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲವಿದೆ ಬಂದ್ ಶಾಂತಿಯುತವಾಗಿ ನಡೆಯಲಿ ಎಂದು ಪಂಚಮಸಾಲಿ ಪೀಠದ ಬಸವ ಶ್ರೀಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ಕಾವೇರಿ ವಿಷಯದಲ್ಲಿ ಮುಖ್ಯಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಕುಡಿವ ನೀರಿಗೆ ಆದ್ಯತೆ ನೀಡಬೇಕು. ಜಲ ರಾಷ್ಟೀಯ ಮಂಡಳಿ ರಚಿಸಿ ಎಲ್ಲಾ ನದಿಗಳ ನೀರಿನ ಹಂಚಿಕೆಯ ಬಗ್ಗೆ ಸ್ಪಷ್ಠ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದರು.

ಉತ್ತರ ಹಾಗು ಕಲ್ಯಾಣ ಕರ್ನಾಟಕದವರು ವಿಶಾಲ ಭಾವನೆ ಇದೆ. ಆ ಭಾಗದ ಹೋರಾಟದಲ್ಲಿ ನಮ್ಮವರು ಹೃದಯ ವೈಶಾಲತೆ ಹೊಂದಿದ್ದಾರೆ. ಆದರೆ ನಮ್ಮ ಭಾಗದ ಕೃಷ್ಣಾ ತುಂಗಭದ್ರಾ ನೀರಾವರಿ ಸಮಸ್ಯೆ ಬಂದಾಗ ಅವರು ನಮ್ಮೊಂದಿಗೆ ಇರಬೇಕು.ಈ ಭಾಗದ ನೆಲ ಜಲದ ವಿಷಯಕ್ಕೆ ಆ ಭಾಗದವರು ಧ್ವನಿ ಎತ್ತಬೇಕು. ವಿಶಾಲ ಕರ್ನಾಟಕದಲ್ಲಿ ಒಂದೇ ಭಾವನೆ ಬರಬೇಕು .ಎಲ್ಲಾ ಸರಕಾರಗಳು ಉತ್ತರ ಕರ್ನಾಟಕ ಹಾಗು ಹಳೆಯ ಮೈಸೂರು ಭಾಗದ ಬಗ್ಗೆ ತಾರತಮ್ಯವಿದೆ ಇದು ಹೊಗಲಾಡಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಡಿಸಿಎಂ ಸ್ಥಾನವನ್ನು ಸಮುದಾಯ ಆಧಾರದಲ್ಲಿದ್ದರೆ ನಮ್ಮ ಸಮಾಜಕ್ಕೆ ನೀಡಿ ಎಂದು ಒತ್ತಾಯಿಸುತ್ತೇನೆ‌. ಕಾಂಗ್ರೆಸ್ ಪಕ್ಷದಲ್ಲಿ 11 ಜನ ಪಂಚಮಸಾಲಿ ಸಮಾಜದವು ಆಯ್ಕೆಯಾಗಿದ್ದಾರೆ. ಅವರಲ್ಲಿ ಒಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ಬರವನ್ನು ಸರಕಾರ ವಿಳಂಭ ಮಾಡಬಾರದು ಎಂದು ಆಗ್ರಹಿಸಿದರು.

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದ ನಂತರ ಕೃಷ್ಣಾ ನದಿಗಾಗಿ ಹೋರಾಟ ಮಾಡಲಾಗುವುದು. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ. ಇಲ್ಲವೇ ಕೇಂದ್ರದಲ್ಲಿ ಲಿಂಗಾಯತ್ ಸಮಾಜಕ್ಕೆ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಹಿಂದಿನ ಸರಕಾರದಲ್ಲಿ 2D ಮೀಸಲಾತಿ ಘೋಷಣೆಯ ನಂತರ ಚುನಾವಣೆ ನೀತಿ ಸಂಹಿತೆ ಬಂದಿದೆ. ಹೀಗಾಗಿ ಮೀಸಲಾತಿ ನೆನೆಗುದಿಗೆ ಬಿದ್ದಿತ್ತು ಎಂದರು.

ಬಜೆಟ್ ಅಧಿವೇಶನ ಮುಗಿದು 2 ತಿಂಗಳಾದರೂ ಸಿಎಂ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.. ನಿಪ್ಪಾಣಿಯಿಂದ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಹೋರಾಟ ಮಾಡಲು ಆರಂಭಿಸಿದೆ ಇದೇ ರೀತಿ ಹಿರೇವಂಕಲಕುಂಟಿಯಲ್ಲಿ ಸೆ 30 ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೋರಾಟ ಮಾಡಲಾಗುವುದು. ಕಳೆದ ಸರಕಾರ ನಿಧಾನಗತಿ ನೀತಿ ಅನುಸರಿಸಿದೆ. ಈ ಸರಕಾರವಾದರೂ ಬೇಗನೆ ಮೀಸಲಾತಿ ನೀಡಲಿ. 2024 ರ ಚುನಾವಣೆಯ ಮುನ್ನ ಘೋಷಣೆ ಮಾಡಬೇಕು. ಯಡಿಯೂರಪ್ಪ ಸರಕಾರವು ನಿಧಾನಗತಿ ನೀತಿ ಅನುಸರಿಸಿದರು ಎಂದರು.

ಹೋರಾಟದಲ್ಲಿ ಜನಪ್ರತಿನಿಧಿಗಳು ಭಾಗಿಯಾಗುತ್ತಿಲ್ಲ. ಆದರೆ ಈಗ ಅವರ ಕ್ಷೇತ್ರದ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ನಾನು ಕಡ್ಡಾಯವಾಗಿ ಭಾಗವಹಿಸಿ ಎಂದು ಹೇಳಿಲ್ಲ. ಅನುಕೂಲವಾದಲ್ಲಿ ಭಾಗಿಯಾಗಿ ಎಂದಿದ್ದೇನೆ. ಮೀಸಲಾತಿ ಸಿಗುವವರಿಗೂ ಹೋರಾಟ ನಡೆಸುತ್ತೇವೆ. ಈ ಸರಕಾರದವರು ಪಂಚಮಸಾಲಿ ಕಡೆಗಣಿಸುವುದಿಲ್ಲ ಎಂದುಕೊಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕರಿಯಪ್ಪ ಮೇಟಿ, ಬಸನಗೌಡ ತೊಂಡಿಹಾಳ ಕಳಕನಗೌಡ ಕಲ್ಲೂರು. ಸುಭಾಸ ಎತ್ತಿನಮನಿ ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ