Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ರೈಲಿನಲ್ಲಿ ಶೌಚಾಲಯವಿಲ್ಲದೆ ಪ್ರಯಾಣಿಕರ ಪರದಾಟ..!

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.11:
ಸಿಂಧನೂರಿನಿಂದ ಬೆಳಿಗ್ಗೆೆ 5.15ಕ್ಕೆೆ ಹುಬ್ಬಳ್ಳಿಿಗೆ ಹೊರಡುವ ನೈರುತ್ಯ ರೈಲ್ವೆೆ ಹುಬ್ಬಳ್ಳಿಿ ವಿಭಾಗದ ಡೆಮೋ ರೈಲಿನಲ್ಲಿ ಶೌಚಾಲಯ, ವಾಷ್ ರೂಮ್‌ಗಳ ಕೊರತೆಯಿಂದಾಗಿ ಚಳಿಯಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಮೂತ್ರ/ಮಲ ವಿಸರ್ಜನೆಗೆ ಪರದಾಡುವಂತಾಗಿದೆ. ದೊಡ್ಡದಾದ ಡೆಮೋ ರೈಲಿನಲ್ಲಿ ಬೋಗಿಗಳಿಗೆ ತಕ್ಕಂತೆ ಶೌಚಾಲಯ, ವಾಷ್ ರೂಮ್ ಇಲ್ಲದಿರುವುದರಿಂದ ಕಿರಿ ಕಿರಿ ಅನುಭವಿಸುತ್ತಿಿದ್ದಾಾರೆ.
ಮೂತ್ರ ವಿಸರ್ಜನೆಗೆ ಕ್ಯೂ !: ಬೆಳಿಗ್ಗೆೆ ವಿಪರೀತ ಚಳಿ ಇರುವುದರಿಂದ ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗುವುದು ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ಆದರೆ ರೈಲಿನಲ್ಲಿ 300ಕ್ಕೂ ಅಧಿಕ ಪ್ರಯಾಣಿಕರಿಗೆ ಬೋಗಿಗಳಲ್ಲಿ ಒಂದೇ ಒಂದು ಶೌಚಾಲಯ ವ್ಯವಸ್ಥೆೆ ಇದ್ದು, ಮೂತ್ರ ವಿಸರ್ಜನೆಗೆ ಕ್ಯೂ ನಿಲ್ಲಬೇಕಿದೆ. ಮೂತ್ರ ವಿಸರ್ಜನೆಗೆ ಹೋದವರು ಸ್ವಲ್ಪ ಹೊತ್ತು ಜಾಸ್ತಿಿಯಾದರೆ ಕ್ಯೂ ನಿಂತವರು ಬಾಗಿಲು ಬಡಿಯುತ್ತಾಾರೆ. ಇದರಿಂದ ಮುಜುಗರ ಅನುಭವಿಸುವಂತಾಗಿದೆ ಎಂದು ಹೆಸರೇಳಲಿಚ್ಚಿಿಸದ ಪ್ರಯಾಣಿಕರೊಬ್ಬರು ತಿಳಿಸಿದ್ದಾಾರೆ.
ಆಸ್ಪತ್ರೆೆಗಳಿಗೆ ಚಿಕಿತ್ಸೆೆಗೆ ಹೋಗುವವರಿಗೆ ಸಂಕಷ್ಟ !!: ಬಹುತೇಕ ಸಿಂಧನೂರು ಸೇರಿದಂತೆ ಗ್ರಾಾಮಾಂತರ ಪ್ರದೇಶದಿಂದ ಹುಬ್ಬಳ್ಳಿಿಗೆ ಚಿಕಿತ್ಸೆೆಗಾಗಿ ಹೋಗುವವರು ಸಂಖ್ಯೆೆ ಹೆಚ್ಚು. ಆದರೆ ಶೌಚಾಲಯಗಳ ಕೊರತೆಯಿಂದ ವಯೋವೃದ್ಧರು, ಮಕ್ಕಳು, ಮಹಿಳೆಯರು ಹಾಗೂ ವಿಕಲಚೇತನರು ಮೂತ್ರ ವಿಸರ್ಜನೆ ಹೋಗಲು ಸಂಕಷ್ಟ ಎದುರಿಸುತ್ತಿಿದ್ದಾಾರೆ. ಕಳೆದ ಎರಡಕ್ಕೂ ಹೆಚ್ಚು ತಿಂಗಳಿಂದ ಇದೇ ರೀತಿ ಸಮಸ್ಯೆೆ ಮುಂದುವರಿದಿದೆ ಎಂದು ವೃದ್ಧರೊಬ್ಬರು ತಿಳಿಸಿದರು.
2 ತಿಂಗಳಿಂದ ಪ್ರಯಾಣಿಕರಿಗೆ ತೊಂದರೆ: ಕಳೆದ 2 ತಿಂಗಳಿಗೂ ಹೆಚ್ಚು ದಿನಗಳಿಂದ ಸಿಂಧನೂರಿನಿಂದ ಡೆಮೋ ರೈಲು ಓಡಾಟ ನಡೆಸಿದ್ದು, ಈ ರೈಲಿನಲ್ಲಿ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿಿದ್ದಾಾರೆ. ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಕಿರಿ ಕಿರಿ ಅನುಭವಿಸುತ್ತ ನೂರಾರು ಕಿ.ಮೀ ಪ್ರಯಾಣಿಸುವಂತಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾಾರೆ.
ಕೇವಲ ಮೂರ್ನಾಲ್ಕು ಶೌಚಾಲಯ ?: ಈ ಡೆಮೋ ರೈಲಿನಲ್ಲಿ 300ಕ್ಕೂ ಹೆಚ್ಚು ಜನರಿಗೆ ಒಂದೇ ಒಂದು ಶೌಚಾಲಯ ವ್ಯವಸ್ಥೆೆ ಕಲ್ಪಿಿಸಲಾಗಿದೆ. ಇಡೀ ರೈಲಿನಲ್ಲಿ ದಿನವೂ ಸಾವಿರಾರು ಜನರು ಪ್ರಯಾಣಿಸುತ್ತಾಾರೆ, ಅಷ್ಟು ಪ್ರಯಾಣಿಕರಿಗೆ ಕೇವಲ ಮೂರ್ನಾಲ್ಕು ಶೌಚಾಲಯ ವ್ಯವಸ್ಥೆೆ ಸಾಲುತ್ತದೆಯೇ ? ಅನುಕೂಲಕರವಲ್ಲದ ರೈಲನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತಿಿದ್ದು, ಇದರಿಂದ ಪ್ರಯಾಣಿಕರು ಸಮಸ್ಯೆೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಹೇಳುತ್ತಾಾರೆ.
ಮೊಬೈಲ್ ಚಾಜಿರ್ಂಗ್ ವ್ಯವಸ್ಥೆೆ ಇಲ್ಲ: ಈ ರೈಲಿನಲ್ಲಿ ಮೊಬೈಲ್ ಚಾಜಿರ್ಂಗ್ ವ್ಯವಸ್ಥೆೆ ಇಲ್ಲ. ರೈಲಿನ ಬೋಗಿಗಳಲ್ಲಿ ಮೊಬೈಲ್ ಚಾಜಿರ್ಂಗ್ ಮಾಡೋಣ ಎಂದು ಅವಸರದಿಂದ ಬಂದ ಪ್ರಯಾಣಿಕರು ಬೋಗಿಗಳಲ್ಲಿ ಚಾಜಿರ್ಂಗ್ ವ್ಯವಸ್ಥೆೆ ಇಲ್ಲದಿರುವುದನ್ನು ನೋಡಿ ಪರೇಶಾನ್ ಆಗುತ್ತಿಿದ್ದಾಾರೆ. ಇನ್ನೂ ಸೀಟ್ ವ್ಯವಸ್ಥೆೆ ಕಂರ್ಟ್ ಇಲ್ಲದೇ ಇರುವುದರಿಂದ ಕೆಲವರು ಅತ್ತಿಿಂದಿತ್ತ, ಇತ್ತಿಿಂದತ್ತ ಹೊರಳಾಡುವುದು ಸಾಮಾನ್ಯವಾಗಿದೆ. ಸಿಟಿಯಲ್ಲಿ ಓಡಿಸಬೇಕಾದ ರೈಲನ್ನು ನೂರಾರು ಕೀ.ಮೀ ವ್ಯಾಾಪ್ತಿಿಯಲ್ಲಿ ಸಂಚಾರಕ್ಕೆೆ ವ್ಯವಸ್ಥೆೆ ಮಾಡಿರುವುದರಿಂದ ಈ ಸಮಸ್ಯೆೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ದೂರುತ್ತಾಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ