Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಪ್ರಧಾನಿ ಮೋದಿ, ಕಾಂಗ್ರೆೆಸ್ ನಾಯಕ ರಾಹುಲ್ ಪ್ರಚಾರ ಬಿಹಾರ: ಬಿಜೆಪಿ, ಕಾಂಗ್ರೆೆಸ್ ನಡುವೆ ತೀವ್ರಗೊಂಡ ವಾಗ್ದಾಾಳಿ

ಸುದ್ದಿಮೂಲ ವಾರ್ತೆ ಬೆಗೂಸರಾಯ್ (ಬಿಹಾರ), ನ.02:
ಬಿಹಾರ ವಿಧಾನಸಭೆ ಚುನಾವಣೆ ಸಮೀಪುಸುತ್ತಿಿದ್ದಂತೆ ರಣಕಣ ಸಿದ್ಧವಾಗಿದ್ದು ಬಿಜೆಪಿ ಹಾಗೂ ಕಾಂಗ್ರೆೆಸ್ ನಡುವೆ ವಾಗ್ದಾಾಳಿ ತೀವ್ರಗೊಂಡಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರದಲ್ಲಿ ಪಾಲ್ಗೊೊಂಡು ಪರಸ್ವರ ವಾಗ್ದಾಾಳಿ ನಡೆಸಿದರು.
ಭೋಜಪುರ ಜಿಲ್ಲೆಯ ಅರಾದಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪ್ರಚಾರದಲ್ಲಿ ಪಾಲ್ಗೊೊಂಡ ಪ್ರಧಾನಿ ಮೋದಿ ಅವರು, ಕಾಂಗ್ರೆೆಸ್ ಪಕ್ಷ ಆರ್‌ಜೆಡಿ ನಾಯಕ ತೇಜಸ್ವಿಿ ಯಾದವ್ ಅವರನ್ನು ಸಿಎಂ ಆಗಿ ಒಪ್ಪಿಿಕೊಂಡಿರಲಿಲ್ಲ. ಆದರೆ ಆರ್‌ಜೆಡಿ ಬೆದರಿಕೆಯಿಂದ ಕಾಂಗ್ರೆೆಸ್ ಒಪ್ಪಿಿಕೊಂಡಿದೆ ಎಂದು ದಾಳಿ ನಡೆಸಿದರು.
ಆರ್‌ಜೆಡಿ ಪಕ್ಷದವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಕಾಂಗ್ರೆೆಸ್ ಎಂದಿಗೂ ಬಯಸಿರಲಿಲ್ಲ. ಆದರೆ ಆರ್‌ಜೆಡಿಯು ಕಾಂಗ್ರೆೆಸ್‌ನ ತಲೆಗೆ ನಾಡ ಪಿಸೂಲ್‌ನಲ್ಲಿ ಗುರಿ ಇಟ್ಟು ಬೆದರಿಸುವ ಮೂಲಕ ಮುಖ್ಯಮಂತ್ರಿಿ ಅಭ್ಯರ್ಥಿ ಸ್ಥಾಾನವನ್ನು ತನ್ನದಾಗಿಸಿಕೊಂಡಿತು. ಚುನಾವಣೆ ನಂತರ ಎರಡು ಪಕ್ಷಗಳ ನಾಯಕರು ಪರಸ್ವರ ತಲೆ ಒಡೆಯಲಿದ್ದಾಾರೆ. ಇದರಿಂದ ಬಿಹಾರಕ್ಕೆೆ ಯಾವುದೇ ಒಳಿತು ಆಗುವುದಿಲ್ಲ ಎಂದು ಟೀಕಿಸಿದರು.
ಆರ್‌ಜೆಡಿಯ ಜಂಗಲ್ ರಾಜ್ ಆಡಳಿತವನ್ನು ಬಿಹಾರದ ಜನರು ಇನ್ನೂ ಮರೆತಿಲ್ಲ. ಜಂಗಲ್ ರಾಜ್ ವಾಲಾಗಳು ಈ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಇತಿಹಾಸ ಸೇರಲಿದ್ದಾರೆ ಎಂದರು.
ಮತಗಳವು ಮಾಡಿದ ಬಿಜೆಪಿ, ಆರ್‌ಎಸ್ಎಸ್:
ಬೆಗೂಸರಾಯ್ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊೊಂಡ ಕಾಂಗ್ರೆೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕ, ಮಹಾರಾಷ್ಟ್ರ, ಹರಿಯಾಣದ ಮತ್ತು ಮಧ್ಯ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಆರ್‌ಎಸ್ಎಸ್ ಮತಗಳು ಮಾಡಿವೆ ಎಂದು ಆರೋಪಿಸಿದರು.
ಬಿಹಾರದಲ್ಲಿ ಮಹಾಘಟ ಬಂಧನ ಮೈತ್ರಿಿಕೂಟದ ಬೆಂಬಲಿಗರ ಹೆಸರುಗಳನ್ನು ಮತದಾರರಪಟ್ಟಿಿಯಿಂದ ತೆಗೆದು ಹಾಕಲಾಗಿದೆ. ನಾವು ಈಗಾಗಲೇ ಪುರಾವೆಗಳನ್ನು ಒದಗಿಸಿದ್ದೇವೆ. ಮತ್ತೆೆ ಅದನ್ನು ಒದಗಿಸುತ್ತೇವೆ ಎಂದರು.
ಮತಗಳಿಕೆಗಾಗಿ ಮೋದಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ನೀವು ಅವರಿಗೆ ಯೋಗ ಮಾಡಲು ಹೇಳಿದರೆ ಅವರು ಕೆಲವು ಆಸನಗಳನ್ನು ಮಾಡುತ್ತಾಾರೆ. ಮತಕ್ಕಾಾಗಿ ವೇದಿಕೆ ಮೇಲೆ ನೃತ್ಯ ಮಾಡುತ್ತಾಾರೆ. ಮತದಾನ ನಡೆಯುವವರೆಗೆ ನೀವು ಏನ್ನೇ ಹೇಳಿದರೂ ಮೋದಿ ಅದನ್ನು ಮಾಡುತ್ತಾಾರೆ. ಏಕೆಂದರೆ ಚುನಾವಣೆ ನಂತರ ಅವರು ತಮ್ಮ ನೆಚ್ಚಿಿನ ಉದ್ಯಮಿಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಾಾರೆ ಎಂದು ಹೇಳಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ