ಬೆಂಗಳೂರು, ಅ.30: ಕಾವ್ಯ ಶ್ರೀ ಸೇವಾ ಟ್ರಸ್ಟ್‌ನ ಪ್ರಥಮ ವಾರ್ಷಿಕೋತ್ಸವದಲ್ಲಿ ಅವಧೂತ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಸದಸ್ಯ ಡಾ.ಮಹೇಂದ್ರ ನಾಥ್ ಶರ್ಮ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ರತ್ನ ಹಾಗೂ ಸಮಾಜ ಸೇವಾ ಪುರಸ್ಕಾರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಇಂದು ಸಂಜೆ ವ್ಯವಸ್ಥಾಪಕ ಸಂಪಾದಕಿ ಪದ್ಮ ನಾಗರಾಜು, ಆತ್ಮಶ್ರೀ ಸಂಸ್ಥೆಯ ಅಧ್ಯಕ್ಷ ಗುಣವಂತ ಮಂಜು, ಅಬಕಾರಿ ಉಪ ಆಯುಕ್ತ ಬಿ.ಆರ್. ಹಿರೇಮಠ್, ಜೆಡಿಎಸ್ ಮುಖಂಡ ನಾರಾಯಣ ಸ್ವಾಮಿ, ದಕ್ಷಿಣ ಕಾಳಿ ಶ್ರೀ ಕ್ಷೇತ್ರದ ಸ್ವಾಮೀಜಿ ಅರುಣ್ ಗುರೂಜಿ, ಚಿತ್ರನಟಿ ಭೂಮಿ, ಸಮಾಜ ಸೇವಕ ಸುಬ್ರಮಣ್ಯ, ಹಾಗೂ ಕಾವ್ಯ ಶ್ರೀ ಸೇವಾ ಟ್ರಸ್ಟ್ ಅಧ್ಯಕ್ಷೆ ಕಾವ್ಯಗೌಡ ಉಪಸ್ಥಿತರಿದ್ದರು.