Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಕಲಬುರಗಿಯಲ್ಲಿ ಶಿವರಾತ್ರಿ ಸಂಭ್ರಮ


ಕಲಬುರಗಿ,ಫೆ.18:  ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಶಿವ ಭಕ್ತರು ಭಕ್ತಿ ಪೂರ್ವಕವಾಗಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ ಶಿವರಾತ್ರಿ ಆಚರಿಸಿದರು. ಇಡೀ ದಿನ ಜಿಲ್ಲೆಯ ಶಿವಮಂದಿರಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಬೆಳಗ್ಗೆ 9 ರಿಂದ ರಾತ್ರಿರವರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿವನ ದರ್ಶನ ಪಡೆದರು. ಉಪವಾಸ ವೃತ ಆಚರಣೆ ಮಾಡಿ ಶಿವಧ್ಯಾನ ನಡೆಸಿದರು.





ಬೆಳಗಿನಿಂದ ಸೂರ್ಯಾಸ್ತದವರೆಗೂ ಉಪವಾಸ ಆಚರಣೆ ಮಾಡಿ ಸಾಯಂಕಾಲ ಮತ್ತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದರ್ಶನ ಪಡೆದು ಹಣ್ಣು ಹಂಪಲು ಸೇವಿಸಿ ಉಪವಾಸ ಕೊನೆಗೊಳಿಸಿದರು. ಸಾಯಂಕಾಲ ನಡೆದ ವಿಶೇಷ ಪೂಜೆಯಲ್ಲೂ ಅನೇಕರು ಭಾಗವಹಿಸಿ, ರಾತ್ರಿ ಜಾಗರಣೆ, ಭಜನೆಗಳಲ್ಲಿ ನೂರಾರು ಜನರು ಭಾಗವಹಿಸಿ ಭಕ್ತಿ ಮೆರೆದರು.




ಕಲಬುರಗಿ ನಗರದ ಆಳಂದ ರಸ್ತೆಯ ರಾಮತೀರ್ಥ ಮಂದಿರದಲ್ಲಿ ಶಿವಲಿಂಗಕ್ಕೆ ಬೆಳಗಿನಿಂದಲೇ ರುದ್ರಾಭಿಷೇಕ, ಪೂಜೆ ಆರತಿ, ಪುಪ್ಪಾಲಂಕಾರ ಹೀಗೆ ವಿವಿಧ ಬಗೆಯ ಪೂಜೆಗಳು ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಶಿವನ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡು, ದೇವಸ್ಥಾನದ ಆವರಣದಲ್ಲಿ ಅಲ್ಲಲ್ಲಿ ಹಣ್ಣು-ಹಂಪಲುಗಳ ಪ್ರಸಾದವನ್ನು ಸ್ವೀಕರಿಸಿದರು.




ಸೇಡಂ ರಸ್ತೆ ಬಳಿಯ ಗೀತಾ ನಗರದ ಬ್ರಹ್ಮಕುಮಾರಿ ಆಶ್ರಮದ ಅಮೃತ ಸರೋವರದಲ್ಲಿ ಪ್ರತಿ ಶಿವರಾತ್ರಿಯಂತೆ ಈ ವರ್ಷವೂ ವಿಭಿನ್ನವಾಗಿ ಶಿವರಾತ್ರಿ ಹಬ್ಬ ಆಚರಣೆ ಮಾಡಲಾಯಿತು. ಈ ಭಾಗದ ವಿಶೇಷ ಬೆಳೆ ಶೇಂಗಾ(ಕಡಲೆಕಾಯಿ)ಯಿಂದ 25 ಅಡಿ ಎತ್ತರದ ಬೃಹತ್​ ಆಕಾರದ ಶಿವಲಿಂಗ ನಿರ್ಮಾಣ ಮಾಡಲಾಗಿತ್ತು. ಸುಮಾರು 8 ಕ್ವಿಂಟಾಲ್ ಕಡಲೆಕಾಯಿ ಬಳಸಿ ಶಿವಲಿಂಗ ತಯ್ಯಾರಿಸಿದ್ದು, ಬೆಳಗ್ಗೆ 9 ರಿಂದ ರಾತ್ರಿ ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿಗೆ ಭಕ್ತರ ದಂಡೆ ಆಗಮಿಸಿ ತಮ್ಮ ಭಕ್ತಿಯನ್ನು ಮೆರೆದರು.


ನಗರದ ರಾಮ ಮಂದಿರ, ಪಿ ಅಂಡ್ ಟಿ ಕಾಲೋನಿ, ಗೋದುತಾಯಿ ಕಾಲೋನಿ, ಶರಣಬಸವೇಶ್ವರ ದೇವಸ್ಥಾನ, ಓಂ ನಗರ ಗೇಟ್, ಹುಮನಾಬಾದ ರಿಂಗ್ ರಸ್ತೆ, ರೇವಣಸಿದ್ದೇಶ್ವರ ಕಾಲೋನಿ, ಬಿದ್ದಾಪುರ ಕಾಲೋನಿ ಸೇರಿ ಜೇವರ್ಗಿ, ಸೇಡಂ, ಚಿಂಚೋಳಿ, ಚಿತ್ತಾಪುರ ಹಾಗೂ ಆಳಂದ ತಾಲೂಕಿನಲ್ಲಿಯೂ ಶಿವನ ಆರಾಧನೆ ನಡೆಯಿತು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ