Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಿರವಾರ : ಅದ್ದೂರಿ ಸಂತ ಸೇವಲಾಲ್ ಜಯಂತಿ ಬಂಜಾರ ಜನಾಂಗದ ಮಹಾತ್ಮ ಸಂತ ಸೇವಾಲಾಲ್ - ವೆಂಕಟಪ್ಪ ನಾಯಕ

ಸುದ್ದಿಮೂಲ ವಾರ್ತೆ ಸಿರವಾರ, ೆ.16:
ಅಲೆಮಾರಿಗಳಾದ ಲಂಬಾಣಿ, ಬಂಜಾರ ಜನಾಂಗಕ್ಕೆೆ ಒಂದೆಡೆ ನೆಲೆ ನಿಲ್ಲುವಂತೆ ಮಾಡಿ ವ್ಯವಸಾಯ, ಪಶುಪಾಲನೆ ಮಾಡಲು ಮಾರ್ಗದರ್ಶನ ನೀಡಿ, ಸಮಾಜವನ್ನು ಮುನ್ನೆೆಲಿಗೆ ತಂದವರು ಮಹಾತ್ಮ ಸಂತ ಸೇವಲಾಲರು ಎಂದು ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.
ಅವರು ರವಿವಾರ ಪಟ್ಟಣದ ಸಜ್ಜಲಶ್ರೀ ಶರಣಮ್ಮ ತಾಯಿ ಶಾಖಾ ಮಠದ ಆವರಣದಲ್ಲಿ ಬಂಜಾರ ಸಮಾಜದಿಂದ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಅವರ 287 ನೇ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ ಬಂಜಾರ ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು, ಕುಟುಂಬಗಳಲ್ಲಿ ಕೊನೆಯಲ್ಲಿಯೇ ಉಳಿದಿದ್ದು, ಎಲ್ಲರನ್ನು ಒಟ್ಟಿಿಗೆ ತೆಗೆದುಕೊಂಡು ಸಮಾಜಕ್ಕೆೆ ಮಾದರಿಯಾಗಬೇಕು ಎಂದರು. ಚುಕ್ಕಿಿ ಸೂಗಪ್ಪ ಸಾಹುಕಾರ, ಜೆ.ಶರಣಪ್ಪಗೌಡ, ಜಿ.ಲೋಕರೆಡ್ಡಿಿ, ಪ.ಪಂ.ಸದಸ್ಯ ಕೃಷ್ಣ ನಾಯಕ ಸೇರಿದಂತೆ ಸಮಾಜದ ಮುಖಂಡರು ಮಾತನಾಡಿದರು.
ಮೆರವಣಿಗೆ : ಪಟ್ಟಣದ ನೀರಾವರಿ ಇಲಾಖೆ ಆವರಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸಂತ ಸೇವಲಾಲ್ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಬಂಜಾರ ಸಮಾಜದ ಯುವಕರು ಮಹಿಳೆಯರು ಡಿ.ಜೆ ಹಾಡಿಗೆ ಮಾಡಿದ ನೃತ್ಯಗಳು ನೋಡುಗರ ಕಣ್ಮನ ಸೆಳೆದವು. ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿಿ, ಉಪಾಧ್ಯಕ್ಷೆ ಲಕ್ಷ್ಮಿಿ ಆದೆಪ್ಪ ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನಗೌಡ ಬಲ್ಲಟಗಿ, ಮೌನೇಶ ಪಾಟೀಲ, ಶರಣಪ್ಪಗೌಡ ಮದ್ಲಾಾಪೂರ, ದಾನಪ್ಪ, ರಂಜಿತ್, ರಾಮು, ಶಿವರಾಜ ನಾಯಕ ಚಾಗಭಾವಿ, ರಾಮಾಚಾರಿ, ಸಮಾಜದ ಮುಖಂಡರಾದ ಭೀಮೇಶಪ್ಪ ಪೂಜಾರಿ, ಶೇಖರಪ್ಪ ರಾಠೋಡ್, ಪರಮೇಶ ನಾಯ್ಕ ಮುರ್ಕಿಗುಡ್ಡ, ಅಮರೇಶ ಪವಾರ್, ಗೋವಿಂದ, ಪಾಂಡುರಂಗ ನಾಯ್ಕ, ಜಯರಾಮ ನಾಯ್ಕ, ಕಮಲಪ್ಪ, ನಾಯ್ಕ, ಗೊನ್ನಪ್ಪ, ಜಗನಪ್ಪ, ಮೀಟಪ್ಪ, ಕೇಶಪ್ಪ, ಕೋನಪ್ಪ, ನಿವೃತ್ತ ಎಎಸ್‌ಐ ಚನ್ನಪ್ಪ, ಮಂಜುಳಾ ಕಡದಿನ್ನಿಿ ಕ್ಯಾಾಂಪ್, ಶ್ರೀನಿವಾಸ ನಾಯ್ಕ್, ರಾಮು ನಾಯ್ಕ, ರಾಜು ರಾಠೋಡ್, ಶಾಂತಪ್ಪ ಪವಾರ್, ದೇವೇಂದ್ರ ನಾಯ್ಕ್ ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ