Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅಪರಾಧಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯ : ಎಸ್ಪಿ ಡಾ.ಶೋಭಾರಾಣಿ

ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.23:
ಅಪರಾಧಗಳನ್ನು ನಿಯಂತ್ರಿಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿಗಳಾದ ಡಾ. ಶೋಭಾರಾಣಿ ವಿ.ಜೆ. ಅವರು ತಿಳಿಸಿದ್ದಾಾರೆ.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಆಡಿಟೋರಿಯಂನಲ್ಲಿ ಮಂಗಳವಾರ ನಡೆದ ಗೃಹ ಇಲಾಖೆಯ ಜಿಲ್ಲಾಾ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಸಿಸಿಟಿವಿಗಳ ಡಿವಿಆರ್‌ಗಳನ್ನು ಕಳ್ಳರು ಕಿತ್ತುತ್ತಿಿರುವ ಕಾರಣ ಸಿಸಿಟಿವಿಗಳನ್ನು ಗೂಗಲ್ ಡ್ರೈವ್ ಅಥವಾ ಐ ಕ್ಲೌೌಡ್ ಡ್ರೈವ್‌ಗೆ ಕನೆಕ್‌ಟ್‌ ಮಾಡಿದಲ್ಲಿ ರೆಕಾರ್ಡ್ ಆಗಿರುವ ಮಾಹಿತಿಯು ಇರುತ್ತದೆ. ಯಾವುದೇ ತನಿಖಾ ಏಜೆನ್ಸಿಿಗಳ ವಿಚಾರಣೆಯು ಆನ್‌ಲೈನ್‌ನಲ್ಲಿ ನಡೆಯುವುದಿಲ್ಲ. ಸಿಬಿಐ, ಇಡಿ, ಪೊಲೀಸ್ ಇನ್ನಿಿತರೆಗಳ ಹೆಸರಿನಲ್ಲಿ ನಡೆಯುತ್ತಿಿರುವ ಸೈಬರ್ ಅಪರಾಧಗಳ ಕುರಿತು ಜನರು ಸದಾಕಾಲ ಎಚ್ಚರವಾಗಿದ್ದು, ಏನಾದರೂ ಸಮಸ್ಯೆೆಗಳಿದ್ದಲ್ಲಿ ತಕ್ಷಣವೇ ಪೊಲೀಸ್ ಗಮನಕ್ಕೆೆ ನೀಡಬೇಕು ಎಂದರು.
ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ್ ಅವರು, ನಿಮ್ಮ ಮಕ್ಕಳ ಸುರಕ್ಷತೆಗಾಗಿ ವಾಹನಗಳನ್ನು ಅಪ್ರಾಾಪ್ತರಿಗೆ ಕೊಡಬೇಡಿ. ಅಪ್ರಾಾಪ್ತರು ವಾಹನ ಚಾಲಿಸಿದಲ್ಲಿ ವಾಹನ ಕೊಟ್ಟವರಿಗೆ ದಂಡ ವಿಧಿಸಲಾಗುತ್ತದೆ. ನಗರದ ಐದು ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಉಳಿದೆರೆಡು ವೃತ್ತಗಳಲ್ಲಿ ಶೀಘ್ರದಲ್ಲೇ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗುತ್ತದೆ. ಶಿಕ್ಷಣ ಸಂಸ್ಥೆೆಗಳ ವಾಹನಗಳು - ಅವಶ್ಯಕ ಪದಾರ್ಥಗಳ ವಾಹನಗಳ ಸಂಚಾರ, ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಾಗಿ ಪಾಲಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಅಧ್ಯಕ್ಷರಾದ ಅವ್ವಾಾರು ಮಂಜುನಾಥ್ ಅವರು, ಸ್ವಾಾಗತ ಕೋರಿ ಪ್ರಾಾಸ್ತಾಾವಿಕ ಭಾಷಣ ಮಾಡಿ, ದಿನದ 24 ತಾಸು ಕರ್ತವ್ಯ ನಿರ್ವಹಿಸುತ್ತಿಿರುವ ಪೊಲೀಸ್ ಇಲಾಖೆಗೆ ನಮ್ಮೆೆಲ್ಲರ ಸಹಕಾರ ಅತ್ಯಗತ್ಯ. ಕರ್ತವ್ಯದ ಒತ್ತಡ, ಸಿಬ್ಬಂದಿಗಳ ಕೊರತೆ ಮತ್ತು ಇನ್ನಿಿತರೆ ಸಮಸ್ಯೆೆಗಳಲ್ಲೂ ಉತ್ತಮವಾದ ಸೇವೆ ಸಲ್ಲಿಸಿ ಕಾನೂನು ಮತ್ತು ಸುವ್ಯವಸ್ಥೆೆಯನ್ನು ಕಾಪಾಡುತ್ತಿಿರುವ ಪೊಲೀಸ್ ಇಲಾಖೆಯ ಸೇವೆ ಶ್ಲಾಾಘನೀಯ ಎಂದರು.
ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್ ಅವರು ಸಂವಾದವನ್ನು ನಿರೂಪಿಸಿದರು. ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ವಂದನಾರ್ಪಣೆ ಸಲ್ಲಿಸಿದರು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡಗೌಡ, ಉಪಾಧ್ಯಕ್ಷ ಸೊಂತ ಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿಿ, ಮಾಜಿ ಅಧ್ಯಕ್ಷ ಬಿ. ಮಹಾರುದ್ರಗೌಡ, ಡಿವೈಎಸ್ಪಿಿ ಮಾಲತೇಶ್ ಕೋನಬೇವು ವೇದಿಕೆಯಲ್ಲಿದ್ದರು.
ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆೆಗಳ ಪದಾಧಿಕಾರಿಗಳು - ಸದಸ್ಯರು, ಸಾರ್ವಜನಿಕರು ಪಾಲ್ಗೊೊಂಡು, ಕುಂದುಕೊರತೆಗಳನ್ನು ಪ್ರಸ್ತಾಾಪಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ