Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪಂಚಮಸಾಲಿಗೆ ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ- ಸ್ವಾಮೀಜಿ

ಸುದ್ದಿಮೂಲವಾರ್ತೆ

ಕೊಪ್ಪಳ,ಸೆ.30:ಲಿಂಗಾಯತ್ ಸಮಾಜದ ಅಧಿಕಾರಿಗಳಿಗೆ‌ ಕಿರುಕುಳ ನೀಡುತ್ತಿದ್ದಾರೆ ಎಂಬ ದಾವಣಗೆರೆಯ ಶಾಮನೂರ ಶಿವಶಂಕರಪ್ಪರ ಹೇಳಿಕೆಯನ್ನು ಪಂಚಮಸಾಲಿ ಸಮಾಜದ ಸ್ವಾಮೀಜಿ ಬೆಂಬಲಿಸಿದರು.

ಇಂದು ಹಿರೇವಂಕಲಕುಂಟಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಆಗ್ರಹಿಸಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಯ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಲಿಂಗಾಯತರ ಧ್ವನಿಯಾಗಿ ಶಾಮನೂರು ಮಾತನಾಡಿದ್ದಾರೆ. ಪಂಚಮಸಾಲಿಯ ಮೂರು ಎಐಎಸ್ ಹಾಗು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.ಇದನ್ನು ಸರಕಾರ ಸರಿಪಡಿಸಬೇಕು ಎಂದರು‌

2024 ರ ಚುನಾವಣೆಯ ಘೋಷಣೆಯ ಮುನ್ನ ಮೀಸಲಾತಿ ನೀಡಬೇಕು. ಎರಡು ಪಕ್ಷಗಳು ಚುನಾವಣೆ 22-24 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಾರೆ ಆದರೆ ಬಲಾಡ್ಯವಾಗಿರುವ ಪಂಚಮಸಾಲಿ ಸಮಾಜವನ್ನು ನಿರ್ಲಕ್ಷಿಸಬಾರದು ಎಂದರು.

ಮೀಸಲಾತಿ ನೀಡದಿದ್ದರೆ ಮತ್ತೆ ಉಗ್ರ ಹೋರಾಟ ಮಾಡಲಾಗುವುದು.ಸಿದ್ದರಾಮಯ್ಯ ಕುರಬ ಸಮಾಜಕ್ಕೆ ಎಸ್ಟಿ ಮೀಸಲಾತಿಗೆ ಶಿಫಾರಸ್ಸು ಮಾಡಿದ್ದಾರೆ. ಇದೇ ವೇಳೆ ಕುಂಚಟಿಗ ಸಮಾಜಕ್ಕೆ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಿದ್ದಾರೆ.ಇದೇ ರೀತಿ ಪಂಚಮಸಾಲಿ ಗಳಿಗೆ 2A ಮೀಸಲಾತಿ.ಲಿಂಗಾಯತ ರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಂಚಮಸಾಲಿ ಸಮಾಜವು ಕಾರಣ.ಈ ಸಮಾಜದ ಋಣ ತೀರಿಸಬೇಕು.ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಈಗಾಗಲೇ ಮೂರು ಕಡೆ ಮಾಡಲಾಗಿದೆ

ಮೂರು ಕಡೆ ಉಸ್ತುವಾರಿ ಸಚಿವರು ಆಗಮಿಸಿದ್ದರು

ಆದರೆ ಕೊಪ್ಪಳದಲ್ಲಿ ಶಿವರಾಜ ತಂಗಡಗಿ ಬಾರದ ಹಿನ್ನೆಲೆ

ಸಮಾಜದವರಿಗೆ ಅಸಮಾದಾನವಿದೆ

ಆದರೆ ಅವರು ಸಮಾಜದ ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು

ಬಸವಜಯಮೃತ್ಯುಂಜಯ ಸ್ವಾಮೀಜಿ‌ ಹೇಳಿದರು.

ಇದೇ ವೇಳೆ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾಗಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಗೊಂಡು ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿದರು‌.

ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ. ಈ ಮೊದಲು ಚಿಕ್ಕವಂಕಲಕುಂಟಾ ಗ್ರಾಮದಿಂದ NH 50ರವರಿಗೆ ಪಾದಯಾತ್ರೆ ಮಾಡಿದಾರಿಯ ಉದ್ದಕ್ಕೂ ಬೇಕೇ ಬೇಕು ಮೀಸಲಾತಿ ಬೇಕೆಂದು ಆಗ್ರಹಿಸಿದರು.ಸ್ವಾಮೀಜಿಯ ಇಷ್ಟ ಲಿಂಗ ಪೂಜೆಗೆ ಸಂಸದರು ಮಾಜಿ ಹಾಲಿ ಶಾಸಕರು ಗೈರು ಆಗಿದ್ದರು.ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಸಮುದಾಯ ಮುಖಂಡರ ಅಸಮಾಧಾನ ಗೊಂಡು ಜನಪ್ರತಿನಿಧಿಗಳ ವಿರುದ್ದ ಘೋಷಣೆ ಹಾಕಿದರು.

ಈ ಸಂದರ್ಭದಲ್ಲಿ ಸಮಾಜದ ಬಸವಲಿಂಗಪ್ಪ ಬೂತೆ, ಶಿವರಾಮಗೌಡ, ಬಸನಗೌಡ ತೊಂಡಿಹಾಳ. ರುದ್ರಗೌಡ, ಮಂಜುಳಾ ಕರಡಿ ಸೇರಿ ಹಲವರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ