Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪ್ರಸನ್ನಹಳ್ಳಿಯ 280 ವರ್ಷ ಹಳೆಯದಾದ ಅಶ್ವಥಕಟ್ಟೆಯ ಜೀರ್ಣೊದ್ದಾರ

ಸುದ್ದಿಮೂಲ ವಾರ್ತೆ

ದೇವನಹಳ್ಳಿ , ಆ.27: ನಮ್ಮ ಪೂರ್ವಜರು ಪ್ರತಿ ಗ್ರಾಮದಲ್ಲಿ ಒಂದು ಅಶ್ವಥಕಟ್ಟೆಯನ್ನು ನಿರ್ಮಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅಶ್ವತ್ಥಕಟ್ಟೆಗೆ ಪೂಜೆ ಹಾಗೂ ನ್ಯಾಯ ಪಂಚಾಯತಿಗಳನ್ನು ಮಾಡುತ್ತಿದ್ದರು. ಆದರೆ ಇಂದು ಅಶ್ವಥಕಟ್ಟೆಗಳು ಮಾಯವಾಗುತ್ತಿವೆ. ಇರುವ ಅಶ್ವತ್ಥಕಟ್ಟೆಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪ್ರಸನ್ನಹಳ್ಳಿ ವಿರೂಪಾಕ್ಷಯ್ಯ ತಿಳಿಸಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರಸನ್ನಹಳ್ಳಿಯಲ್ಲಿರುವ 280 ವರ್ಷ ಹಳೆಯದಾದ ಅಶ್ವಥಕಟ್ಟೆಯ ಜೀರ್ಣೊದ್ದಾರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅನೇಕ ದಾನಿಗಳ ಸಹಕಾರ ಹಾಗೂ ಪುರಸಭೆಯ ಸಹಕಾರದೊಂದಿಗೆ 15 ಲಕ್ಷ ರೂ ವೆಚ್ಚದಲ್ಲಿ ಬೃಹತ್ ಅಶ್ವಥಕಟ್ಟೆಯನ್ನು ಜೋರ್ಣೋದ್ದಾರೆ ಮಾಡಿದ್ದೇವೆ. ಅಶ್ವತ್ಥಕಟ್ಟೆಗೆ ಬಂಡೆಗಳನ್ನು ಬಳಸಿ ವಿನೂತನವಾಗಿ ನಿರ್ಮಿಸಲಾಗಿದ್ದು ಈ ಹಿಂದೆ ಇದ್ದ ಹಳೆಯ ನಾಗರುಕಲ್ಲುಗಳನ್ನು ಹಾಗೆ ಉಳಿಸಿ ಪ್ರತಿಷ್ಠಾಪಿಸಲಾಗಿದೆ. ಇದರಿಂದ ಗ್ರಾಮದ ಜನತೆ ಹಬ್ಬ ಹರಿದಿನಗಳಲ್ಲಿ ಅಶ್ವತಕಟ್ಟೆ ಹಾಗು ನಾಗರ ಪಂಚಮಿಯಂದು ನಾಗರ ಪೂಜಾಕೈಂಕರ್ಯಗಳಿಗೆ ಸಹಕಾರಿಯಾಗಲಿದೆ ಎಂದರು.

ವೀರಶೈವ ಸಮಾಜ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಿ ಅಶ್ವತ್ಥಕಟ್ಟೆಗಳು ಜೀರ್ಣೊದ್ದಾರ ಮಾಡುವುದರಿಂದ ಪೂಜಾ ಕೈಂಕರ್ಯಗಳಿಗೆ ಅನುಕೂಲವಾಗಲಿದೆ. ಅಶ್ವತ್ಥ ವೃಕ್ಷವನ್ನು ಪ್ರತಿನಿತ್ಯ ಪೂಜಿಸಿದರೆ ಕೆಲವೊಂದು ದೋಷಗಳು ನಿವಾರಣೆಯಾಗುತ್ತದೆಂದು ಹಿರಿಯರು ತಿಳಿಸಿದ್ದಾರೆ. ಪವಿತ್ರವಾದ ಮರ ಎಂದರೆ ಅಶ್ವತ್ಥಮರ ಈ ಮರದಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆಂದು ನಂಬಲಾಗುತ್ತದೆ. ಇದು ಅನೇಕ ಕಾಯಿಲೆಗಳಿಗೆ ಔಷದ ನೀಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಹಿಂದಿನ ಕಾಲದಲ್ಲಿ ದೈವ ಸ್ವರೂಪದ ಮರವೆಂದು ಪೂಜಿಸುತ್ತಾಬಂದಿದ್ದಾರೆ. ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಅಶ್ವತ್ಥಮರವನ್ನು ಪೂಜಿಸುವ ಮೂಲಕ ಸಾಕಷ್ಟು ಅನುಕೂಲಗಳನ್ನು ಪಡೆದುಕೊಳ್ಳಬಹುದು ಎಂದರು.

ಇದೆ ವೇಳೆ ಸ್ಥಳಿಯ ಮುಖಂಡರಾದ ಅಂತರರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು ಡಿ.ಎ.ನಟರಾಜ್, ವಿಜಯ್‌ಕುಮಾರ್.ಡಿ.ಎನ್, ಸಂದೀಪ್, ಶಿವಕುಮಾರ್, ಅಶ್ವಥಪ್ಪ, ರಮೇಶ್, ಸಿದ್ದಲಿಂಗಯ್ಯ, ಮಲ್ಲಿಕಾರ್ಜುನ, ರಾಜಣ್ಣ, ಬಸವರಾಜ್, ವೆಂಕಟೇಶ್, ನವೀನ್, ನಾಗರಾಜ್ ವೇಣುಗೋಪಾಲ್ ಸೇರಿದಂತೆ ಪ್ರಸನ್ನಹಳ್ಳಿಯ ಅನೇಕ ಮುಖಂಡರು ಗ್ರಾಮಸ್ಥರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ