Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಇಟಾಲಿಯನ್ ಏರೋಸ್ಪೇಸ್, ಬಾಹ್ಯಾಾಕಾಶ ನಿಯೋಗವು ರಾಯಚೂರಿಗೆ ಭೇಟಿ ಸುಸ್ಥಿಿರ ಅಭಿವೃದ್ಧಿಿ , ರಕ್ಷಣಾ ನಾವೀನ್ಯತೆ ಬಗ್ಗೆೆ ಮಾಹಿತಿ

ಸುದ್ದಿಮೂಲ ವಾರ್ತೆ ರಾಯಚೂರು, ಸೆ.26:
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೆೆ ಇಟಲಿ - ಭಾರತ ಬಾಹ್ಯಾಾಕಾಶ, ಏರೋಸ್ಪೇಸ್ ಮತ್ತು ರಕ್ಷಣಾ ರೋಡ್ ಶೋ ಭಾಗವಾಗಿ ಇಟಾಲಿಯನ್ ಏರೋಸ್ಪೇಸ್ ಮತ್ತು ಬಾಹ್ಯಾಾಕಾಶ ನಿಯೋಗವು ಇಂದು ಭೇಟಿ ನೀಡಿತು.
ಭೇಟಿಯ ಸಮಯದಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರಾದ ಡಾ.ರಾಜೇಶ್ ಎನ್.ಎಲ್. ಅವರು ಕೇಂದ್ರದ ಧ್ಯೇಯ, ಮುಂದುವರೆದ ಸಾಮರ್ಥ್ಯಗಳು, ಬೆಳೆ ಮೇಲ್ವಿಿಚಾರಣೆ ಹಾಗೂ ವಿಪತ್ತು ನಿರ್ವಹಣೆಯಿಂದ ನಗರ ಯೋಜನೆ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆವರೆಗೆ ಬಾಹ್ಯಾಾಕಾಶ ಆಧಾರಿತ ಆಡಳಿತ ಮತ್ತು ಸುಸ್ಥಿಿರ ಅಭಿವೃದ್ಧಿಿಯಲ್ಲಿ ವೈವಿಧ್ಯಮಯ ಅನ್ವಯಿಕೆಗಳ ಕುರಿತು ಪ್ರಸ್ತುತಪಡಿಸಿದರು.
ಕಿಟ್ಸ್ ಸಂಸ್ಥೆೆಯ ಪ್ರಧಾನ ವ್ಯವಸ್ಥಾಾಪಕರಾದ ಪ್ರಮೋದ್ ಎಲ್.ಪಾಟೀಲ್ ಅವರು, ಕರಡು ಕರ್ನಾಟಕ ಬಾಹ್ಯಾಾಕಾಶ ನೀತಿಯ ಪ್ರಮುಖ ಅಂಶ ಹಂಚಿಕೊಂಡು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವುದನ್ನು ತಿಳಿಸಿದರು.
ಕರ್ನಾಟಕ ಸರ್ಕಾರದ ವಿದ್ಯುನ್ಮಾಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಗ್ಲೋೋಬಲ್ ಇನ್ನೋೋವೇಶನ್ ಅಲೈಯನ್ಸ್ (ಜಿಐಎ) ಅಡಿಯಲ್ಲಿ ಸುಗಮಗೊಳಿಸಲಾದ ಈ ಕಾರ್ಯಕ್ರಮವು ಬಾಹ್ಯಾಾಕಾಶ ಅನ್ವಯಿಕೆಗಳು, ಏರೋಸ್ಪೇಸ್ ತಂತ್ರಜ್ಞಾನಗಳು ಮತ್ತು ರಕ್ಷಣಾ ನಾವೀನ್ಯತೆಗಳಲ್ಲಿ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಜಂಟಿ ಸಂಶೋಧನೆ, ಶೈಕ್ಷಣಿಕ ಸಂಪರ್ಕಗಳು ಮತ್ತು ಪ್ರತಿಭಾ ವಿನಿಮಯದಲ್ಲಿ ಭಾರತ - ಇಟಲಿ ಸಹಕಾರವನ್ನು ವೃದ್ಧಿಿಸುವುದು, ಮಾರುಕಟ್ಟೆೆ ಪ್ರವೇಶ, ಸಹ ಅಭಿವೃದ್ಧಿಿ, ಕೈಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿಿಗಾಗಿ ಅವಕಾಶಗಳನ್ನು ತೆರೆಯುವುದು ಹಾಗೂ ಬಾಹ್ಯಾಾಕಾಶ, ನಾವೀನ್ಯತೆ ಮತ್ತು ತಂತ್ರಜ್ಞಾನ ನೇತೃತ್ವದ ಬೆಳವಣಿಗೆಯಲ್ಲಿ ಕರ್ನಾಟಕವನ್ನು ಇಟಲಿಗೆ ಕಾರ್ಯತಂತ್ರದ ಪಾಲುದಾರರನ್ನಾಾಗಿ ಸ್ಥಾಾನೀಕರಿಸುವುದಕ್ಕೆೆ ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆೆ ಭೇಟಿ ವೇಳೆ ಪ್ರಸ್ತಾಾಪಿಸಲಾಯಿತು.
ಈ ಭೇಟಿಯು ಭಾರತ - ಇಟಲಿಯ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುವುದಲ್ಲದೇ ಬಾಹ್ಯಾಾಕಾಶ ಮತ್ತು ಬಾಹ್ಯಾಾಕಾಶ ನಾವೀನ್ಯತೆಯಲ್ಲಿ ಜಾಗತಿಕ ಕೇಂದ್ರವಾಗಿ ಕರ್ನಾಟಕದ ಪಾತ್ರವನ್ನು ಬಲಪಡಿಸಲಿದೆ ಎಂದು ಡಾ.ರಾಜೇಶ್ ಎನ್.ಎಲ್. ಅವರು ಅಭಿಪ್ರಾಾಯಪಟ್ಟರು.
ನಿಯೋಗದಲ್ಲಿ ಇಟಾಲಿಯನ್ ಬಾಹ್ಯಾಾಕಾಶ ಸಂಸ್ಥೆೆಯ ಉಪನಿರ್ದೇಶಕರಾದ ಮಾರಿಯಾ ಚಿಯಾರಾ ನೊಟೊ, ನವದೆಹಲಿಯ ಇಟಲಿಯ ವ್ಯಾಾಪಾರ ಆಯುಕ್ತರಾದ ಆಂಟೋನಿಯೆಟ್ಟಾಾ ಬಕ್ಕನಾರಿ, ಬೆಂಗಳೂರಿನಲ್ಲಿನ ಇಟಲಿಯ ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ ಹಾಗೂ ಇಟಲಿಯ ಬಾಹ್ಯಾಾಕಾಶ ಮತ್ತು ಬಾಹ್ಯಾಾಕಾಶ ಕ್ಷೇತ್ರದ ಪ್ರತಿಷ್ಠಿಿತ ಕಂಪನಿಗಳು ಭಾಗವಹಿಸಿದ್ದವು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ