Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ತುಂಗಭದ್ರಾ ಜಲಾಶಯ ಕಲುಷಿತ ಕಾರ್ಖಾನೆಗಳು ಪರಿಸರ ನಿಯಮಗಳನ್ನು ಪಾಲಿಸುತ್ತಿಲ್ಲ : ಪೂಜಾರ

ಸುದ್ದಿಮೂಲ ವಾರ್ತೆ ಸಿಂಧನೂರು, ೆ.23:
ಯಾವುದೇ ಕಾರ್ಖಾನೆಗಳನ್ನು ಆರಂಭಿಸುವ ಮುನ್ನ ಸರಕಾರ ಪರಿಸರಕ್ಕೆೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಿಧಿಸಿರುತ್ತದೆ. ಎಲ್ಲಾಾ ನಿಯಮಗಳನ್ನು ಗಾಳಿಗೆ ತೂರಿ ಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಅನೇಕ ಕಾರ್ಖಾನೆಗಳು ತ್ಯಾಾಜ್ಯಗಳನ್ನು ತುಂಗಭದ್ರಾಾ ನದಿಗೆ ಬಿಡುತ್ತಿಿವೆ ಎಂದು ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಆರೋಪಿಸಿದರು.
ತುಂಗಭದ್ರಾಾ ಜಲಾಶಯಕ್ಕೆೆ ಕಲುಷಿತ ತ್ಯಾಾಜ್ಯ ಹರಿಬಿಡುತ್ತಿಿರುವ ಹಾಗೂ ಕೊಪ್ಪಳ ಸೇರಿ ಸುತ್ತಮುತ್ತಲಿನ ಹತ್ತಾಾರು ಗ್ರಾಾಮಗಳಲ್ಲಿ ವಿಪರೀತ ಮಾಲಿನ್ಯಕ್ಕೆೆ ಕಾರಣವಾದ ಕಾರ್ಖಾನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ, ಕರ್ನಾಟಕ ರೈತ ಸಂಘ(ಎಐಯುಕೆಎಸ್) ಯಿಂದ ಸೋಮವಾರ ಹಮ್ಮಿಿಕೊಂಡಿದ್ದ ಪ್ರತಿಭಟನೆ ನೇತೃತ್ವವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲಾಾ ಕೇಂದ್ರ ಹಾಗೂ ತಾಲೂಕಿನ ಸುತ್ತಮುತ್ತ ಇರುವ ಗ್ರಾಾಮಗಳ ವ್ಯಾಾಪ್ತಿಿಯಲ್ಲಿ 24ಕ್ಕೂ ಹೆಚ್ಚು ಬೃಹತ್ ಕಾರ್ಖಾನೆಗಳು ನಿರ್ಮಾಣಗೊಂಡಿವೆ. ಈ ಎಲ್ಲಾಾ ಕಾರ್ಖಾನೆಗಳು ವಿಷಕಾರಿ ನೀರು, ಬೂದಿ (ಮೊಲಾಸಸ್) ಸೇರಿದಂತೆ ಇತರೆ ತ್ಯಾಾಜ್ಯವನ್ನು ನೇರವಾಗಿ ತುಂಗಭದ್ರಾಾ ಜಲಾಶಯಕ್ಕೆೆ ಹರಿಬಿಡಲಾಗುತ್ತಿಿದೆ. ಕೆಲವು ಕಾರ್ಖಾನೆಗಳು ವಿಷಕಾರಿ ನೀರನ್ನು ಸಂಸ್ಕರಿಸದೇ ಸುತ್ತಮುತ್ತಲ ಭೂಮಿಯಲ್ಲಿ ಇಂಗಿಸಲಾಗುತ್ತದೆ. ಇದರಿಂದ ಕಲುಷಿತಗೊಂಡ ಅಂತರ್ಜಲವೂ ಸಹ ತುಂಗಭದ್ರಾಾ ನದಿಗೆ ಸೇರುತ್ತಿಿದೆ. ಈ ನೀರನ್ನು ಸೇವಿಸಿದ ಜನರು ಮಾರಕ ರೋಗಗಳಿಗೆ ಬಲಿಯಾಗುತ್ತಿಿದ್ದಾಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳಿಂದ ಕೊಪ್ಪಳ ಜಿಲ್ಲೆೆಯ ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ, ಗಿಣಗೇರಾ, ಅಲ್ಲಾಾನಗರ, ಬೇವಿನಾಳ, ಹಾಲವರ್ತಿ, ಲಾಚನಕೇರಿ, ಮುಂಡರಗಿ ಸೇರಿದಂತೆ ಹಲವು ಗ್ರಾಾಮಗಳು ಸದರಿ ಕಾರ್ಖಾನೆಗಳ ವಿಷಕಾರಿ ಅನಿಲ, ಹೊಗೆಯಿಂದ ದಿನನಿತ್ಯ ನರಕಯಾತನೆ ಅನುಭವಿಸುತ್ತಿಿದ್ದಾಾರೆ. ಈ ಗ್ರಾಾಮಗಳ ಪ್ರತಿಯೊಂದು ಮನೆಯ ಕುಟುಂಬದ ಬಹುತೇಕ ಸದಸ್ಯರು ಅಸ್ತಮಾ, ಟಿಬಿ, ಕ್ಯಾಾನ್ಸರ್, ಚರ್ಮರೋಗ ಇತ್ಯಾಾದಿ ರೋಗಗಳಿಂದ ಬಳಲುತ್ತಿಿದ್ದಾಾರೆ. ಈ ಕಾರಣದಿಂದ ರಾಷ್ಟ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿನ ಕಾರ್ಖಾನೆಗಳನ್ನು ಹಂತ ಹಂತವಾಗಿ ಸ್ಥಳಾಂತರ ಮಾಡಬೇಕೆಂದು ವರದಿ ನೀಡಿದೆ. ಇಂತಹ ವಿಷಮ ಪರಿಸ್ಥಿಿತಿಯಲ್ಲಿ ಎಂಎಸ್‌ಪಿ ಬಲ್ಡೋೋಟಾ ಕಂಪನಿಯು 54,000 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಉಕ್ಕಿಿತ ಕಾರ್ಖಾನೆ ನಿರ್ಮಾಣ ಮಾಡಲು ಮುಂದಾಗಿರುವುದು, ಜನರನ್ನು ಬೆಂಕಿಯಿಂದ ಬಾಣಲೆಗೆ ತಳ್ಳಿಿದಂತಾಗಿದೆ ಎಂದು ಪೂಜಾರ್ ಕಳವಳ ವ್ಯಕ್ತಪಡಿಸಿದರು.
ಟಿಯುಸಿಐ ಜಿಲ್ಲಾಾಧ್ಯಕ್ಷ ಬಿ.ಎನ್.ಯರದಿಹಾಳ, ಕೆಆರ್‌ಎಸ್ ಜಿಲ್ಲಾಾ ಕಾರ್ಯದರ್ಶಿ ಚಿಟ್ಟಿಿಬಾಬು, ಮುಖಂಡರಾದ ಮಹಿಳಾ ಮುಖಂಡರಾದ ರೇಣುಕಮ್ಮ, ಮರಿಯಮ್ಮ, ವಿರುಪಮ್ಮ, ಶರಣಬಸವ ನಾಗಲಾಪುರ, ಪ್ರಗತಿ, ರಾಜಶೇಖರ, ಬಸವರಾಜ, ಅಸ್ಲಂ, ತಿಮೋತಿ ಸೇರಿದಂತೆ ಇನ್ನಿಿತರರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ