Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಅಡವಿಭಾವಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಸುದ್ದಿಮೂಲ ವಾರ್ತೆ

ಕುಷ್ಟಗಿ,ಜು.29:ಕುಷ್ಟಗಿ ತಾಲೂಕಿನ ಅಡವಿಭಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ - ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಹನುಮಪ್ಪ ಎಚ್. ಕುಮಟಗಿ, ಉಪಾಧ್ಯಕ್ಷರಾಗಿ ಮುತ್ತಪ್ಪ ಹಿರೇಮನಿ, ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಎ. ದೊಟಿಹಾಳ, ಸಿದ್ದಪ್ಪ ಎಚ್. ಮನ್ನೇರಿ, ತಿಪ್ಪಣ್ಣ ಬಿ. ಸಿದ್ದಾಪುರ, ಶರಣಗೌಡ ಮ್ಯಾಗೇರಿ, ವಿಜಯಕುಮಾರ ಡಿ. ಭಾವಿಮನಿ, ಮರಿಯಪ್ಪ ಎಸ್. ಸಂಕ್ಲಾಪುರ, ಸೋಮಣ್ಣ ಬಡನ್ನವರ್ ಮತ್ತು ಮಹಿಳಾ ನಿರ್ದೇಶಕರಾಗಿ ಹನುಮವ್ವ ಕನಕಪ್ಪ ಅಡವಿಬಾವಿ ಗ್ಯಾನವ್ವ ಸುಭಾಷ್ ಇಲಕಲ್, ರೇಣುಕಾ ಹನುಮಪ್ಪ ಮಲ್ಕಾಪುರ ಅವರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಅಧಿಕಾರಿಯಾಗಿ ಅಡವಿಬಾವಿ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ರಾಜಕುಮಾರ್ ನಾಯಕ ಅವರು ಕಾರ್ಯನಿರ್ವಹಿಸಿದರು. ಬಳಿಕ ನೂತನವಾಗಿ ಆಯ್ಕೆಯಾದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಗೌರವಿಸಿ ಶುಭ ಕೋರಲಾಯಿತು. ಈ ವೇಳೆ ಸಂಘದ ಕಾರ್ಯದರ್ಶಿಯಾದ ಭೋಜಪ್ಪ ಶಡ್ಲಗೇರಿ, ಸಿಬ್ಬಂದಿ ಕನಕರೆಡ್ಡಿ ಸಕ್ರಿ, ಅಡವಿಭಾವಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.

ವಿಶ್ವಕರ್ಮ ಸಹಕಾರಿ ಸಂಘಕ್ಕೆ ಆಯ್ಕೆ: ಕುಷ್ಟಗಿ ಪಟ್ಟಣದ ತಾಲೂಕ ವಿಶ್ವಕರ್ಮ ಕರಕುಶಲ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಚುನಾವಣಾಧಿಕಾರಿಯಾದ ಸಹಕಾರಿ ಸಂಘಗಳ ಉಪನಿಬಂಧಕರಾದ ಸಂಗೀತಾ ಹಾಗೂ ತಾಲೂಕ ಅಧಿಕಾರಿ ಬಸಪ್ಪ ಗಾಳಿ ಅವರ ಸಮ್ಮುಖದಲ್ಲಿ ಅಧ್ಯಕ್ಷರಾಗಿ ರಾಮಚಂದ್ರಪ್ಪ ಶಿವಪ್ಪ ಬಡಿಗೇರ, ಉಪಾಧ್ಯಕ್ಷರಾಗಿ ಅನೀಲಕುಮಾರ ಎಂ. ಕಮ್ಮಾರ, ನಿರ್ದೇಶಕರಾಗಿ ಅಮರೇಶಪ್ಪ ಎನ್. ಬಡಿಗೇರ, ಉಮ್ಮಣ್ಣ ಎನ್. ಬಡಿಗೇರ, ಈರಪ್ಪ ಎಂ. ಕಮ್ಮಾರ, ಕಾಳೇಶ ಸಿ. ಬಡಿಗೇರ, ಮೌನೇಶ ಕೆ. ಬಡಿಗೇರ, ಶರಣಪ್ಪ ಹೆಚ್. ಬಡಿಗೇರ, ಶಾಶ್ವತಪ್ಪ ಎನ್. ಬಡಿಗೇರ, ಗಾಯತ್ರಿ ಎಂ. ಬಡಿಗೇರ, ರಾಜೇಶ್ವರಿ ವಿ. ಬಡಿಗೇರ ಅವರು ಅವರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ಕಾರ್ಯದರ್ಶಿ ರಾಮಣ್ಣ ಬಡಿಗೇರ ಬ್ಯಾಲಿಹಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ