Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಚುನಾವಣೆ ಬಗ್ಗೆ ಕಾಮೆಂಟ್: ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದ ಉಪೇಂದ್ರ

ಸುದ್ದಿಮೂಲ ವಾರ್ತೆ

ಬೆಂಗಳೂರು. ಮಾ.29: ರಾಜ್ಯದಲ್ಲಿ ಚುನಾವಣೆ ಘೋಷಣೆಯಾತ್ತಿದ್ದಂತೆ ಪ್ರಜಾಕೀಯ ಪಕ್ಷದ ನಾಯಕ ಮತ್ತು ನಟ ಉಪೇಂದ್ರ ಅವರು ಕೇಳಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಮೇ 10ರಂದು ಚುನಾವಣೆ ನಡೆಯುತ್ತದೆ. ಆದರೆ, ಮೇ 13ರಂದು ಫಲಿತಾಂಶ ಪ್ರಕಟವಾಗುತ್ತದೆ. ಮತ ಎಣಿಕೆಗೆ ಎರಡು ದಿನ ಬೇಕೆ? ಏಕೆಂದು ಬಲ್ಲವರು ತಿಳಿಸುತ್ತೀರಾ? ಎಂದು ಕಮೆಂಟ್ ಹಾಕಿದ್ದರು.

ಇದಕ್ಕೆ ತರಹೇವಾರಿ ಕಮೆಂಟ್‌ಗಳು ಬಂದಿವೆ. ಅಲ್ಲದೆ, ವಾಟ್ಸ್‌ಆ್ಯಪ್, ಪೇಸ್‌ಬುಕ್ ಮತ್ತು ವಿವಿಧ ಸಾಮಾಜಿಕ ಕಾಲತಾಣಗಳಲ್ಲಿ ಉಪೇಂದ್ರ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ.

* ಮಾರ್ಚ್‌ನಲ್ಲಿ ನಿಮ್ಮ ಚಿತ್ರ ಕಬ್ಜ ರಿಲೀಸ್ ಆಗಿದೆ. ಮೇ ನಲ್ಲಿ ಓಟಿಟಿಗೆ ಬರುತ್ತದೆ. ಇದಕ್ಕೆ ಎರಡು ತಿಂಗಳು ಸಮಯ ಬೇಕೆ ಏಕೆಂದು ತಿಳಿಸುವರಾ ಎಂಬ ಕಮೆಂಟ್ ಬಂದಿದೆ.

* ಓಟ್‌ ಹಾಕಿ ಹಾಕಿ ಮತಯಂತ್ರ ಬಿಸಿ ಆಗಿರುತ್ತದೆ ಅದಕ್ಕೆ ಕೂಲ್ ಆಗಬೇಕು

* ಎರಡು ದಿನ ಬಿಟ್ಟರೆ ಇವಿಎಂ ಚೇಂಜ್ ಮಾಡಲು ಸಾಧ್ಯ ಅದಕ್ಕೆ

* ಮರು ಮತದಾನದ ಅಗತ್ಯ ಇದ್ದರೆ ಅಲ್ಲೂ ಸಹ ಮತದಾನ ನಡೆದು ಮತಯಂತ್ರಗಳು ಎಣಿಕಾ ಕೇಂದ್ರ ತಲುಪಬೇಕು

* ಗುಡ್ಡಗಾಡು ಪ್ರದೇಶಗಳಲ್ಲಿನ ಮತಗಟ್ಟೆಯಿಂದ ಮತಯಂತ್ರಗಳು ಎಣಿಕಾ ಕೇಂದ್ರ ತಲುಪಬೇಕಾದರೆ ಬೆಳಗಾಗುತ್ತದೆ

* ಮತ ಎಣಿಕೆ ಮಾಡಬೇಕಾದರೆ ಕೆಲವು ದಾಖಲೆಗಳನ್ನು ಕ್ರೂಡೀಕರಿಸಬೇಕು. ಪಕ್ಷಗಳ ಪ್ರತಿನಿಧಿಗಳ ಎದುರಿನಲ್ಲಿ ಎಣಿಕೆಯಾಗಬೇಕು. ಇದೂ ಒಂದು ಪ್ರೋಸೆಸ್. ಅಷ್ಟೂ ಗೊತ್ತಿಲ್ಲವೇ ಉಪೇಂದ್ರ ನಿಮಗೆ. ನೀವೂ ಪಕ್ಷ ಕಟ್ಟಿದ್ದೀರಿ ಎಂದು ಕೆಲವರು ಕಾಲೆಳೆದಿದ್ದಾರೆ.

ಹೀಗೆ ತಮ್ಮ ಕಾಮೆಂಟ್ ಒಂದು ವಿಪರೀತ ಟ್ರೋಲ್ ಆಗುತ್ತಿದ್ದಂತೆ ಉಪೇಂದ್ರ ಮಧ್ಯಾಹ್ನದ ವೇಳೆಗೆ ಮತ್ತೊಂದು ಕಮೆಂಟ್ ಹಾಕಿದ್ದಾರೆ.

ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ…. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!

ವಾರೆ ವಾಹ್ … ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು…. ಎಂದು ಮರಳಿ ಕಾಲೆಳೆದಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ